ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್' ನಟಿ ತೃಪ್ತಿ ದಿಮ್ರಿಗೆ ಡಬಲ್ ಧಮಾಕಾ ಹೊಡೆದಿದೆ. ಆಗಿದ್ದೇನು?
ನಟ ರಣಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರ ಇದೇ 1ರಂದು ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ನಾಗಾಲೋಟದಿಂದ ಓಡುತ್ತಿದೆ. ನಿನ್ನೆ ಡಿಸೆಂಬರ್ ರ ಸೋಮವಾರದಂದು ₹39.9 ಕೋಟಿ ಕಲೆಕ್ಷನ್ ಮಾಡಿದ ನಂತರ, ಆರಂಭಿಕ ಅಂದಾಜಿನ ಪ್ರಕಾರ, ಅನಿಮಲ್ ಭಾರತದಲ್ಲಿ ಇದುವರೆಗೆ ₹241 ಕೋಟಿ ಗಳಿಸಿದೆ.
ಚಿತ್ರದಲ್ಲಿ ನಟಿ ರಶ್ಮಿಕಾ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಇನ್ನೋರ್ವ ನಟಿ ಸಂಪೂರ್ಣ ನಗ್ನಳಾಗಿದ್ದ ವಿಡಿಯೋ ವೈರಲ್ ಆಗಿತ್ತು. ಈಕೆಯ ಹೆಸರು ತೃಪ್ತಿ ಡಿಮ್ರಿ. ಸೆನ್ಸಾರ್ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್ರೂಮ್ ಸೀನ್ ಲೀಕ್ ಆಗಿರುವ ಬೆನ್ನಲ್ಲೇ, ತೃಪ್ತಿ ಡಿಮ್ರಿಯ ವಿಡಿಯೋ ಕೂಡ ವೈರಲ್ ಆಗಿದೆ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್ ಕಪೂರ್ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು. ಈಗ ಬೆಳ್ಳಿತೆರೆ ಮೇಲೆ ಆಫರ್ ಗಳು ಬರುತ್ತಿವೆ. ಆದರೆ ಸೆನ್ಸಾರ್ ಬಿಡುಗಡೆಗೂ ಮುನ್ನ ಅತಿಯಾದ ರೋಮ್ಯಾಂಟಿಕ್ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿತ್ತು. ಆದರೂ ಇದೆಲ್ಲದರ ಹೊರತಾಗಿ ತೃಪ್ತಿ ಅವರ ಗ್ಲಾಮರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅನಿಮಲ್ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತೃಪ್ತಿಗೆ ಡಬಲ್ ಲಾಟರಿ ಹೊಡೆದಿದೆ. ಅದೇನೆಂದರೆ, ಇಲ್ಲಿಯವರೆಗೆ ತೃಪ್ತಿ ಯಾರೆಂದು ಹೆಚ್ಚಿನ ಮಂದಿಗೆ ಗೊತ್ತಿರಲಿಲ್ಲ. ಇದೀಗ ಸಂಪೂರ್ಣ ಬೆತ್ತಲಾದ ದೃಶ್ಯ ವೈರಲ್ ಆಗುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ತೃಪ್ತಿ ದಿಮ್ರಿಗೆ (Tripti Dimri) ಫಾಲೋವರ್ಸ್ ಸಂಖ್ಯೆ ಜಾಸ್ತಿ ಆಗಿದ್ದಾರೆ. ಅನಿಮಲ್ ಚಿತ್ರ ಬಿಡುಗಡೆಯಾದ ಮೂರನೆಯ ದಿನಕ್ಕೇ ಫಾಲೋವರ್ಸ್ ಸಂಖ್ಯೆ ಡಬಲ್ ಆಗಿದ್ದು, ಈಕೆಗೆ ಸದ್ಯ 1.5 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದ ನಟಿಯೀಗ ಬೆತ್ತಲಾಗಿ ಎಲ್ಲವನ್ನೂ ಸಾಧ್ಯಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಅನಿಮಲ್ ಚಿತ್ರ ಬಿಡುಗಡೆಗೂ ಮೊದಲು ರಿಲೀಸ್ ಆಗಿದ್ದ ಹಾಡೊಂದು ಹಲ್ಚಲ್ ಸೃಷ್ಟಿಸಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಲಿಪ್ಲಾಕ್ ಸೀನ್ ನೋಡಿ ಫ್ಯಾನ್ಸ್ ಉಫ್ ಎಂದಿದ್ದರು. ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್ ಪತಿ ರಣಬೀರ್ ಜೊತೆ ದೀರ್ಘ ಲಿಪ್ಲಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಚಿತ್ರಕ್ಕೆ ಅಡಲ್ಟ್ ಸರ್ಟಿಫಿಕೇಸ್ ಕೊಟ್ಟಿದ್ದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಹಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಆ ದೃಶ್ಯಗಳೆಲ್ಲಾ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ರಣಬೀರ್ ಕಪೂರ್- ರಶ್ಮಿಕಾ ಬೆಡ್ರೂಮ್ ಸೀನ್ ಲೀಕ್: ಇನ್ನೇನ್ ಉಳಿಸಿದ್ಯಪ್ಪಾ ಎಂದು ಕೇಳಿದ ಫ್ಯಾನ್ಸ್