ಲಾಕ್‌ಡೌನ್‌ ಜೀವನ ನೆಮ್ಮದಿಯಾಗಿತ್ತು; ಹೊಸ ಹವ್ಯಾಸಗಳ ಬಗ್ಗೆ ರಿವೀಲ್ ಮಾಡಿದ ಇಶಾ ಕೊಪ್ಪಿಕರ್!

Published : Jun 04, 2022, 03:17 PM IST
ಲಾಕ್‌ಡೌನ್‌ ಜೀವನ ನೆಮ್ಮದಿಯಾಗಿತ್ತು; ಹೊಸ ಹವ್ಯಾಸಗಳ ಬಗ್ಗೆ ರಿವೀಲ್ ಮಾಡಿದ ಇಶಾ ಕೊಪ್ಪಿಕರ್!

ಸಾರಾಂಶ

ವಾಕಿಂಗ್, ಗಾರ್ಡನಿಂಗ್ ಎಂಜಾಯ್ ಮಾಡಿದ ಇಶಾ ಕೊಪ್ಪಿಕರ್ ಲಾಕ್‌ಡೌನ್‌ ಜೀವನ ಹೇಗಿತ್ತು ಎಂದು ಮೊದಲ ಬಾರಿ ರಿವೀಲ್ ಮಾಡಿದ್ದಾರೆ. 

ಸೂರ್ಯ ವಂಶ,ಓ ನನ್ನ ನಲ್ಲೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) 2011ರಲ್ಲಿ ಪಾದಾರ್ಪಣೆ ಮಾಡಿದ ನಟಿ ಇಶಾ ಕೊಪ್ಪಿಕರ್ (Isha Koppikar) ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪರ್ಸನಲ್ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿದ್ದ ಇಶಾ ಮೊದಲ ಬಾರಿಗೆ ಫ್ಯಾಮಿಲಿ ಬಗ್ಗೆ ಹಂಚಿಕೊಂಡಿದ್ದಾರೆ, ಅಲ್ಲದೆ ಕೊರೋನಾ ಲಾಕ್‌ಡೌನ್‌ ಸಮಯ ತಮ್ಮ ಜೀವನವನ್ನು ಬದಲಾಯಿಸಿದ್ದು ಹೇಗೆ ಎಂದು ಹೇಳಿದ್ದಾರೆ. 

ಹವ್ಯಾಸಗಳು: 

'ಲಾಕ್‌ಡೌನ್‌ನಲ್ಲಿ ಹವ್ಯಾಸ ಅಂತ ಯಾವುದು ಕಲಿತಿಲ್ಲ ಆದರೆ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದೆ. ತುಂಬಾ ಇಷ್ಟ ಪಟ್ಟು ಗಾರ್ಡನಿಂಗ್, ವಾಕಿಂಗ್, ವ್ಯಾಯಾಮ ಮತ್ತು ಮಕ್ಕಳ ಜೊತೆ ಆಟ ಎಲ್ಲವೂ ಮಾಡುತ್ತಿದೆ. ಬೆಳಗ್ಗೆ ಗಿಡಗಳಿಗೆ ನೀರು ಹಾಕುವುದು ಇಷ್ಟ ಆಗುತ್ತಿತ್ತು.ಇದೆಲ್ಲಾ ನೆಮ್ಮದಿ ಕೊಡುತ್ತಿತ್ತು.ಕೊರೋನಾ ಲಾಕ್‌ಡೌನ್‌ ರೂಲ್ಸ್‌ ಜಾರಿ ಆಗುತ್ತಿದ್ದಂತೆ ನಾನು ಪ್ರಯಾಣ ಮಾಡಲು ಶುರು ಮಾಡಿದೆ. ನನ್ನ ಪುತ್ರಿ ರಿಯಾನಾಗೆ ಆನ್‌ಲೈನ್‌ ಕ್ಲಾಸ್ ಶುರುವಾಗಿತ್ತು ಹೀಗಾಗಿ ಜೀವನ ಸುಲಭವಾಗಿತ್ತು. ಲಂಡನ್‌ನಲ್ಲಿ ಇದ್ದುಕೊಂಡು ಇಂಡಿಯಾ ಸಮಯ ಅಂದ್ರೆ ಮಧ್ಯರಾತ್ರಿ 3.30ಗೆ ಕ್ಲಾಸ್‌ ಅಟೆಂಡ್‌ ಮಾಡುತ್ತಿದ್ದಳು. ಜೀವನ ಚೆನ್ನಾಗಿತ್ತು' ಎಂದು ಇಶಾ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನಲ್ಲಿ ಮಾತನಾಡಿದ್ದಾರೆ.

ಸಿನಿಮಾ:

'ನಾನು ಒಟ್ಟು ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿರುವೆ. ಎರಡು ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಎರಡು ಸಿನಿಮಾ ಓಟಿಟಿಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ. 2019ರಿಂದ ನಾನ್‌ ಸ್ಟಾಪ್ ಚಿತ್ರೀಕರಣ ಮಾಡುತ್ತಿರುವೆ. “Simple living, high thinking” ನನ್ನ ಜೀವನದ ಮಂತ್ರ ಪಾಲಿಸುತ್ತೇನೆ' ಎಂದು ಹೇಳಿದ್ದಾರೆ.

ಒಂಟಿಯಾಗಿ ಭೇಟಿಯಾಗಲು ಕರೆದ ನಟ, ನಿರಾಕರಿಸಿದ ಇಶಾ ಕೊಪ್ಪಿಕರ್ ಸಿನಿಮಾದಿಂದ ಔಟ್‌!

ಜೀವನ ಪಾಠ:

'ನನಗೆ ಮಾತ್ರವ್ಲ ಎಲ್ಲರಿಗೂ ಸಿಂಪಲ್ ಜೀವನ ಹೇಳಿಕೊಟ್ಟಿದೆ ಕೊರೋನಾ ಲಾಕ್‌ಡೌನ್.  ಬೇಸಿಕ್‌ ವ್ಯವಸ್ಥೆ ಇದ್ದರೂ ನಾನು ಜೀವನ ಮಾಡಬಹುದು. ಮನೆಯಲ್ಲಿ ಇರುವುದು ತುಂಬಾ ಆರಾಮ್ ಆಗಿದೆ. ಹೊರಗಡೆ ಹೋಗುವುದಕ್ಕೆ ನಮಗೆ ಇಷ್ಟವಿಲ್ಲ. ಕೊರೋನಾದಿಂದ ಜನರು ಆರೋಗ್ಯ ಆಹಾರದ ಬಗ್ಗೆ ಹೆಚ್ಚಿನ ಕಾಳಹಿ ವಹಿಸುತ್ತಿದ್ದಾರೆ. ನನ್ನ ಪ್ರಕಾರ ಎರಡು ವರ್ಷಗಳ ಕಾಲ ಮನೆಯಲ್ಲಿ ಸಮಯ ಕಳೆದಿರುವೆ, ಹೀಗೆ ಎರಡು ವರ್ಷ ಮಾಡಿದರೆ ಜನರು ಹೊಸ ಜೀವನ ಶೈಲಿಗೆ ಸೆಟ್ ಆಗುತ್ತಾರೆ. ತಮ್ಮಲ್ಲಿರುವ ಹೊಸ ಕಲೆಯನ್ನು ಅನೇಕರು ಕಂಡುಕೊಂಡಿದ್ದಾರೆ'ಎಂದಿದ್ದಾರೆ ಇಶಾ.

ಬೇಸಗೆಯಲ್ಲ, ಸದ್ಯ ಬಿಸಿ ಹೆಚ್ಚಿಸಿರೋದು ನಟಿಯ ಸ್ವಿಮ್ ಸೂಟ್ ಲುಕ್

'ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಾನು ಫ್ಯಾಮಿಲಿ ಮತ್ತು ನನ್ನ ಆಪ್ತರಿಗೆ ಹೆಚ್ಚಿನ ಸಮಯ ಕೊಟ್ಟೆ. ನಮಗೆ ಮನೆಯಲ್ಲಿ ಮಾಡಿರುವ ಅಡುಗೆ ತುಂಬಾ ಇಷ್ಟ ಆಗುತ್ತದೆ. ಕೊರೋನಾ ಇರಲಿ ಬಿಡಲಿ ಮನೆ ಊಟನೇ ಬೆಸ್ಟ್‌ ಹೊರಗಡೆ ತಿನ್ನಬಾರದು. ಕೊರೋನಾದಲ್ಲಿ ವರ್ಕೌಟ್ ಮಾಡುವುದನ್ನು ಮಿಸ್ ಮಾಡಿಕೊಂಡೆ. ಲಾಕ್‌ಡೌನ್‌ ರಿಲೀಸ್ ಮಾಡುತ್ತಿದ್ದಂತೆ ನಾನು ವರ್ಕೌಟ್ ಶುರು ಮಾಡಿದೆ. ಲಾಕ್‌ಡೌನ್‌ನಿಂದ ಅತಿ ಹೆಚ್ಚು ಮಿಸ್ ಮಾಡುವುದು ಶುದ್ಧ ಗಾಳಿ, ಕಡಿಮೆ ಟ್ರಾಫಿಕ್. ನನ್ನ ತಂದೆ ಹೇಳುತ್ತಿದ್ದರು ಲಾಕ್‌ಡೌನ್‌ನಲ್ಲಿ ಮುಂಬೂ 50-60ರ ದಶಕದ ರೀತಿ ಇತ್ತು' ಎಂದು ಇಶಾ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?