ಬ್ಯಾಂಡ್ ಬಾಜಾ ಬಾರಾತ್ ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟ ರಣ್ವೀರ್ ಸಿಂಗ್...
ಹಿಂದಿ ಚಿತ್ರರಂಗದ (Bollywood) ಮೋಸ್ಟ್ ಹ್ಯಾಂಡ್ಸಮ್, ರೊಮ್ಯಾಂಟಿಕ್ ಕಮ್ ಎನರ್ಜಿಟಿಕ್ ನಟ ರಣ್ವೀರ್ ಸಿಂಗ್ (Ranveer Singh) ಬ್ಯಾಂಡ್ ಬಾಜಾ ಬಾರಾತ್ ಸಿನಿಮಾ ಮೂಲಕ ತಮ್ಮ ಬಣ್ಣದ ಜರ್ನಿ ಆರಂಭಿಸಿದ್ದರು. ಅನುಷ್ಕಾ ಶರ್ಮಾ (Anushka Sharma) ಜೋಡಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಸಿನಿ ರಸಿಕರು ಮತ್ತು ನೆಟ್ಟಿಗರ ಗಮನ ಸೆಳೆಯಿತ್ತು. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿನ ಮಿಸ್ ಮಾಡಲು ಯಾರಿಗೂ ಇಷ್ಟವಿಲ್ಲ..ಹೀಗಾಗಿ ಇವರಿಬ್ಬರೂ ಮತ್ತೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
ಆರಂಭದಲ್ಲಿ ಇಬ್ಬರು ಪ್ರೀತಿಸುತ್ತಿದ್ದಾರೆ ಎಂದು ಗಾಳಿ ಮಾತು ಹಬ್ಬಿತ್ತು. ಪ್ರೀತುಸತ್ತಿದ್ದೀವಿ ಎಂದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ ಹಾಗೇ ಪ್ರೀತಿಸುತ್ತಿಲ್ಲ ಎಂದು ಕೂಡ ಹೇಳಿಲ್ಲ ಹೀಗಾಗಿ ಅಸಲಿ ಸತ್ಯ ಜನರಿಗೆ ತಿಳಿಯಲಿಲ್ಲ. 2011ರಲ್ಲಿ ನಡೆದ ಸಿಮಿ ಸೆಲೆಕ್ಟ್ ಇಂಡಿಯಾ ಮೋಸ್ಟ್ ಡಿಸೈಯರಬಲ್ ಸಂದರ್ಶನದಲ್ಲಿ ರಣ್ವೀರ್ ತಮ್ಮ ಸಿನಿ ಜರ್ನಿ ಆರಂಭದ ದಿನಗಳು, ಮೊದಲ ಸಿನಿಮಾ ಮತ್ತು ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದಾರೆ.
ರಣ್ವೀರ್ ಮಾತು:
'ನಾನು 10 ತಿಂಗಳುಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿರುವೆ. ಆ ಸಮಯಲ್ಲಿ ನನಗೆ ಅನೇಕ ಆಫರ್‌ಗಳು ಹರಿದು ಬಂತು ಆದರೆ ನಾನು ಯಾವುದು ಒಪ್ಪಿಕೊಂಡಿಲ್ಲ. ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ನನಗೆ ಅಫರ್ ಬಂತು ಆದರೂ ನನ್ನ ಕನಸಿನ ಬ್ರೇಕ್ ಬೇಕಿತ್ತು. ಅಲ್ಲದೆ ಕ್ರೇಜಿಯಾಗಿರುವ ಕಾಸ್ಟಿಂಗ್ ಕೌಚ್ ಆಫರ್ ಕೂಡ ಬಂದಿತ್ತು' ಎಂದು ರಣ್ವೀರ್ ಸಿಂಗ್ ಮಾತನಾಡಿದ್ದಾರೆ.
'ನನ್ನ ಜೀವನ ಹೋರಾಟದ ಅವಧಿಯು ಆರ್ಥಿಕ ಹಿಂಜರಿತದೊಂದಿಗೆ ಹೊಂದಿಕೆಯಾಗುತ್ತಿದ್ದಂತೆ ವಿಷಯಗಳು ನಿಜವಾಗಿಯೂ ಕೆಟ್ಟದಾಗಿದೆ. ತುಂಬಾ ಕಷ್ಟ ದಿನಗಳನ್ನು ಎದುರಿಸಿರುವೆ. ನನ್ನ ಕುಟುಂಬ ಕೂಡ ಆರ್ಥಿಕವಾಗಿ ಗಟ್ಟಿ ಇರಲಿಲ್ಲ ಆದರೆ ನನ್ನ ಜರ್ನಿ ಪೂರ್ತಿ ಸಪೋರ್ಟ್ ಅಗಿ ನಿಂತವರು ಅವೇ' ಎಂದು ರಣ್ವೀರ್ ಹೇಳಿದ್ದಾರೆ.
'ಯಶ್ ರಾಜ್ ಫಿಲ್ಮಂ ನಿರ್ಮಾಣ ಸಂಸ್ಥೆ ಆರಂಭದಿಂದಲ್ಲೂ ಕೆಲಸ ಮಾಡಿರುವ ರೀತಿ ವಿಭಿನ್ನವಾಗಿದೆ. ಎಂದಿಗೂ ಹೊಸಬರನ್ನು ಹೀರೋ ಮಾಡಿರಲಿಲ್ಲ ಆದರೆ ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು. ಅನುಷ್ಕಾ ಶರ್ಮಾ ನನ್ನ ಕೋ ಸ್ಟಾರ್ ಆಗಿ ಅವರಿಗೆ ಇರುವ ಅನುಭವ ನೋಡಿದರೆ ನನಗಿಂತ ಒಳ್ಳೆಯ ನಟ ನಾಯಕನಾಗಿ ಅಥವಾ ಜೋಡಿಯಾಗಿ ಸಿಗಬೇಕು ಅನಿಸುತ್ತದೆ. ಅನುಷ್ಕಾ ಜೊತೆ ನಾನು ಮತ್ತೆ ಸಿನಿಮಾ ಮಾಡಲು ರೆಡಿಯಾಗಿರುವೆ. ಅನೇಕರು ನಮ್ಮ ರೊಮ್ಯಾನ್ಸ್ ಇಷ್ಟ ಪಟ್ಟರು ಹೀಗಾಗಿ ನಾನು ಅನುಷ್ಕಾ ಜೊತೆ ಮತ್ತೆ ಸೆಕ್ಸ್ ಸೀನ್ ಮಾಡಲು ರೆಡಿಯಾಗಿರುವೆ ಏಕೆಂದರೆ ಆಕೆ ಅಷ್ಟು ಒಳ್ಳೆಯ ನಟಿ, ಪಾತ್ರಕ್ಕೆ ಸಪೋರ್ಟ್ ಮಾಡುತ್ತಾರೆ' ಎಂದಿದ್ದಾರೆ ರಣ್ವೀರ್.
ಈ ಹೇಳಿಕೆ ನೀಡಿ ಹಲವು ವರ್ಷಗಳು ಕಳೆದಿದೆ. ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ವಿರಾಟ್ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿ ಮುದ್ದಾಗ ಹೆಣ್ಣು ಮಗಳನ್ನು ಬರ ಮಾಡಿಕೊಂಡಿದ್ದಾರೆ.
ಮದರ್‌ವುಡ್ ಎಂಜಾಯ್ ಮಾಡಿದ ನಂತರ ಅನುಷ್ಕಾ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಮೇ 30ರಿಂದ ಚಕ್ಡಾ ಎಕ್ಸ್ಪ್ರೆಸ್ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ ಎನ್ನಲಾಗಿದೆ. 'ಹೌದು ಅನುಷ್ಕಾ ಶರ್ಮಾ ಚಕ್ಡಾ ಎಕ್ಸ್ಪ್ರೆಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಚಿತ್ರೀಕರಣ ಆರಂಭವಾಗಿದೆ. ತಾಯಿಯಾದ ನಂತರ ಅನುಷ್ಕಾ ಮಾಡುತ್ತಿರುವ ಮೊದಲ ಸಿನಿಮಾ ಆಗಿರುವ ಕಾರಣ ಯಾವ ರೀತಿ ಗಾಸಿಪ್ ಆಗಲು ನಾನು ಅವಕಾಶ ಕೊಡುವುದಿಲ್ಲ. ವೇಗದ ಬೌಲರ್ ಜೂಲನ್ ಗೋಸ್ವಾಮಿ ಜೀವನ ಕಥೆ ಇದಾಗಿರುವ ಕಾರಣ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ' ಎಂದು ಡಿಎನ್‌ಎ ಸೈಟ್‌ನಲ್ಲಿ ವರದಿಯಾಗಿದೆ.