
ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿವೊಂದರಲ್ಲಿ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ 50 ಜನರಲ್ಲಿ 35 ಜನರ ಸ್ಯಾಂಪಲ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. 35 ಜನರಲ್ಲಿ 6 ಜನರದ್ದು ಮಾತ್ರ ಪಾಸಿಟಿವ್ ಬಂದಿದೆ. 6 ಜನರಲ್ಲಿ ಸಿದ್ಧಾಂತ್ ಕಪೂರ್ ಕೂಡ ಒಬ್ಬರು. ಆದರೆ ಪೊಲೀಸರು ಬಂಧಿಸಿ ಎರಡು ಮೂರು ದಿನಕ್ಕೆ ಸಿದ್ಧಾಂತ್ ಜಾಮೀನು ಪಡೆದುಕೊಂಡು ತಮ್ಮ ಊರಿಗೆ ಪ್ರಯಾಣ ಮಾಡುತ್ತಿದ್ದಾರೆ.
ಡ್ರಗ್ಸ್ ಜಾಲದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಮೊದಲ ಬಾರಿ ಸಿದ್ಧಾಂತ್ ಘಟನೆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. 'ನಾನು ಡ್ರಗ್ಸ್ ಸೇವಿಸಿಲ್ಲ ಆದರೆ ನನ್ನ ಸ್ನೇಹಿತರು ಪಾನೀಯಗೆ ಮಿಕ್ಸ್ ಮಾಡಿ ಕೊಟ್ಟರು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ. ನಾನು ಹೋಟೆಲ್‌ನಲ್ಲಿ ಇದ್ದಾಗಲೇ ತನಿಖೆ ಆರಂಭವಾಗಿತ್ತು. ಪೊಲೀಸರ ತನಿಖೆಗೆ ನಾನು ಸಹಕಾರ ನೀಡುತ್ತಿರುವೆ. ಬೆಂಗಳೂರು ಪೊಲೀಸರು ತುಂಬಾ ಒಳ್ಳೆಯವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವ ಮೂಲಕ ಅನೇಕ ಜೀವನಗಳನ್ನು ಉಳಿಸಬಹುದು'ಎಂದು ಸಿದ್ಧಾಂತ್ ಹೇಳಿಕೆ ಕೊಟ್ಟಿದ್ದಾರೆ.
'ಕಳೆದ ರಾತ್ರಿ ಐವರಿಗೆ ಬೇಲ್ ಕೊಟ್ಟು ಕಳುಹಿಸಲಾಗಿದೆ. ವಿಚಾರಣೆಗೆ ಹಾಜರ್ ಅಗಲು ನೋಟಿಸ್ ನೀಡುತ್ತೇವೆ. ಇಂದು ಸಿದ್ಧಾರ್ಥ್ ವಿಚಾರಣೆಗೆ ಬಂದಿದ್ದಾರೆ. ನಮ್ಮ ಉದ್ದೇಶ ಪೆಡ್ಲರ್‌ರನ್ನು ಹಿಡಿದು ಜಾಲ ಬೇಧಿಸುವುದು. ಆ ಕೆಲಸವನ್ನು ನಾವು ಮಾಡುತ್ತೀವಿ. ಹೋಟೆಲ್‌ಗೆ ಅಂದು ಬಂದ ಗೆಸ್ಟ್ ಲಿಸ್ಟ್ ಪಡೆದುಕೊಂಡಿದ್ದೀವಿ. ಶಕ್ತಿ ಕಪೂರ್ ಪುತ್ರನನ್ನು bullzeye ಡಿಜೆ ಎಂದು ಕರೆಯಲಾಗುತ್ತದೆ. bullzeye ಡಿಜೆ ಫಾರ್ಟಿಗೆ ಬರ್ತಾರೆ ಅಂತ ಪಾಂಪ್ಲೇಟ್ ಸರ್ಕ್ಯೂಲೇಟ್ ಮಾಡಿದ್ದಾರೆ. ಈ ಪಾರ್ಟಿನ indivibe ಮತ್ತು la production ಪಾರ್ಟಿ ಆಯೋಜನೆ ಮಾಡಿದ್ದರು. ಡ್ರಗ್ಸ್ ಪಡೆದಿರುವುದಾಗಿ ಸಿದ್ಧಾಂತ್ ಒಪ್ಪಿಕೊಳ್ಳುತ್ತಿಲ್ಲ.ಯಾರೋ ಒಂದು ಡ್ರಿಂಕ್ ಕೊಟ್ಟರು ಅದರಲ್ಲಿ ಡ್ರಗ್ಸ್ ಇರಬಹುದು ಎನ್ನುತ್ತಿದ್ದಾರೆ ವಿಚಾರಣೆಯಲ್ಲಿ. ಆ ಹೋಟೆಲ್‌ಗೆ ಸಿದ್ಧಾಂತ್ ಮೂರು ಸಲ ಬಂದಿದ್ದಾರೆ. ಬೆಂಗಳೂರಿಗೆ 40ಕ್ಕೂ ಹೆಚ್ಚು ಸಲ ಬಂದು ಹೋಗಿದ್ದಾರೆ' ಎಂದು ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ಬೆಂಗಳೂರು ರೇವ್ ಪಾರ್ಟಿ: ಟಾಲಿವುಡ್ ಸುಪ್ರಸಿದ್ಧ ನಟಿಯ ತಮ್ಮನಿಗೆ ಪೊಲೀಸರಿಂದ ಗಾಳ
ಸಿದ್ಧಾಂತ್ ಕಪೂರ್ ಮತ್ತು ಮೂವರು ಸ್ನೇಹಿತರ ಮೊಬೈಲ್‌ನ ಪೊಲೀಸರು ಸೀಜ್ ಮಾಡಿದ್ದಾರೆ. ಮೊಬೈಲ್ ಡಾಟಾ ಪಡೆದುಕೊಂಡು ವಿಚಾರಣೆ ಮುಂದುವರೆಸಲಿದ್ದಾರೆ. ಐಷಾರಾಮಿ ಹೋಟೆಲ್ ಮತ್ತು ಪಾರ್ಟಿ ಆಯೋಜಿಸಿದವರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಅಖಿಲ್ ಸೋನಿ,ಹರ್ಜೋತ್ ಸಿಂಗ್,ಹನಿ ಮತ್ತು ಫೋಟೋಗ್ರಾಫರ್ ಅಖಿಲ್‌ರನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದಾರೆ. 7gm MDMA ಕ್ರಿಸ್ಟ್‌ಲ್ ಮತ್ತು 10gm ಗಾಂಜಾನ ಪೊಲೀಸರು ಪಾರ್ಟಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Drugs Party ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ 150 ಸೆಲೆಬ್ರಿಟಿಗಳು ಭಾಗಿ?
'ಆಪಾದಿತ ಅಪರಾಧಗಳು ಸ್ವಭಾವತಃ ಜಾಮೀನು ಪಡೆಯುತ್ತವೆ. ನಿನ್ನೆ ಸಿದ್ಧಾಂತ್ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ. ಇಂದು ವಿಚಾರಣೆಯಲ್ಲಿದ್ದರು. ಸಿದ್ಧಾಂತ್ ಹೇಳಿಕೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಚಾರಣೆಗೆ ಸಿದ್ಧಾಂತ್ ಸಹಕರಿಸುತ್ತಾರೆ. ಪೊಲೀಸರು ಹೇಳಿದಾಗಲೆಲ್ಲಾ ವಿಚಾರಣೆಗೆ ಬರುತ್ತಾರೆ' ಎಂದು ಸಿದ್ಧಾಂತ್ ವಕೀಲರಾದ ಪ್ರವೀಣ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.