'ಅನಿಮಲ್' ರಿಲೀಸ್ ಆಗ್ತಿದ್ದಂತೆಯೇ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ 'ಜಮಾಲ್ ಕುಡು’ ಬೆಡಗಿ ಯಾರು?
'ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್ ಚಿತ್ರ ನಾಗಾಲೋಟದಿಂದ ಓಡುತ್ತಲಿದೆ. ಈ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇದೇ ಡಿಸೆಂಬರ್ 1 ರಂದು ಬಿಡುಗಡೆಯಾಗಿರುವ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಜಗತ್ತಿನಾದ್ಯಂತ 800 ಕೋಟಿ ರೂಪಾಯಿ ದಾಟಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದ್ದರೂ ಮುನ್ನುಗ್ಗಿ ಸಾಗುತ್ತಿದೆ.
ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ‘ಜಮಾಲ್ ಕುಡು…’. ಈ ಹಾಡು ಅನಿಮಲ್ ಚಿತ್ರ ರಿಲೀಸ್ ಆದ ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ. ಇದರ ರೀಲ್ಸ್ ಮಾಡುವವರು ಹೆಚ್ಚಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಈ ಹಾಡಿನ ರೀಲ್ಸ್ ಮಾಡುತ್ತಿದ್ದು, ಈ ಹಾಡಿಗೆ ಅಷ್ಟು ಫಿದಾ ಆಗಿದ್ದಾರೆ. ಅಂದಹಾಗೆ, ಅನಿಮಲ್ನಲ್ಲಿ ಈ ಹಾಡಿಗೆ ನಟಿಸಿದ್ದು, ನಟ ಬಾಬಿ ಡಿಯೋಲ್. ತಲೆಯ ಮೇಲೆ ಮದ್ಯದ ಬಾಟಲಿ ಇಟ್ಟು ಸಿಗರೇಟ್ ಸೇವಿಸುತ್ತಾ ಬಾಬಿ ಡಿಯೋಲ್ ಈ ಹಾಡಿಗೆ ನರ್ತಿಸಿದ್ದು, ಇದನ್ನು ನೋಡಿದವರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಅಂದಹಾಗೆ ಈ ಹಾಡು ಸುಮಾರು ಒಂದು ಶತಮಾನದಷ್ಟು ಹಳೆಯದು ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಈ ಹಾಡನ್ನು ಮೊದಲು 1950 ರಲ್ಲಿ ಶಾಲೆಯಲ್ಲಿ ಹಾಡಲಾಗಿತ್ತು. ಇದು ಪ್ರಸಿದ್ಧ ಇರಾನಿನ ಕವಿ ಬಿಜಾನ್ ಸ್ಮಾಂಡರ್ ಅವರ ಕವಿತೆಯ ಅನುವಾದವಾಗಿದೆ ಎಂದು ಹೇಳಲಾಗುತ್ತದೆ. ‘ಜಮಾಲ್ ಜಮಾಲೆಕ್ ಜಮಾಲು ಜಮಾಲ್ ಕುಡು,’ ಹಿಂದಿಯಲ್ಲಿ ಹಾಡಿನ ಅರ್ಥ ‘ಓ ಮೈ ಲವ್, ಮೈ ಲವ್, ಮೈ ಲವ್’ ಎಂದು.
ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್
ಅಂದಹಾಗೆ, ಈ ಹಾಡಿನಲ್ಲಿ ನಟಿಯೊಬ್ಬಳು ಕಾಣಿಸಿಕೊಂಡಿದ್ದಾರೆ. ಅವರು ಹಾಡಿಗೆ ಮಾಡಿರುವ ಡ್ಯಾನ್ಸ್ನಿಂದಾಗಿ ಅವರು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅಂದಹಾಗೆ ಈ ಹುಡುಗಿಯ ಹೆಸರು ತನ್ನಾಜ್ ದಾವೂದಿ. ‘ಜಮಾಲ್ ಕುಡು’ ಬೆಡಗಿ ಎಂದೇ ಈಗ ಎಲ್ಲರೂ ಈಕೆಯನ್ನು ಕರೆಯುತ್ತಿದ್ದಾರೆ. ಈ ಚಿತ್ರದಲ್ಲಿ ತೃಪ್ತಿ ಡಿಮ್ರಿ ಸಂಪೂರ್ಣವಾಗಿ ನಗ್ನರಾಗಿ ಕಾಣಿಸಿಕೊಂಡು ರಾತ್ರೋರಾತ್ರಿ ಫೇಮಸ್ ಆಗಿ, ನ್ಯಾಷನಲ್ ಕ್ರಷ್ ಎನಿಸಿಕೊಂಡು, ಸೂಪರ್ಸ್ಟಾರ್ ಪಟ್ಟಕ್ಕೇರಿದರೆ ಅದೇ ಇನ್ನೊಂದೆಡೆ ತನ್ನಾಜ್ ಅವರು ಈ ಹಾಡಿನಿಂದ ಫೇಮಸ್ ಆಗುತ್ತಿದ್ದಾರೆ. ಅಂದಹಾಗೆ ತನ್ನಾಜ್ ಇರಾನ್‌ನ ರಾಜಧಾನಿ ಟೆಹ್ರಾನ್ ನವರು. ಇವರು ಹಿನ್ನೆಲೆ ಡ್ಯಾನ್ಸರ್ ಆಗಿ ಫೇಮಸ್ ಆದವರು. ಹಲವಾರು ಕಲಾವಿದರ ಜೊತೆ ಡ್ಯಾನ್ಸ್ಗೆ ಭರ್ಜರಿ ಸ್ಟೆಪ್ ಹಾಕಿದರೂ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಇದಾಗಲೇ ಇವರು, ಜಾನ್ ಅಬ್ರಹಾಂ, ವರುಣ್ ಧವನ್, ನೋರಾ ಫತೇಹಿ ಸೇರಿದಂತೆ ಅನೇಕ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಈ ಹಾಡಿನಿಂದ ಇದೀಗ ಭಾರಿ ಫೇಮಸ್ ಆಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿಯೂ ಈಕೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ. ‘ಅನಿಮಲ್’ ಚಿತ್ರದ ನಿರ್ದೇಶಕರಿಗೆ ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ಎಂದಿದ್ದಾರೆ. ‘ಇರಾನಿಯನ್ ಆಗಿರುವುದರಿಂದ, ಬಾಬಿ ಡಿಯೋಲ್ ಅವರೊಂದಿಗೆ ಕೆಲಸ ಮಾಡುವುದು ಗೌರವವಾಗಿದೆ. ಕಾಸ್ಟಿಂಗ್ ತಂಡಕ್ಕೆ ಮತ್ತು ನನಗೆ ಈ ಅವಕಾಶವನ್ನು ನೀಡಿದ ಸಂದೀಪ್ ರೆಡ್ಡಿ ವಂಗ ಅವರಿಗೆ ತುಂಬಾ ಧನ್ಯವಾದಗಳು. ನನ್ನ ಎಲ್ಲಾ ಆತ್ಮೀಯ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳೂ ಧನ್ಯವಾದಗಳು. ನಿಮ್ಮೆಲ್ಲರಿಂದ ನಾನು ತುಂಬಾ ಸುಂದರವಾದ ಸಂದೇಶಗಳನ್ನು ಸ್ವೀಕರಿಸಿದ್ದೇನೆ! ಕೊನೆಯದಾಗಿ ಈ ಹಾಡನ್ನು ವೈರಲ್ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು ಲವ್ ಯು…’ತನಾಜ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್ ಹಖ್ ರೊಮ್ಯಾಂಟಿಕ್ ವ್ಯಕ್ತಿ ಎಂದ ಬಾಬಿ ಡಿಯೋಲ್!