ವೈಭೋಗ ಜೀವನದ ದುರಾಸೆಗೆ ಬಿದ್ದು ವಂಚಕನ ಬಲೆಗೆ: ತನ್ನ ತಪ್ಪಿಲ್ಲವೆಂದು ಕೋರ್ಟ್​ಗೆ ರಾ ರಾ ರಕ್ಕಮ್ಮ ಬೆಡಗಿ!

By Suvarna News  |  First Published Dec 19, 2023, 4:13 PM IST

ಕೋಟಿ ಕೋಟಿ ಬೆಲೆಬಾಳುವ ಉಡುಗೊರೆ ಕೊಡುತ್ತಿದ್ದ ಸುಕೇಶ್​ನ ಬಲೆಗೆ ಬಿದ್ದು ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಈಗ ಕೋರ್ಟ್​ ಅಲೆಯುತ್ತಿದ್ದಾರೆ. ಆಗಿದ್ದೇನು? 
 


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Monet Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದು ತಗ್ಲಾಕ್ಕೊಂಡಿರೋ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೇಸ್​ ಇನ್ನೂ ಮುಗಿದಿಲ್ಲ. ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೀಯುವಂತಾಗಿದೆ ಜಾಕ್ವೆಲಿನ್​. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್​ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್​ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.

 ಸುಕೇಶ್​ ಮಾಡಿದ 200 ಕೋಟಿ ರೂ. ವಂಚನೆ ಕೇಸ್​ನಲ್ಲಿ ಜಾಕ್ವೆಲಿನ್​ ಕೂಡ ಭಾಗಿ ಆಗಿದ್ದರು ಎಂಬ ಅನುಮಾನ ಇದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್​ ಚಂದ್ರಶೇಖರ್​ ಅರೆಸ್ಟ್​ ಆದ ಬಳಿಕ ಒಂದಷ್ಟು ಫೋಟೋಗಳು ಬಹಿರಂಗ ಆಗಿದ್ದವು. ಸುಕೇಶ್​ ಚಂದ್ರಶೇಖರ್​ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಬಹಳ ಆಪ್ತವಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಲೀಕ್​ ಆದವು. ಆ ಬಳಿಕ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಸಂಕಷ್ಟ ಹೆಚ್ಚಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಜಾರಿ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಸಹ- ಆರೋಪಿಯಾಗಿದ್ದಾರೆ. ಇದರ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯವು ಎಫ್​ಐಆರ್​ನಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಹೆಸರನ್ನು ಸೇರಿಸಿದೆ. 

Tap to resize

Latest Videos

ರಾಹುಲ್​ ಗಾಂಧಿಯನ್ನು ಮದ್ವೆಯಾಗುವೆ ಎಂದಿದ್ದ ನಟಿ ಶೆರ್ಲಿನ್ ಈಗ 2ನೇ ಪತ್ನಿ ಬಗ್ಗೆ ಮಾತಾಡಿದ್ದಾರೆ ಕೇಳಿ...!

ಆದರೆ ತಮ್ಮ ವಿರುದ್ಧದ ಎಫ್​ಐಆರ್​ ರದ್ದು ಮಾಡಬೇಕು ಎಂದು ಕೋರಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ದೆಹಲಿ ಹೈಕೋರ್ಟ್​ಗೆ  ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಮೊದಲು ದೆಹಲಿ ಪೊಲೀಸರು ದಾಖಲಿಸಿದ್ದ ಈ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಸಾಕ್ಷಿಯಾಗಿ ಹೆಸರಿಸಲಾಗಿತ್ತು.‌ಆರೋಪಿ ಸುಕೇಶ್, ರೆಲಿಗೇರ್ ಎಂಟರ್‌ಪ್ರೈಸಸ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ಹಣ ಸುಲಿಗೆ ಮಾಡುತ್ತಿದ್ದನು ಎಂದು ಆರೋಪಿಸಿ, ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ  ವಂಚನೆ ಪ್ರಕರಣ ದಾಖಲಿಸಿತ್ತು. ಆನಂತರ ಈ ಪ್ರಕರಣ ಇಡಿ ಅಂಗಳ ತಲುಪಿತು.

ಇದೀಗ ಸಂಕಷ್ಟದಲ್ಲಿ ಸಿಲುಕಿರುವ ನಟಿ, ಸುಕೇಶ್​ ಚಂದ್ರಶೇಖರ್​ ಮಾಡಿದ ಕುತಂತ್ರದಲ್ಲಿ ತಾವು ಸಂತ್ರಸ್ತೆ ಆಗಿರುವುದಾಗಿ ಹೇಳಿದ್ದಾರೆ.  ವಂಚನೆಯಿಂದ ಹಣ ಗಳಿಸುವಲ್ಲಿ ಸುಕೇಶ್​ ಮಾಡಿದ ಅಪರಾಧಗಳಿಗೆ ತಾವು ಸಹಾಯ ಮಾಡಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್​ 3 ಮತ್ತು 4ರಲ್ಲಿ ಅವರಿಗೆ ಶಿಕ್ಷೆ ಆಗಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆರೋಪಿ ಸುಕೇಶ್‌ಗೆ ತಾನು ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ, ಅಷ್ಟಕ್ಕೂ ಈ ಪ್ರಕರಣದಲ್ಲಿ ಜಾಕ್ವೆಲಿನ್ ಅವರನ್ನು ಸಾಕ್ಷಿಯಾಗಿ ಹೆಸರಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ರಶ್ಮಿಕಾ ಮಂದಣ್ಣ ಲೈಫ್​ಗೆ ಎಂಟ್ರಿ ಕೊಟ್ಟವರಾರು? ನಿಗೂಢ ಪೋಸ್ಟ್​ ಹಾಕಿ ಫ್ಯಾನ್ಸ್​ ತಲೆಗೆ ಹುಳಬಿಟ್ಟ ನಟಿ

click me!