
ರಶ್ಮಿಕಾ ಮಂದಣ್ಣ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾರಂಗಗಳಲ್ಲಿ ಬ್ಯುಸಿ ಆಗಿದ್ದು ಒಂದಲ್ಲ ಒಂದು ವಿಷಯದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಕೆಲ ದಿನಗಳ ಹಿಂದೆ ಶುಭ್‌ಮನ್ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದಾಗ (Sachin Tendulkar) ಪುತ್ರಿ ಸಾರಾ (Sara) ಹೆಸರು ಟ್ರೆಂಡ್ ಆಗಿತ್ತು. ಇನ್ನು ಲಂಡನ್ ಕೆಫೆವೊಂದರಲ್ಲಿ ಶುಭ್‌ಮನ್ ಕಾಫಿ ಹೀರುತ್ತಾ ಕ್ಲಿಕ್ಕಿಸಿಕೊಂಡಿದ್ದ ಫೋಟೊ ಶೇರ್ ಮಾಡಿದ್ದರು. ಇದರ ಬೆನ್ನಲ್ಲೇ ಅದೇ ಕೆಫೆಯಲ್ಲಿ ಅದೇ ಜಾಗದಲ್ಲಿ ಸಾರಾ ಕ್ಲಿಕ್ಕಿಸಿಕೊಂಡಿದ್ದ ಫೋಟೋ ತೋರಿಸಿ ಕಾಪಿ ಎಂದಿದ್ದರು. ಇಬ್ಬರು ಒಟ್ಟಿಗೆ ಹೋಗಿದ್ದಾರೆ. ಆಗ ತೆಗೆದುಕೊಂಡಿರುವ ಫೋಟೊ ಅಂತೆಲ್ಲಾ ಕಮೆಂಟ್ ಮಾಡಿದ್ದರು. ಆದರೆ ಇದೀಗ ಇವರ ಹೆಸರು ರಶ್ಮಿಕಾ ಮಂದಣ್ಣ ಜೊತೆ ಕೇಳಿಬಂದಿದೆ. ಸಾರಾ ತೆಂಡೂಲ್ಕರ್ ಸುದ್ದಿಗೆ ಗಪ್ಚುಪ್ ಆಗಿದ್ದ ಶುಭ್‌ಮನ್ ಗಿಲ್ ಅವರು ರಶ್ಮಿಕಾ ಹೆಸರಿನ ಜೊತೆ ತಮ್ಮ ಹೆಸರು ಸೇರಿಕೊಂಡಿರುವುದಕ್ಕೆ ಕೆಂಡಾಮಂಡಲರಾಗಿದ್ದಾರೆ!
ಅಷ್ಟಕ್ಕೂ ಆಗಿದ್ದೇನೆಂದರೆ, ಶುಭ್‌ಮನ್ ಗಿಲ್ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಮದುವೆ ಆಗುವ ಪ್ರಸ್ತಾವನೆಯನ್ನು ಇಟ್ಟಿದ್ದಾರೆ ಎಂಬುದಾಗಿ ಕೆಲ ದಿನಗಳಿಂದ ಭಾರಿ ಸುದ್ದಿಯಾಗಿದೆ. ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಸಂದರ್ಶಕರು ನಿಮ್ಮ ನೆಚ್ಚಿನ ಕ್ರಶ್ ಯಾರು ಎಂದು ಕೇಳಿದಾಗ ಅವರು ಪ್ರಶ್ನೆಗೆ ಉತ್ತರಿಸುತ್ತಾ ರಶ್ಮಿಕ ಮಂದಣ್ಣ ಅವರ ಹೆಸರನ್ನು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಇದು ಹಲವಾರು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು ಕೂಡ. ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ ಎಂದು ಇನ್‌ಸ್ಟಾಂಟ್ ಬಾಲಿವುಡ್ ಇನ್‌ಸ್ಟಾಗ್ರಾಂ(instant bollywood) ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿರುವ ಶುಭ್ಮಲ್ ಭಾರಿ ಅಸಮಾಧಾನ ಹೊರಹಾಕಿದ್ದಾರೆ.
ತುಂಡುಡುಗೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ; ಉರ್ಫಿಯೇ ಸ್ಫೂರ್ತಿ ಎಂದು ಕಾಲೆಳೆದ ನೆಟ್ಟಿಗರು
ಇವೆಲ್ಲಾ ಶುದ್ಧ ಸುಳ್ಳು, ನಾನು ಆ ರೀತಿಯ ಹೇಳಿಕೆಯನ್ನೇ ಕೊಟ್ಟಿಲ್ಲ ಎಂದಿದ್ದಾರೆ ಶುಭ್‌ಮನ್ ಗಿಲ್ (Shubhman Gill). ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ಅವರು ನನ್ನ ಕ್ರಶ್ ಆಗಲು ಸಾಧ್ಯವೂ ಇಲ್ಲ. ನಾನು ಯಾವತ್ತೂ ಅದನ್ನು ಹೇಳಿಯೇ ಇಲ್ಲ, ಮುಂದೆ ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ. ಯಾವ ಮಾಧ್ಯಮದಲ್ಲಿ ನಾನು ಈ ರೀತಿ ಮಾತನಾಡಿದ್ದೇನೆ ಎಂದು ಯಾರಾದರೂ ಹೇಳಬಲ್ಲಿರಾ ಎಂದು ಗರಂ ಆಗಿದ್ದಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ಈ ಸುದ್ದಿಗೆ ರಿಪ್ಲೈ ಮಾಡಿರುವ ಅವರು, ನಾನು ಆ ರೀತಿಯಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಷನಲ್ ಕ್ರಷ್ ಎಂಬ ಬಿರುದು ಪಡೆದಿರುವ ರಶ್ಮಿಕಾ ಮಂದಣ್ಣ ಇದಕ್ಕೆ ಏನು ಪ್ರತಿಕ್ರಿಯೆ ಕೊಡುತ್ತಾರೋ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ವರದಿಗೆ ಗಿಲ್ ಮಾತ್ರ ಭಾರಿ ಅಸಮಾಧಾನಗೊಂಡಿದ್ದಾರೆ. ಇನ್ನು ರಶ್ಮಿಕಾ ವಿಚಾರಕ್ಕೆ ಬಂದರೆ ಇವರು ಸಿನಿಮಾಗಿಂತ ಸದ್ಯ ಟ್ರೋಲ್ನಿಂದಲೇ (Troll) ಹೆಸರಾಗುತ್ತಿದ್ದಾರೆ. ತಮ್ಮ ಅಂಗಾಂಗ ತೋರಿಸುತ್ತಾ, ಅತ್ಯಂತ ಕನಿಷ್ಠ ಉಡುಪು ಧರಿಸಿ, ಒಳ ಉಡುಪುಗಳನ್ನು ಉದ್ದೇಶಪೂರ್ವಕವಾಗಿ ತೋರಿಸುತ್ತಾ ಟ್ರೋಲ್ ಆಗುತ್ತಿದ್ದಾರೆ ರಶ್ಮಿಕಾ. ಟ್ರೋಲ್ ಆದಷ್ಟೂ ಫೇಮಸ್ ಆಗುವುದು ಹೆಚ್ಚು ಎಂದು ಇತ್ತೀಚಿಗೆ ನಟಿಯರಲ್ಲಿ ಒಂದು ಮನೋಭಾವ ಇದ್ದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಪೈಪೋಟಿಗೆ ಬಿದ್ದವರಂತೆ ಅಂಗಾಂಗ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಈ ಸಾಲಿಗೆ ಕೊಡಗು ಬೆಡಗಿ ರಶ್ಮಿಕಾನೂ ಸೇರಿದ್ದಾರೆ. ಸದ್ಯ ಆಕೆಯ ಕೈಯಲ್ಲಿ 2 ಸಿನಿಮಾಗಳು ಮಾತ್ರ ಇವೆ. 'ಪುಷ್ಪ-2' ಹಾಗೂ 'ಅನಿಮಲ್' ಸಿನಿಮಾಗಳ ನಂತರ ಯಾವ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ 2 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 'ಪುಷ್ಪ' ಸಿನಿಮಾ ಹಿಟ್ ಆಗಿ ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿಸಿದೆ.
ರಶ್ಮಿಕಾ ಬಿಟ್ಟು ಮತ್ತೊಬ್ಬ ಕನ್ನಡತಿ ಜೊತೆ ದೇವರಕೊಂಡ ರೊಮ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.