ನನ್ನ ಕನ್ನಡವನ್ನು ಅವಮಾನಿಸಿ, ನಿಮ್ಮ ಭಾಷೆ ಹೇರಿದರೆ....: ನಟ ಪ್ರಕಾಶ್ ರಾಜ್ ಎಚ್ಚರಿಕೆ

Published : Mar 08, 2023, 12:18 PM IST
ನನ್ನ ಕನ್ನಡವನ್ನು ಅವಮಾನಿಸಿ, ನಿಮ್ಮ ಭಾಷೆ  ಹೇರಿದರೆ....: ನಟ ಪ್ರಕಾಶ್ ರಾಜ್ ಎಚ್ಚರಿಕೆ

ಸಾರಾಂಶ

ಹಿಂದಿ ಹೇರಿಕೆ ವಿರುದ್ಧ ನಟ ಪ್ರಕಾಶ್ ರಾಜ್ ಮತ್ತೆ ಸಿಡಿದೆದ್ದಿದ್ದಾರೆ. ನನ್ನ ಕನ್ನಡವನ್ನು ಅವಮಾನಿಸಿ, ನಿಮ್ಮ ಭಾಷೆ  ಹೇರಿದರೆ ಹೀಗೆ ಮಾಡುವೆ ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದ್ದಾರೆ. 

ಕರ್ನಾಟಕ ಮೂಲದ ಬಹುಭಾಷಾ ನಟ ಪ್ರಕಾಶ್ ರಾಜ್ ಸಿನಿಮಾಗಳ ಜೊತೆಗೆ ಸಿದ್ಧಾಂತ, ಹೋರಾಟ, ಪ್ರತಿಭಟನೆ ಎಂದು ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಆಗಾಗ ಸಿಡಿದೇಳುವ ಪ್ರಕಾಶ್ ರಾಜ್ ಹಿಂದಿ ಹೇರಿಕೆ ವಿರುದ್ಧವೂ ಕಿಡಿ ಕಾರಿದ್ದಾರೆ. ಪ್ರಕಾಶ್ ಅವರಿಗೆ ಪ್ರಭಾಭಿಮಾನ ಜಾಸ್ತಿ. ಬೇರೆ ಬೇರೆ ಭಾಷೆಯಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದರೂ ತಮ್ಮ ಮಾತೃಭಾಷೆಯ ಮೇಲೆ ಅಪಾರವಾದ ಗೌರವ ಮತ್ತು ಪ್ರೀತಿ. ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವ ವಿರುದ್ಧ ಪ್ರಕಾಶ್ ರಾಜ್ ಮತ್ತೆ ರೊಚ್ಚಿಗೆದ್ದಿದ್ದಾರೆ. ತಮಗನಿಸಿದ ವಿಚಾರವನ್ನು ನೇರವಾಗಿ ಹೇಳುವ ಪ್ರಕಾಶ್ ರಾಜ್ ಇದೀಗ ಕರ್ನಾಟಕದ ಮೇಲಿನ ಹಿಂದಿ ಹೇರಿಕೆ ವಿರುದ್ಧ ಮತ್ತೆ ಗುಡುಗಿದ್ದಾರೆ.  

'ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ' ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಕಾಶ್ ರಾಜ್ ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ ಎಂದು ಹೇಳಿದರು. ಈ ಬ್ಗಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, 'ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು.  ನಾನು ಹೋಗುವಲ್ಲೆಲ್ಲಾ ಅಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ.. ಆದರೆ ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ' ಎಂದು ಹೇಳಿದ್ದಾರೆ. 

'ಕಾಶ್ಮೀರ್ ಫೈಲ್ಸ್ ನಾನ್‌ಸೆನ್ಸ್' ಎಂದ ಪ್ರಕಾಶ್‌ ರಾಜ್ ವಿರುದ್ಧ ನಟ ಅನುಪಮ್ ಖೇರ್ ವಾಗ್ದಾಳಿ

'ನನ್ನ ಬೇರು. ನನ್ನ ಮೂಲ ನನ್ನ ಕನ್ನಡ. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರೊಲ್ಲ. ಅಷ್ಟೇ' ಎಂದು ಹೇಳಿದ್ದಾರೆ. ಪ್ರಕಾಶ್ ರಾಜ್ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಹಿಂದಿ ಬರಲ್ಲ ಹೋಗ್ರಪ್ಪ ಎಂದು ಬರೆದಿರುವ ಟಿ ಶರ್ಟ್ ಅನ್ನು ಧರಿಸಿದ್ದಾರೆ. 

ಪ್ರಕಾಶ್ ರಾಜ್ ಫೋಟೋವನ್ನ ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಖಾ ಟ್ವಿಟರ್​ನಲ್ಲಿ ಶೇರ್​ ಮಾಡಿ,‘ತಮಿಳುನಾಡು ಪೊಲೀಸರೇ ಪ್ರಕಾಶ್ ರಾಜ್ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದೀರೇ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್​​ ವಿರುದ್ಧವೂ ಪ್ರಕಾಶ್ ರಾಜ್ ಕಿಡಿ ಕಾರಿದ್ದಾರೆ.

ಪ್ರಾಣಿ ರಕ್ಷಣೆಗೆ ಸಂಯುಕ್ತ ಹೊರನಾಡು ಆ್ಯಂಬುಲೆನ್ಸ್‌, ಹೆಲ್ಪ್‌ಲೈನ್‌ಗೆ ಆರಂಭ;ಈ ಸಂಖ್ಯೆಗೆ ಕರೆ ಮಾಡಿ

ಪ್ರಕಾಶ್ ರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್ ಕೊನೆಯದಾಗಿ ವಾರಿಸು ಮತ್ತು ವಾಲ್ಟರ್ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪ್ರಕಾಶ್ ರಾಜ್ ಕನ್ನಡದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಜೊತೆಗೆ ಶಾಕುಂತಲಂ, ಪೊನ್ನಿಯನ್ ಸೆಲ್ವನ್ 2  ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?