ಸೆಲೆಬ್ರಿಟಿಗಳಿಗೆ ಕಪ್ಪು ನೀರಿನ ಕ್ರೇಜ್..! ಶ್ರುತಿ ಹಾಸನ್ ಫಸ್ಟ್ ಟ್ರೈ

By Suvarna News  |  First Published Aug 19, 2021, 4:10 PM IST
  • ನೀರಿಗೆ ಬಣ್ಣ ಇಲ್ಲ ಎನ್ನುತ್ತೀರಾ ? ಈ ನೀರಿಗೆ ಬಣ್ಣ ಇದೆ ನೋಡಿ
  • ಸೆಲೆಬ್ರಿಟಿಗಳ ಕೈಯಲ್ಲಿ ಬ್ಲಾಕ್ ವಾಟರ್: ಏನಪ್ಪಾ ಇದು ?

ಸಿನಿ ತಾರೆಗಳಿಗೆ, ಸೆಲೆಬ್ರಿಟಿಗಳಿಗೆ ಟ್ರೈ ಮಾಡೋಕೆ ಏನೋ ಹೊಸದು ಸಿಗುತ್ತಲೇ ಇರುತ್ತದೆ. ಈಗ ಬ್ಲಾಕ್ ವಾಟರ್ ಸರದಿ. ಈ ಕಪ್ಪು ನೀರಿನ ಕ್ರೇಜ್ ಹೆಚ್ಚಾಗಿದ್ದು, ಈಗಾಗಲೇ ಬಹಳಷ್ಟು ಸೆಲೆಬ್ರಿಟಿಗಳು ಇದನ್ನು ಟೇಸ್ಟ್ ಮಾಡಿದ್ದಾರೆ. ಇನ್ನೂ ಕೆಲವು ಜನ ಬಳಸುತ್ತಲೂ ಇದ್ದಾರೆ. ಈಗ ಬಹುಭಾಷಾ ನಟಿ ಶ್ರುತಿ ಹಾಸನ್ ಸರದಿ. ಅವರ ರಿಯಾಕ್ಷನ್ ಏನು ? ಬ್ಲಾಕ್ ವಾಟರ್ ಬಗ್ಗೆ ಏನಂತಾರೆ ಶ್ರುತಿ ?

ಫಿಟ್ನೆಸ್ ಮತ್ತು ಆರೋಗ್ಯಕ್ಕಾಗಿ ಸೆಲೆಬ್ರಿಟಿಗಳು ಹೊಸ ಆಹಾರ ಮತ್ತು ಪಾನೀಯಗಳನ್ನು ಟ್ರೈ ಮಾಡುವುದು ಹೊಸದೇನಲ್ಲ. ಸಿನಿ ತಾರೆಗಳು ಹಲವು ಬಾರಿ ನಿರ್ದಿಷ್ಟ ಫಿಟ್ನೆಸ್ ಟ್ರೆಂಡ್ ಅನ್ನು ಪ್ರಾರಂಭಿಸುತ್ತಾರೆ. ತಮ್ಮ ಅಭಿಮಾನಿಗಳ ಮೇಲೆ ಈ ರೀತು ಬಹಳಷ್ಟು ಪ್ರಭಾವ ಬೀರುತ್ತಾರೆ. ಆರೋಗ್ಯಕ್ಕೆ ಗುಣವಾಗುವಂತಹ ಹೊಸ ಆಯ್ಕೆ ಪ್ರಯತ್ನಿಸಲು ಇತ್ತೀಚಿಗೆ ನಟಿ ಶ್ರುತಿ ಹಾಸನ್ ಕಪ್ಪು ನೀರಿಗೆ ಶಿಫ್ಟ್ ಆಗಿರುವಂತೆ ತೋರುತ್ತದೆ.

Tap to resize

Latest Videos

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್

ಆಕೆಯ ಒಂದು ವಿಡಿಯೋದಲ್ಲಿ ನಟಿ ಬ್ಲಾಕ್ ವಾಟರ್ ಕುಡಿಯುತ್ತಿರುವುದನ್ನು, ಈ ಕಪ್ಪು ನೀರನ್ನು ಮೊದಲ ಬಾರಿ ಟ್ರೈ ಮಾಡಲು ತುಂಬಾ ಉತ್ಸುಕನಾಗಿರುವುದನ್ನು ಕಾಣಬಹುದು. ಅದು ಕಪ್ಪು ನೀರಲ್ಲ ಕ್ಷಾರೀಯ ನೀರು ಎಂದು ಹೇಳುತ್ತಿರುವುದನ್ನು ನಾವು ಕೇಳಬಹುದು.

ಶೃತಿ ಹೊರತುಪಡಿಸಿ ಈ ಬ್ಲಾಕ್ ವಾಟರ್ ಪಾನೀಯವನ್ನು ಅನೇಕ ಸೆಲೆಬ್ರಿಟಿಗಳು ಕುಡಿಯುತ್ತಾರೆ. ಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲಾ ಕೆಲವು ತಿಂಗಳ ಹಿಂದೆ ಕಪ್ಪು ದ್ರವವಿರುವ ಬಾಟಲಿಯನ್ನು ಹಿಡಿದುಕೊಂಡದ್ದು ಕಂಡುಬಂದಿತ್ತು. ಆಕೆ ಆರೋಗ್ಯದ ಕಾರಣಗಳಿಗಾಗಿ ಇದನ್ನು ನಿಯಮಿತವಾಗಿ ಕುಡಿಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಫಿಟ್ನೆಸ್ ಫ್ರೀಕ್ ಸೆಲೆಬ್ರಿಟಿ ಮಲೈಕಾ ಅರೋರಾ ಕೂಡ ಉತ್ತಮ ಆರೋಗ್ಯಕ್ಕಾಗಿ ಈ ಸೂಪರ್ ವಾಟರ್ ಕುಡಿಯಲು ಆರಂಭಿಸಿದ್ದಾರೆ.

ಸ್ವಲ್ಪ ಸಮಯದ ಹಿಂದೆ ಮಲೈಕಾ ಕಪ್ಪು ನೀರಿನ ಬಾಟಲಿಯನ್ನು ಒಯ್ಯುತ್ತಿರುವುದನ್ನು ಗಮನಿಸಲಾಯಿತು. ಪಾಪರಾಜಿಗಳಿಗೆ ಉತ್ತರಿಸಿದಾಗ ತಾನು ಕಪ್ಪು ಕ್ಷಾರೀಯ ನೀರನ್ನು ಕುಡಿಯುತ್ತಿದ್ದೇನೆ ಎಂದು ದೃಢಪಡಿಸಿದ್ದಾರೆ ನಟಿ. ಸೆಲೆಬ್ರಿಟಿಗಳು ಕಪ್ಪು ನೀರಿಗೆ ಶಿಫ್ಟ್ ಆಗಲು ಕಾರಣವೆಂದರೆ ದೇಹದಲ್ಲಿ ಕಪ್ಪು ನೀರು ದೇಹದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಬೇಕು. 70 ಪ್ಲಸ್ ಖನಿಜಗಳನ್ನು ಹೊಂದಿರುವುದರಿಂದ, ಇದು ಸಾಮಾನ್ಯ ನೀರಿಗಿಂತ ಉತ್ತಮ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ.

click me!