ಶೂಟಿಂಗ್ ಸಂದರ್ಭ ಗರ್ಭಿಣಿ ಕರೀನಾ ಕಾಳಜಿ ವಹಿಸಿದ್ದ ಅಮೀರ್ ಖಾನ್

By Suvarna News  |  First Published Aug 19, 2021, 11:59 AM IST
  • ಗರ್ಭಿಣಿಯಾಗಿದ್ದಾಗ ಶೂಟಿಂಗ್ ಅನುಭವ
  • ಅಮೀರ್ ಖಾನ್ ಜೊತೆಗಿನ ಶೂಟಿಂಗ್ ಅನುಭವ ಹಂಚಿಕೊಂಡ ಬೇಬೋ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್ ಮಾಡಿದ್ದರು. ಈ ಶೂಟಿಂಗ್ ಅನುಭವದ ಬಗ್ಗೆ, ಅಮೀರ್ ಖಾನ್ ಜೊತೆಗಿನ ಒಡನಾಟದ ಬಗ್ಗೆ ನಟಿ ಕರೀನಾ ಕಪೂರ್ ಹೇಳಿದ್ದಾರೆ. ಸೈಫ್ ಪತ್ನಿಗೆ ಅಮೀರ್ ಖಾನ್ ಕೇರ್ ಟೇಕರ್ ಆದ ಸ್ಟೋರಿ ಇದು

ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಪ್ರಾಜೆಕ್ಟ್ ಎನೌನ್ಸ್ ಆದಾಗಿನಿಂದಲೂ ಸದ್ದು ಮಾಡುತ್ತಿದೆ. ಮೂರನೇ ಬಾರಿಗೆ ಅಮೀರ್ ಮತ್ತು ಕರೀನಾ ಅವರು ಬೆಳ್ಳಿತೆರೆಯ ಮೇಲೆ ಒಂದಾಗುವುದನ್ನು ನೋಡಲು ಸಿನಿಪ್ರೇಮಿಗಳು ಉತ್ಸುಕರಾಗಿದ್ದಾರೆ. ಫೆಬ್ರವರಿ 2021 ರಲ್ಲಿ ಗಂಡು ಮಗುವಿಗೆ ತಾಯಿಯಾದ ಬೆಬೊ, ಜಹಾಂಗೀರ್ ಅಲಿ ಖಾನ್ ಗರ್ಭಿಣಿಯಾಗಿದ್ದಾಗ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮಾಡಿದ್ದರು.

Tap to resize

Latest Videos

ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು

ಮುಂಬರುವ ಹಾಸ್ಯ ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿ ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟಿನ ನಡುವೆ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಚಿತ್ರೀಕರಣದ ಸಮಯದಲ್ಲಿ ಕರೀನಾ ಚಿತ್ರ ತಂಡದ ಜೊತೆ ಸೇರಿದ್ದರು. ವೀರೆ ಡಿ ವೆಡ್ಡಿಂಗ್ ನಟಿ, ಅಮೀರ್ ತಮ್ಮ ಚಿತ್ರದ ಚಿತ್ರೀಕರಣದಲ್ಲಿದ್ದಾಗ ತನ್ನನ್ನು ನೋಡಿಕೊಂಡರು ಎಂದು ಹೇಳಿದ್ದಾರೆ. ಥಗ್ಸ್‌ಆಫ್‌ಹಿಂದೋಸ್ತಾನ್ ಸ್ಟಾರ್ ಎಲ್ಲಾ ಭದ್ರತಾ ಕ್ರಮಗಳನ್ನು ಸೆಟ್ ನಲ್ಲಿ ವ್ಯವಸ್ಥೆ ಮಾಡಿದ್ದರು ಎಂದಿದ್ದಾರೆ ಬೇಬೋ.

ಪಟೌಡಿಯಿಂದ ದೆಹಲಿಗೆ ನಿತ್ಯ ಪ್ರಯಾಣ:

ಜಬ್ ವಿ ಮೆಟ್ ನಟಿ ಲಾಲ್ ಸಿಂಗ್ ಚಡ್ಡಾದಲ್ಲಿ ತನ್ನ ದೃಶ್ಯಗಳ ಚಿತ್ರೀಕರಣಕ್ಕಾಗಿ ಪಟೌಡಿಯಿಂದ ನಿತ್ಯ ಪ್ರಯಾಣಿಸಿದ್ದಾರೆ ಎಂಬುದನ್ನು  ಬಹಿರಂಗಪಡಿಸಿದ್ದಾರೆ. ತಮ್ಮ ಮಗ ತೈಮೂರ್ ಅಲಿ ಖಾನ್‌ ಖುಷಿಯಾಗಿರಲು ಆಕೆಯ ಪತಿ ಸೈಫ್ ಅಲಿ ಖಾನ್ ಅವರನ್ನು ನಿತ್ಯ ಸೇರಿಕೊಳ್ಳಲು ಬಯಸಿದ್ದರು. ಆರಾಮದಾಯಕವಾದ ಶೂಟಿಂಗ್ ನಡೆಯಿತು. ಚಿತ್ರತಂಡ ಮತ್ತು ಸಿಬ್ಬಂದಿಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಚಿತ್ರೀಕರಣ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ವೈದ್ಯರೊಂದಿಗೆ ಸಂಪರ್ಕ:

ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದ ಸಮಯದಲ್ಲಿ ತನ್ನ ಸ್ತ್ರೀರೋಗತಜ್ಞರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ. 40 ವರ್ಷದ ನಟಿ ತನ್ನ ಸ್ತ್ರೀರೋಗತಜ್ಞರಿಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದಿದ್ದಾರೆ. ಕರೀನಾ ತನ್ನ ಮಗ ಜಹಾಂಗೀರ್ ಅಲಿ ಖಾನ್ ತನ್ನ ಬಹುನಿರೀಕ್ಷಿತ ಸಿನಿಮಾ ಭಾಗವಾಗಿರುವುದರ ಬಗ್ಗೆ ತಮಾಷೆ ಮಾಡಿದ್ದಾರೆ. ನನ್ನ ಮಗ ಲಾಲ್ ಸಿಂಗ್ ಚಡ್ಡಾದಲ್ಲಿ ಇದ್ದಾನೆ. ಅವನು ಅಮೀರ್ ಮತ್ತು ನನ್ನೊಂದಿಗೆ ರೊಮ್ಯಾಂಟಿಕ್ ಹಾಡಿನಲ್ಲಿ ಇದ್ದಾನೆ ಎಂದಿದ್ದಾರೆ ಬೇಬೋ.

'ಜಗತ್ತು ಕೊರೋನಾದೊಂದಿಗೆ ಹೋರಾಡುತ್ತಿದ್ದರೆ, ನಾವು ಕರೀನಾ ಜತೆ....!'

ನಿಜ ಜೀವನದ ಘಟನೆಯನ್ನು ಆಧರಿಸಿದ ಥ್ರಿಲ್ಲರ್ ಸಿನಿಮಾ ನಿರ್ಮಿಸುವುದಾಗಿ ಕರೀನಾ ಇತ್ತೀಚೆಗೆ ಘೋಷಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಂಸಲ್ ಮೆಹ್ತಾ ಮತ್ತು ಏಕ್ತಾ ಕಪೂರ್ ಜೊತೆ ಕೈಜೋಡಿಸಿದ್ದಾರೆ. ಆಕೆಯ ಬಹು ನಿರೀಕ್ಷಿತ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.

click me!