ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ನಡುವೆ ಬಿರುಕಿಗೆ ಕಾರಣರಾಗಿದ್ದಾರೆ ಎನ್ನಲಾದ ನಟಿ ನಿಮ್ರತ್ ಕೌರ್ ಬಹಳ ಹಿಂದೆಯೇ ಮದ್ವೆ ಭವಿಷ್ಯ ನುಡಿದಿದ್ರಾ?
ಕೆಲ ತಿಂಗಳಿನಿಂದ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡಿತ್ತು. ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು.
ಅಲ್ಲಿಂದ ಶುರುವಾಗಿರುವ ಐಶ್-ಅಭಿಷೇಕ್ ಬಚ್ಚನ್ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್ ಇಲ್ಲವೇ ಐಶ್ವರ್ಯ ಅದೂ ಇಲ್ಲದಿದ್ರೆ ಅಮಿತಾಭ್ ಸೋಷಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್ ಹಾಕುವ ಮೂಲಕ ಇವರಿಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂಬಂತೆ ಹೇಳುತ್ತಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಲೇ, ದಂಪತಿ ಒಂದಾಗಿರುವ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಕೆಲ ತಿಂಗಳಿನಿಂದ ಬಚ್ಚನ್ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್ ಕೂಡ ಆಗಿತ್ತು.
ಬಾಲಿವುಡ್ಗೆ ಬಿಸಿತುಪ್ಪವಾದ ಸಲ್ಮಾನ್ ಖಾನ್! ನಟನಿಂದಾಗಿ ರಶ್ಮಿಕಾಗೂ ಜೀವ ಭಯ... ಭಾರಿ ಭದ್ರತೆ...
ಇವೆಲ್ಲವುಗಳ ಹೊರತಾಗಿಯೂ ಈಗ ಪತಿ-ಪತ್ನಿ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಇದೀಗ ಹೊಸ ಸುದ್ದಿ ಎಂದರೆ, ಇವರ ಸಂಬಂಧ ಹಳಸಲು ಕಾರಣ ನಟಿ ನಿಮ್ರತ್ ಕೌರ್ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ದಸ್ವಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಐಶ್ ಮತ್ತು ಅಭಿ ದಾಂಪತ್ಯದ ಬಿರುಕಿಗೆ ಇವರೇ ಕಾರಣ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೂ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ, ಅಥವಾ ಆರೋಪ ಹೊತ್ತಿರುವ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ನಿಮ್ರತ್ ಕೌರ್ ಇವರ ಜೀವನದಲ್ಲಿ ಹುಳಿ ಹಿಂಡಿದ್ದು ನಿಜಾ ಎಂದು ಅಭಿಪ್ರಾಯ ವ್ಯಕ್ತವಾಗ್ತಿರೋ ಬೆನ್ನಲ್ಲೇ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.
ಇದು 'ದಸ್ವಿ' ಚಿತ್ರದ ಪ್ರಚಾರಕ್ಕಾಗಿ ಫರಿದೂನ್ ಶಹರ್ಯಾರ್ ಅವರೊಂದಿಗಿನ ಸಂದರ್ಶನದಲ್ಲಿ ನಿಮ್ರತ್ ಕೌರ್ ಹೇಳಿರುವ ಮಾತು. ಈ ಸಂದರ್ಭದಲ್ಲಿ ಮದುವೆ, ಮಕ್ಕಳು, ಸಿನಿಮಾ ಇತ್ಯಾದಿಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಆದರೆ ಸಂದರ್ಶಕರಾಗಿರುವ ಫರಿದೂನ್ ಅವರು, ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಮದುವೆಯ ಬಗ್ಗೆ ಮಾತನಾಡುತ್ತಲೇ ತಮ್ಮ ಮದುವೆಯ ಬಗ್ಗೆಯೂ ಉಲ್ಲೇಖಿಸಿದ್ದರು. ಆಗ ಕೂಡಲೇ ನಿಮ್ರತ್ "ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ" ಎಂದು ವ್ಯಂಗ್ಯವಾಡಿದ್ದರು. ಅಭಿಷೇಕ್ ಕೂಡ ಅವರ ಮಾತಿಗೆ ನಕ್ಕು ಧನ್ಯವಾದಗಳು ಎಂದು ತಮಾಷೆಯಾಗಿ ಹೇಳಿದ್ದರು. ಆಗ ಇದು ತಮಾಷೆಯಾಗಿ ಕಂಡಿದ್ದರೂ ಈಗ ನಿಮ್ರತ್ ಮಾತು ವೈರಲ್ ಆಗುತ್ತಿದೆ. ನಟಿ ಹೀಗೇಕೆ ಹೇಳಿದ್ದರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಅಸಲಿಯತ್ತು ಏನು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.
ವೇದಿಕೆಗೆ ಬರುವಾಗ ಪ್ಯಾಂಟ್ ಕಳಚಿ ಬಿತ್ತಾ? ನಟಿ ತಾನಿಯಾ ಶ್ರಾಫ್ ಒಳ ಉಡುಪು ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು