Shruti Haasan: ತೆಳ್ಳಗಿನ ಸೀರೆ, ಸ್ಲೀವ್‌ಲೆಸ್‌​ ಬ್ಲೌಸ್​ ಧರಿಸಿ ಶೂಟ್​ ಮಾಡಿದ್ರು; ನೋವು ತೋಡಿಕೊಂಡ ನಟಿ

Published : Apr 12, 2023, 02:29 PM ISTUpdated : Apr 12, 2023, 02:50 PM IST
Shruti Haasan: ತೆಳ್ಳಗಿನ ಸೀರೆ, ಸ್ಲೀವ್‌ಲೆಸ್‌​ ಬ್ಲೌಸ್​ ಧರಿಸಿ ಶೂಟ್​ ಮಾಡಿದ್ರು; ನೋವು ತೋಡಿಕೊಂಡ ನಟಿ

ಸಾರಾಂಶ

ಒಂದಿಲ್ಲೊಂದು ಹೇಳಿಕೆಯಿಂದ ಸುದ್ದಿಯಲ್ಲಿರುವ ನಟಿ ಶ್ರುತಿ ಹಾಸನ್​ ಈಗ ಸ್ಲೀವ್‌ಲೆಸ್‌​ ಬ್ಲೌಸ್​ ಬಗ್ಗೆ ಮಾತನಾಡಿದ್ದಾರೆ ಏನದು?

ಕಮಲ್ ಹಾಸನ್ ಪುತ್ರಿಯಾಗಿರುವ ಶ್ರುತಿ (Shruthi Hassan), ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರಗಳಾದ ವೀರ ಸಿಂಹ ರೆಡ್ಡಿ ಮತ್ತು ವಾಲ್ಟೇರ್ ವೀರಯ್ಯನ ಯಶಸ್ಸಿನೊಂದಿಗೆ ಸದ್ಯ ಬೀಗುತ್ತಿದ್ದಾರೆ. ಕಳೆದ ಪ್ರೇಮಿಗಳ ದಿನದಂದು ಶ್ರುತಿ ಹಾಸನ್  ತಮ್ಮ ಪ್ರೇಮಿ  ಶಂತನು ಹಜಾರಿಕಾ ಅವರೊಂದಿಗೆ ಫೋಟೋ ಶೇರ್​ ಮಾಡಿ ಸುದ್ದಿಯಾಗಿದ್ದರು. ಸುದ್ದಿಯಾಗಿರುವುದಕ್ಕೆ ಕಾರಣ ಏನೆಂದರೆ, ಅವರು ತಮ್ಮ ಸ್ನೇಹಿತ  ಶಂತನು ಹಜಾರಿಕಾ (Shanthanu Hajarika) ಜೊತೆ  ಬ್ರೇಕ್ ಅಪ್ ಆಗಿದ್ದರು ಎಂಬ ಸುದ್ದಿಯೂ ಕೆಲ ತಿಂಗಳಿನಿಂದ ಹರಿದಾಡುತ್ತಿತ್ತು.   ಮುಂಬೈನಲ್ಲಿ ಪ್ರತ್ಯೇಕ ಫ್ಲಾಟ್ ತೆಗೆದುಕೊಂಡು ಇಬ್ಬರೂ ಜೊತೆಯಲ್ಲಿದ್ದಾರೆ ಎಂಬುದು ಬಿ-ಟೌನ್​ನಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ ಇದರ ನಡುವೆಯೇ ಬ್ರೇಕ್​ ಅಪ್​ ಶಾಕಿಂಗ್​ ನ್ಯೂಸ್​ (Shocking news) ಕೂಡ ಬಂದಿತ್ತು.  ಅದಕ್ಕೆ ಪುಷ್ಟಿ ನೀಡಿದ್ದ ಶ್ರುತಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್​. 'ನಾನು ನನ್ನೊಂದಿಗೆ ಚೆನ್ನಾಗಿದ್ದೇನೆ. ನನ್ನೊಂದಿಗೆ ನಾನು ಎಂಜಾಯ್ ಮಾಡಬಹುದು. ನನ್ನ ಸಮಯದ ಮೌಲ್ಯ ನನಗೆ ತಿಳಿದಿದೆ. ನಾನು ನನ್ನ ಜೀವನವನ್ನು ಪ್ರೀತಿಸುತ್ತೇನೆ ಎಂದು ನಾನು ಅರಿತುಕೊಂಡಿದ್ದೇನೆ' ಎಂದು ಶ್ರುತಿ ಬರೆದುಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದರು.

ಇದಾದ ಬಳಿಕ,  Instagram ಹ್ಯಾಂಡಲ್​ನಲ್ಲಿ ಸಕ್ರಿಯರಾಗಿರುವ ನಟಿ, ತಮ್ಮ ಅಭಿಮಾನಿಗಳ ಜೊತೆ ಆಗಾಗ್ಗೆ  'ಸಿಲ್ಲಿ' ಚಾಟ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್​ ಕೇಳೋ ಪ್ರಶ್ನೆಗಳಲ್ಲಿ ಹೆಚ್ಚಿನವು ತರ್ಲೆ ಪ್ರಶ್ನೆಗಳಾಗಿರುತ್ತವೆ. ಅವುಗಳಿಗೂ ಬೋಲ್ಡ್​ ಆಗಿಯೇ ಶ್ರುತಿ ಉತ್ತರ ಕೊಡುತ್ತಾರೆ. ಅದರಲ್ಲಿ ಒಂದು ಈಗ ವೈರಲ್​ ಆಗಿದೆ. ಅದೇನೆಂದರೆ, ಈಚೆಗೆ ನಟಿ ಅಭಿಮಾನಿಗಳಿಗಾಗಿ ವಿಶೇಷ ಪ್ರಶ್ನೋತ್ತರ ಸೆಷನ್  ಪ್ರಾರಂಭಿಸಿದ್ದರು. ಅದರಲ್ಲಿ ಸಿಲ್ಲಿ ಪ್ರಶ್ನೆ ಕೇಳಿ ಎಂದಿದ್ದರು. ಆಗ ಫ್ಯಾನ್ಸ್​ ಒಬ್ಬ ನಿಮಗೆ ಯಾವ ರೀತಿಯಲ್ಲಿ ಹೂಸು ಬಿಡುವುದು ಇಷ್ಟ ಎಂದು ಕೇಳಿದ್ದರು. ಅದಕ್ಕೆ ಸ್ವಲ್ಪವೂ ಮುಜುಗರ ಪಟ್ಟುಕೊಳ್ಳದ ನಟಿ,  ನನಗೆ ಕೀರಲು ಧ್ವನಿಯಲ್ಲಿ ಸ್ಕ್ವೀಕಿಯಾಗಿ ಹೂಸು (Fart) ಬಿಡುವುದು ಇಷ್ಟ, ಯಾಕೆಂದರೆ ಅದು ಫನ್ನಿಯಾಗಿರುತ್ತದೆ ಎಂದು ಹೇಳಿದ್ದರು.  

ಯಾವ ರೀತಿ ಹೂಸು ಇಷ್ಟ ಎಂದು ತಿಳಿಸಿದ ನಟಿ Shruti Haasan!

ಇಂಥ ನೇರಾನೇರ ನುಡಿಯ ನಟಿ ಇನ್ನೊಂದು ಹೇಳಿಕೆ ಕೊಟ್ಟಿದ್ದು, ಅದು ಬಹಳ ವೈರಲ್​ ಆಗುತ್ತಿರುವುದು ಮಾತ್ರವಲ್ಲದೇ ಸಿನಿಮಾಕ್ಷೇತ್ರದಲ್ಲಿಯೂ ಸಕತ್​ ಸೌಂಡ್​ ಮಾಡುತ್ತಿದೆ.  ಅದೇನೆಂದರೆ, ಹೀರೋಗಳು ಜಾಕೆಟ್ (Jacket)ಹಾಕಬಹುದು. ಆದರೆ ಹೀರೋಯಿನ್ಸ್ ದುಪಟ್ಟಾ ಕೂಡಾ ಧರಿಸುವಂತಿಲ್ಲ ಎಂದು ಹೇಳಿದ್ದಾರೆ. ಬಹುಭಾಷಾ ನಟಿ ಶ್ರುತಿ ಹಾಸನ್ ಅವರು ಮಂಜಿನಲ್ಲಿ (Ice) ಡ್ಯಾನ್ಸ್ ಮಾಡುವ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಟಿಯ ಹೇಳಿಕೆ ಈಗ ವೈರಲ್ ಆಗಿದೆ. ಅದೇನೆಂದರೆ ಮಂಜಿನಲ್ಲಿ ಡಾನ್ಸ್​ ಮಾಡುವಾಗ, ಹೀರೊಗಳಿಗೆ ಜಾಕೆಟ್​ ಕೊಟ್ಟರೆ, ಹೀರೋಯಿನ್​ಗಳು ಬರೀ ಸೀರೆ ಮತ್ತು ಬ್ಲೌಸ್​ನಲ್ಲಿ ಕುಣೀಬೇಕು, ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಪ್ರಶ್ನೋತ್ತರ ಸಂದರ್ಭದಲ್ಲಿ  ನಟಿಯ  ಅಭಿಮಾನಿಯೊಬ್ಬರು,  ಮಂಜಿನಲ್ಲಿ ಡ್ಯಾನ್ಸ್ ಮಾಡುವುದು ನಿಮಗೆ ಇಷ್ಟನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶ್ರುತಿ, ನೋಡಿ,  ನನಗೆ ಮಂಜಿನಲ್ಲಿ ಡ್ಯಾನ್ಸ್ ಮಾಡುವುದು ಇಷ್ಟವಿಲ್ಲ. ಇದು ತುಂಬಾ ಕಷ್ಟದ ಕೆಲಸ. ಹೀರೋ ಜಾಕೆಟ್ ಧರಿಸಬಹುದು. ಆದರೆ ನಮಗೆ ಜಾಕೆಟ್, ಕೋಟ್, ಶಾಲ್ ಏನೂ ಕೊಡುವುದಿಲ್ಲ, ಅದನ್ನು ಧರಿಸಲು ಬಿಡುವುದಿಲ್ಲ.  ಮಂಜಿನಲ್ಲಿ ಖಾಲಿ ಬ್ಲೌಸ್ ಹಾಗೂ ಸೀರೆ ಉಡಬೇಕು. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ,  ವಾಲ್ಟೇರ್ ವೀರಯ್ಯ (Waltair Veerayya) ಸಿನಿಮಾದ ಬಗ್ಗೆ ಪ್ರಸ್ತಾಪಿಸಿದ್ದಾರೆ.  ಇಲ್ಲೊಂದು ಡಾನ್ಸ್​   ಮಂಜಿನಲ್ಲಿ ಮಾಡಬೇಕಿತ್ತು.

ಹೀರೋಗೆ ಜಾಕೆಟ್​ ಕೊಟ್ಟಿದ್ದರೆ, ನನಗೆ  ತೆಳ್ಳಗಿನ ಸೀರೆ ಉಟ್ಟುಕೊಂಡು ಡಾನ್ಸ್​ ಮಾಡಲು ಹೇಳಲಾಯ್ತು.   ಮಂಜಿನಲ್ಲಿ ಡ್ಯಾನ್ಸ್ ಮಾಡುವುದು ತುಂಬಾ ಸವಾಲಿನ ಕೆಲಸ. ಇದನ್ನು ನಿಲ್ಲಿಸಿದರೆ ಒಳ್ಳೆಯದು ಎಂದಿದ್ದಾರೆ ಅವರು. ಹಿಮಾವೃತ ಪರ್ವತಗಳ ಮುಂದೆ ಶೂಟ್ ಮಾಡಲಾದ ಶ್ರೀದೇವಿ ಚಿರಂಜೀವಿ ಹಾಡಿನಲ್ಲಿ ಶ್ರುತಿ ಹಾಸನ್ ತೆಳ್ಳಗಿನ ಸೀರೆ ಉಟ್ಟು ಡ್ಯಾನ್ಸ್ ಮಾಡಿದ್ದರು. ನಟಿ ಇದರಲ್ಲಿ ಬಿಳಿ ಮತ್ತು ನೀಲಿ  ಸೀರೆ ಉಟ್ಟಿದ್ದರು. ಅವರ  ಬ್ಲೌಸ್ ಸ್ಲೀವ್ಲೆಸ್ ಆಗಿತ್ತು.

ಕಮಲ್ ಹಾಸನ್ ಪುತ್ರಿ ಎಷ್ಟು ಮದ್ಯ ಸೇವಿಸ್ತಾರೆ ಗೊತ್ತಾ?

ನಟಿ ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಸಲಾರ್ ಸಿನಿಮಾದ ತಮ್ಮ ಭಾಗದ ಶೂಟಿಂಗ್ ಮುಗಿಸಿರುವುದಾಗಿ ಹೇಳಿದ್ದಾರೆ. ಈ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶಿಸುತ್ತಿದ್ದು ಇದರಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!