ತಂದೆ ಮಗನ ಜೊತೆ ಮಲಗಿದ ನಟಿ ಸೆಲಿನಾ ಜೇಟ್ಲಿ; ಆ ಟೈಪ್ ನಟಿ ಎಂದ ವಿಮರ್ಶಕನ ವಿರುದ್ಧ ಗರಂ

Published : Apr 12, 2023, 10:41 AM IST
ತಂದೆ ಮಗನ ಜೊತೆ ಮಲಗಿದ ನಟಿ ಸೆಲಿನಾ ಜೇಟ್ಲಿ; ಆ ಟೈಪ್ ನಟಿ ಎಂದ ವಿಮರ್ಶಕನ ವಿರುದ್ಧ ಗರಂ

ಸಾರಾಂಶ

ಹಲವು ವರ್ಷಗಳಿಂದ ತಂದೆ ಮಗನ ಜೊತೆ ಮಲಗಿದ ಏಕೈಕ ನಟಿ ಸೆಲಿನಾ ಜೇಟ್ಲಿ? ಟ್ವಿಟರ್‌ನಲ್ಲಿ ಗರಂ ಆಗಿ ಪ್ರತಿಕ್ರಿಯೆ ಕೊಟ್ಟ ನಟಿ....

ಇತ್ತೀಚಿನ ದಿನಗಳ ಸ್ಟಾರ್ ನಟ-ನಟಿಯರ ಜೀವನವನ್ನು ಒಂದೇ ಟ್ವೀಟ್‌ನ ಮೂಲಕ ಎಳೆದು ನಿಲ್ಲಿಸಬಹುದು. ಎಷ್ಟರ ಮಟ್ಟಕ್ಕೆ ಜನರು ನಂಬುತ್ತಾರೆ ಗೊತ್ತಿಲ್ಲ ಆದರೆ ಟ್ವೀಟ್ ವೈರಲ್ ಆಗುವುದು ಗ್ಯಾರಂಟಿ. ಕೆಲವು ವರ್ಷಗಳಿಂದ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳನ್ನು ಸ್ವಯಂ ಘೋಷಿತ ವಿಮರ್ಶೆ ಮಾಡುವ ಉಮೈರ್‌ ಸಂಧು ಬಗ್ಗೆ ಎಲ್ಲರಿಗೂ ಗೊತ್ತಿದೆ. ಚೆನ್ನಾಗಿರುವ ಸಿನಿಮಾವನ್ನು ಚೆನ್ನಾಗಿಲ್ಲ ಅಂತಾರೆ ಡಬ್ಬ ಸಿನಿಮಾಗಳನ್ನು ಸೂಪರ್ ಹಿಟ್ ಅನ್ನುತ್ತಾರೆ. ಹೀಗಾಗಿ ಲಾಭ ಆಗಿರುವುದಕ್ಕಿಂತ ಉಮೈರ್‌ನಿಂದ ಸಮಸ್ಯೆಗಳಾಗಿರುವುದೇ ಹೆಚ್ಚು. 

ಈಗ ಉಮೈರ್ ಸಂಧು ಟ್ವಿಟರ್‌ನಲ್ಲಿ ನಟಿ ಸೆಲಿನಾ ಜೇಟ್ಲಿ ಖಾಸಗಿ ಜೀವನದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದು ಕೂಡ ನಿಜ ಅಥವಾ ಸುಳ್ಳು ಗೊತ್ತಿಲ್ಲ ಆದರೆ ಸೆಲಿನಾನೇ ಪ್ರತಿಕ್ರಿಯೆ ನೀಡಿರುವುದಕ್ಕೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಉಮೈರ್‌ ವಿರುದ್ಧ ಉರಿದುರಿದು ಬಿದ್ದಿದ್ದಾರೆ. 

ಕಥೆ ಬದಲಾಯಿಸುವುದಿಲ್ಲ ಎಂದು ಹಠ ಮಾಡಿದ ನಯನತಾರಾ ಗಂಡ; ತಲಾ ಅಜಿತ್ ಸಿನಿಮಾದಿಂದ ಹೊರ ಬಂದ ವಿಘ್ನೇಶ್

'ಬಾಲಿವುಡ್‌ನ ತಂದೆ-ಮಗ ಫಿರೋಜ್ ಖಾನ್ ಹಾಗೂ ಫರ್ದೀನ್ ಖಾನ್ ಜೊತೆ ಮಲಗಿದ ಏಕೈಕ ನಾಯಕಿ ಸೆಲಿನಾ ಜೇಟ್ಲಿ' ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟ್ವೀಟ್ ಸಖತ್ ವೈರಲ್ ಆಗಿದೆ. ಈ ಟ್ವೀಟ್ ಸೆಲಿನಾ ಗಮನಕ್ಕೂ ಬಂದಿದ್ದು ಪ್ರತಿಕ್ರಿಯಿಸಿದ್ದಾರೆ. 'ಡಿಯರ್ ಸಂಧು..ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಹಲವು ದಾರಿಗಳಿವೆ. ಸಮಯವಿದ್ದಾಗ ವೈದ್ಯರನ್ನು ಸಂಪರ್ಕಿಸು. ದಯವಿಟ್ಟು ಟ್ವಿಟರ್ ಸಂಸ್ಥೆ ಇಂತಹ ಹುಚ್ಚರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ಸೆಲಿನಾ ಪ್ರತಿಕ್ರಿಯೆ ನೀಡಿದ್ದಾರೆ. 

ನನಗೆ, ಮಗಳಿಗೆ ಮುಂಬೈನಲ್ಲಿ ಕಿರುಕುಳ ಹೆಚ್ಚಾಗಿದೆ; ನಟಿ ಪ್ರೀತಿ ಜಿಂಟಾ ಅಳಲು

ಬಾಲಿವುಡ್‌ನಲ್ಲಿ ಸೆಲಿನಾ ಜೇಟ್ಲಿ ತುಂಬಾನೇ ಹೆಸರು ಮಾಡಿದ್ದಾರೆ. ಈಕೆ ಜನಶೀನ್‌ ಸಿನಿಮಾ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಫಿರೋಜ್ ಖಾನ್ ಮತ್ತು ಪುತ್ರ ಫರ್ದೀನ್ ಖಾನ್ ನಟಿಸಿದ್ದಾರೆ. ಮಗ ನೆಲೆ ಕಾಣಬೇಕು ಅಂತ ತಂದೆ ಸಿನಿಮಾ ಮಾಡಿದ್ದರು. ಇದೇ ಸಿನಿಮಾ ಮೂಲಕ ಇವರಿಬ್ಬರು ಪರಿಚಯವಾಗಿ ಸಿನಿಮಾಗಿಂತ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಅನ್ನೋದು ಉಮೈರ್‌ ಸಂಧು ಸಾರುತ್ತಿರುವ ಸಂದೇಶ. 20 ವರ್ಷಗಳ ಕಾಲ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಸೆಲಿನಾ ಮೇಲೆ ಈಗ ಆರೋಪ ಕೇಳಿ ಬಂದಿದೆ. ಅಲ್ಲದೆ ಫಿರೋಜ್‌ ಖಾನ್ ಅಗಲಿ ವರ್ಷಗಳು ಕಳೆದಿದೆ.

2018ರಲ್ಲೂ ಸೆಲಿನಾ ಜೇಟ್ಲಿ ಸುದ್ದಿಯಲ್ಲಿದ್ದರು. ಹಿಂದೆ ಸಿನಿಮಾ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ, ಲೈಂಗಿಕ ಅಲ್ಪಸಂಖ್ಯಾತರ ಶೋಷಣೆಯ ವಿರುದ್ಧವಾಗಿ ಧ್ವನಿ ಎತ್ತಿ ಸದ್ದಾಗುತ್ತಿದ್ದ ಸೆಲಿನಾ ಅಂತಹುದೇ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮುನ್ನೆಲೆಗೆ ಬಂದಿದ್ದಾರೆ.ಆದರೆ ಸ್ವರೂಪ ಮಾತ್ರ ಬೇರೆಯಷ್ಟೆ. ಪ್ರೆಗ್ನೆಂಟ್ ಅಗಿದ್ದ ಸೆಲಿನಾ ಬಾತ್‌ ಟಬ್‌ನಲ್ಲಿ ಮಲಗಿಕೊಂಡಿರುವ ಫೋಟೋ ಹಂಚಿಕೊಂಡು ಣ್ಣೊಬ್ಬಳಿಗೆ ತಾಯ್ತನ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ಮೂಢನಂಬಿಕೆಗಳಿಗೆ ಸಿಕ್ಕು ತೊಂದರೆ ತಂದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!