ಪಬ್ಲಿಕ್‌ನಲ್ಲೇ ಪತಿಗೆ ಲಿಪ್ ಲಾಕ್ ಮಾಡಿದ ನಟಿ; ವಿಡಿಯೋ ವೈರಲ್!

By Web Desk  |  First Published Oct 26, 2019, 3:41 PM IST

ಮಲ್ಟಿ ಸ್ಟಾರ್ ನಟಿ ಶ್ರೀಯಾ ಶರಣ್ ಕಾರ್ಯಕ್ರಮವೊಂದರಲ್ಲಿ ಪತಿ ಜೊತೆ ಕಾಣಿಸಿಕೊಂಡಿದ್ದು ಮಾಧ್ಯಮದ ಎದುರು ಪತಿಗೆ ಮುತ್ತಿಟ್ಟ ವಿಡಿಯೋ ವೈರಲ್ ಆಗುತ್ತಿದೆ.


ಕೆಲ ತಿಂಗಳುಗಳ ಹಿಂದೆ ರಷ್ಯಾ ಮೂಲದ ಅಂಡ್ರೇ ಕೊಸ್ಚೀವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಯಾ ಚಿತ್ರರಂಗದಿಂದ ದೂರ ಉಳಿದು ಪತಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!

Tap to resize

Latest Videos

ಬುಧವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ವೈಟ್ ಲೆಹೆಂಗಾ ಧರಿಸಿದ ಶ್ರೀಯಾ ಪತಿಯೊಂದಿಗೆ ಕಾಣಿಸಿಕೊಂಡಿದ್ದರು. ಮಾಧ್ಯಮದ ಎದುರು ಇಬ್ಬರು ಫೋಟೋ ಹಾಗೂ ವಿಡಿಯೋಗೆ ಪೋಸ್‌ ಕೊಟ್ಟರು. ಈ ವಿಡಿಯೋದಲ್ಲಿ ಶ್ರೀಯಾ ಪತಿಯನ್ನು ತಬ್ಬಿ ತುಟಿಗೆ ಮುತ್ತಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಿಡಿಯೋ ನೋಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

'ಶ್ರೀಯಾ ನೋಡಲು ಮಾತ್ರ ಸೂಪರ್ ಅಂದುಕೊಂಡಿದ್ದೆ ಆದರೆ ಆಕೆ ರೊಮ್ಯಾಂಟಿಕ್ ಕೂಡ' ಹಾಗೂ ' ಶ್ರೀಯಾ ಪತಿ ಹ್ಯಾಂಡ್ಸಂ' ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಪಾರ್ಟಿ ನಡೆದ ಫೋಟೋಗಳು ಹೆಚ್ಚಾಗಿ ಶೇರ್ ಆಗುತ್ತಿದ್ದು ಅದರಲ್ಲಿ ತಮನ್ನಾ ಹಾಗೂ ದಿಯಾ ಕಾಣಿಸಿಕೊಂಡಿದ್ದಾರೆ.

ಬಾರ್ಸಿಲೋನಿಯಾದ ಸ್ಥಳಕ್ಕೆ ಪ್ರವಾಸಕ್ಕೆ ತರಳಿದ ಶ್ರೀಯಾ ಪತಿಯೊಂದಿಗೆ ಕರ್ವಾ ಚೌತ್ ಆಚರಿಸಿದ್ದಾರೆ. ಶ್ರೀಯಾ ಕೊನೆಯದಾಗಿ ಅಭಿನಯಿಸಿದ ಚಿತ್ರ ಎನ್.ಟಿ.ಆರ್ ಜೀವನಾಧಾರಿತ ಚಿತ್ರ.

ಸಾಲು ಮರದ ತಿಮ್ಮಕ್ಕ ಬಗ್ಗೆ ಗೊತ್ತಿಲ್ವಾ? ತಮಿಳು ವೇದಿಕೆ ಮೇಲೆ ತಡಬಡಾಯಿಸಿದ ರಶ್ಮಿಕಾ!

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!