ಬೆಳ್ಳಗಿದ್ದ ನಟಿ ಕಪ್ಪಾಗಿದ್ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಚರ್ಚೆಯಾಕೆ?

Published : Oct 26, 2019, 12:54 PM IST
ಬೆಳ್ಳಗಿದ್ದ ನಟಿ ಕಪ್ಪಾಗಿದ್ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಚರ್ಚೆಯಾಕೆ?

ಸಾರಾಂಶ

  ಈ ನಟಿ ಚಿತ್ರರಂಗದಲ್ಲಿ ಬ್ರೇಕ್ ಬೇಕೆಂದು ಮಾಡಿದ ಕೆಲಸ ಒಂದಾ ಎರಡಾ? ಗುರುತೇ ಸಿಗದ ಹಾಗೆ ತೂಕ ಇಳಿಸಿಕೊಂಡು ಯಾರೂ ಊಹೆ ಮಾಡಿಕೊಳ್ಳದ ಪಾತ್ರ ಆಯ್ಕೆ ಮಾಡಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಇದನ್ನು ನೆಟ್ಟಿಗರು ಸ್ವೀಕರಿಸಿದ ರೀತಿಯೇ ಬೇರೆ!

 

'Dum Laga Ke Haisha'ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭೂಮಿ ಪಡ್ನೆಕರ್ ಬಾಲಿವುಡ್ ಇಂಥಾ ಆಕಾರದ ನಟಿಗೂ ಅವಕಾಶ ನೀಡುತ್ತದೆ ಎಂದು ತೋರಿಸಿಕೊಟ್ಟರು ಹಾಗೂ ಸಾವಿರಾರು ಅವಾರ್ಡ್‌ಗಳನ್ನು ತನ್ನ ಮಡಿಲಿಗೇರಿಸಿಕೊಂಡರು.

ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

 

ಇದಾದ ನಂತರ ಸಾಕಷ್ಟು ಚಿತ್ರದಲ್ಲಿ ಮಿಂಚಿದ ಭೂಮಿ ಕೆರಿಯರ್ ನಲ್ಲಿ ಬ್ರೇಕ್ ಬೇಕೆಂದು ಹೆಚ್ಚು ವರ್ಕೌಟ್ ಮಾಡಿ ಗಿಟ್ಟಿಸಿಕೊಂಡ ಚಿತ್ರವೇ 'ಬಾಲಾ'. ಕೆಲ ದಿನಗಳ ಹಿಂದೆ 'ಬಾಲಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ಟ್ರೋಲ್ ಪೇಜ್‌ನವರು ಆಕೆಯ ಸೌಂದರ್ಯದ ಬಗ್ಗೆ ಚರ್ಚಿಸುತ್ತಿದ್ದಾರೆ. 'ನೋಡಲು ಸಿಕ್ಕಾಪಟ್ಟೆ ಬೆಳ್ಳಗೆ ಇರುವ ನೀವು ಇಂತಹ ಕಪ್ಪು ಹುಡುಗಿಯ ಪಾತ್ರವೇಕೆ ಆಯ್ಕೆ ಮಾಡಿಕೊಂಡ್ರಿ? ನಿರ್ದೇಶಕರು ಕಪ್ಪು ಹುಡುಗಿಯನ್ನೇ ನಾಯಕಿ ಆಗಿ ಆಯ್ಕೆ ಮಾಡಿಕೊಳ್ಳಬಹುದಿತ್ತು' ಎಂದು ಆಕೆಯ ಫೋಟೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸಾಲು ಮರದ ತಿಮ್ಮಕ್ಕ ಬಗ್ಗೆ ಗೊತ್ತಿಲ್ವಾ? ತಮಿಳು ವೇದಿಕೆ ಮೇಲೆ ತಡಬಡಾಯಿಸಿದ ರಶ್ಮಿಕಾ!

 

ಇದನ್ನು ಗಮನಿಸಿದ ಭೂಮಿ 'ನನ್ನ ಪಾತ್ರ ನಿರ್ವಹಿಸುವುದರಲ್ಲಿ ನಾನು ಪ್ರಾಮಾಣಿಕಳಾಗಿದ್ದೇನೆ. ಚಿತ್ರಕ್ಕೆ ಏನು ಬೇಕೋ ಅದನ್ನೇ ಮಾಡುತ್ತೇನೆ. ಮುಖ ಬಣ್ಣದ ಬಗ್ಗೆ ಇರುವ ಗೀಳು ಹಾಗೂ ಭೇದಬಾವಗಳ ಬಗ್ಗೆಯೇ ಇರುವುದು ಈ ಸಿನಿಮಾ. ಜನರು ಇದನ್ನು ನೋಡಿ ಅರ್ಥ ಮಾಡಿಕೊಳ್ಳಬೇಕಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

'ಬಾಲಾ ಚಿತ್ರದ ಬಗ್ಗೆ ಜನರು ಮಾತನಾಡುತ್ತಿರುವುದನ್ನು ನೋಡಿದ್ದೇನೆ. ಜನರು ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಬೇಕು. ಯಾವುದು ಸರಿ ಯಾವುದು ತಪ್ಪೆಂದು ಅಲ್ಲ. ಹಾಗಿದ್ದರೆ ನನ್ನ ಮೊದಲ ಸಿನಿಮಾಗೆ ನಾನು 30 ಕೆಜಿ ಹೆಚ್ಚಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ದಪ್ಪ ಇದ್ದ ಹುಡುಗಿಯೇ ನಿರ್ವಹಿಸಬಹುದಿತ್ತು. ಎಲ್ಲಾ ಕೆಲಸಕ್ಕೂ ಇಂಥ ವ್ಯಕ್ತಿಯೇ ಇಂಥದ್ದು ಮಾಡಬೇಕು ಎಂದಿರುತ್ತದೆ' ಎಂದು ಮಾತನಾಡಿದ್ದಾರೆ.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!