10 ನಿಮಿಷ ಹಾರ್ಟ್ಬೀಟ್ ನಿಂತಿದ್ದರಿಂದ ಸತ್ತೇ ಹೋದರೆಂದು ತಿಳಿದುಕೊಂಡಿದ್ದ ನಟ ಶ್ರೇಯಸ್ ತಲ್ಪಾಡೆ ತಮಗೆ ಮರುಜನ್ಮ ದೊರೆತ ಅನುಭವ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?
10 ನಿಮಿಷ ಹಾರ್ಟ್ಬೀಟ್ ನಿಂತಿತ್ತು.. ವೈದ್ಯಕೀಯ ಮಾತಲ್ಲಿ ಹೇಳುವುದಾದರೆ ನಾನು ಸತ್ತೇ ಹೋಗಿದ್ದೆ. ಮತ್ತೆ ಬದುಕಿದ್ದೇ ಪವಾಡ... ಅಷ್ಟಕ್ಕೂ ಜೀವನದಲ್ಲಿ ಒಮ್ಮೆಯೂ ನಾನು ಆಸ್ಪತ್ರೆಗೆ ಹೋದವನಲ್ಲ. ಹೋಗಿದ್ದು ಇದೇ ಮೊದಲು. ಹಾರ್ಟ್ಬೀಟ್ ನಿಂತಿದ್ದು ಎಂದರೆ ಶವವಾಗಿಯೇ ಹೋಗಿದ್ದೆ. ಆದರೆ ಅದೇನು ಪವಾಡವೇ ಗೊತ್ತಿಲ್ಲ. ಮತ್ತೊಮ್ಮೆ ಬದುಕಿದ್ದೇನೆ. ಬದುಕಿ ಬಂದಾಗಲೇ ನನಗೆ ವೈದ್ಯರಿಂದ ತಿಳಿದದ್ದು ನನ್ನ ಹಾರ್ಟ್ಬೀಟ್ 10 ನಿಮಿಷ ನಿಂತು ಹೋಗಿತ್ತು ಎನ್ನುವುದು. ಆದರೆ ನಾನು ಸಾಯುತ್ತೇನೆ ಅಂದುಕೊಂಡಿದ್ದೆ. ಅರ್ಧದಲ್ಲಿಯೇ ಬಿಟ್ಟು ಹೋಗುತ್ತಿರುವುದಕ್ಕೆ ಆಗ ಪತ್ನಿಯಲ್ಲೂ ಕ್ಷಮೆ ಕೋರಿದ್ದೆ. ಬದುಕಿ ಬರುತ್ತೇನೆ ಎಂದು ಎನ್ನಿಸಿರಲಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ...
ಹೀಗೆಂದು ಮಾಹಿತಿ ನೀಡಿದವರು ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ. ಈ ದಿನಗಳಲ್ಲಿ ಶ್ರೇಯಸ್ ತಲ್ಪಾಡೆ ಅವರು ‘ವೆಲ್‌ಕಂ 3’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದ ಶೂಟಿಂಗ್ ಗಾಗಿ ಶ್ರೇಯಸ್ ಕೆಲ ದಿನಗಳ ಹಿಂದೆ ಬೆಳಗ್ಗೆಯೇ ಮನೆಯಿಂದ ಹೊರಟಿದ್ದರು. ದಿನವಿಡೀ ಚಿತ್ರೀಕರಣ ಮಾಡಿದ್ದರು. ಶೂಟಿಂಗ್ ಸಮಯದಲ್ಲಿ ಹುಷಾರಾಗಿಯೇ ಇದ್ದರು. ಶೂಟಿಂಗ್ ಮುಗಿಸಿ ಸಂಜೆ ಮನೆಗೆ ವಾಪಸಾದ ಮೇಲೆ ಯಾರೋ ಆರೋಗ್ಯ ಹದಗೆಟ್ಟಂತೆ ಆಯಿತು. ಪತ್ನಿ ದೀಪ್ತಿ ಅವರಿಗೆ ವಿಷಯ ತಿಳಿಸಿದಾಗ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರು ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೇಯಸ್ ಕುಸಿದು ಬಿದ್ದರು. ಭಯಗೊಂಡ ಪತ್ನಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ತಿಳಿಯಿತು.
ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್ ಜೋಹರ್
ಅದಾಗಲೇ 10 ನಿಮಿಷ ಅವರ ಹೃದಯ ಬಡಿತ ನಿಂತಿತ್ತು. ವೈದ್ಯರು ಕೂಡ ಇದು ಮುಗಿದ ಕೇಸೇ ಎಂದು ಭಾವಿಸಿದ್ದರು. ಆದರೆ ಆರೋಗ್ಯದಲ್ಲಿ ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ ಎಂದಾಗ ಶ್ರೇಯಸ್‌ಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ನಂತರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಸಂಪೂರ್ಣ ಹುಷಾರಾಗಿ ಮನೆಗೆ ಮರಳಿದ್ದಾರೆ. ಅಂದು ತಮಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ, ನನ್ನ ಜೀವನದಲ್ಲಿ ಹಿಂದೆಂದೂ ಆಸ್ಪತ್ರೆಗೆ ದಾಖಲಾಗಿಲ್ಲ. ಈಗ ಆಸ್ಪತ್ರೆಗೆ ಹೋದ ಮೇಲಷ್ಟೇ ನನಗೆ ಆರೋಗ್ಯವೇ ಭಾಗ್ಯ ಎಂದು ತಿಳಿದದ್ದು. ಬದುಕಿ ಬಂದದ್ದೇ ಪವಾಡ ಎಂದಿದ್ದಾರೆ.
ಸದ್ಯ ಮನೆಯಲ್ಲಿ ಶ್ರೇಯಸ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ತೀವ್ರವಾದ ಕೆಲಸದ ವೇಳಾಪಟ್ಟಿಯಿಂದಾಗಿ ಬಳಲಿರುವ ಕಾರಣ ಹೀಗೆ ಆಗಿರುವುದಾಗಿ ವೈದ್ಯರು ಹೇಳಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿರುವುದಾಗಿ ಶ್ರೇಯಸ್ ಹೇಳಿದ್ದಾರೆ. ಇಂದು ಇವರ ‘ವೆಲ್‌ಕಂ 3’ ಚಿತ್ರದ ಕುರಿತು ಹೇಳುವುದಾದರೆ, ಶ್ರೇಯಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ಪರೇಶ್ ರಾವಲ್, ಜಾನಿ ಲಿವರ್, ರಾಜ್ಪಾಲ್ ಯಾದವ್, ತುಷಾರ್ ಕಪೂರ್ ಮುಂತಾದವರು ಚಿತ್ರದಲ್ಲಿ ಇದ್ದಾರೆ. 1976 ರಂದು ಜನಿಸಿರುವ ಶ್ರೇಯಸ್ ಸದ್ಯ ಹಿಂದಿ ಮಾತ್ರವಲ್ಲದೇ ಮರಾಠಿ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ. ಶ್ರೇಯಸ್ ಅವರ ಪತ್ನಿ ದೀಪ್ತಿ ಮನೋವೈದ್ಯರಾಗಿದ್ದು, ದಂಪತಿಗೆ ಒಬ್ಬಳು ಮಗಳಿದ್ದಾಳೆ.
ಭೂಕಂಪ ಪೀಡಿತ ಜಪಾನ್ನಿಂದ ಸುರಕ್ಷಿತವಾಗಿ ವಾಪಸಾಗಿರುವೆ: ಕಂಗೆಟ್ಟ ಫ್ಯಾನ್ಸ್ಗೆ ಜ್ಯೂ.ಎನ್ಟಿಆರ್ ಮಾಹಿತಿ