Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!

By Suvarna News  |  First Published Feb 13, 2023, 12:40 PM IST

ಕಾಂಡೋಮ್​ ವಿಷಯದ ಕುರಿತು ಇರುವ ಕೆಲವು ಅಭಿಪ್ರಾಯಗಳ ಕುರಿತು ಬಹುಭಾಷಾ ನಟಿ ರಕುಲ್​ ಪ್ರೀತ್​ ಸಿಂಗ್​ ಹೇಳಿರುವುದೇನು?
 


ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್  (Rakul Preeth Singh) ಪ್ರಮುಖವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿಯ `ಯಾರಿಯಾಂ' ಚಿತ್ರದಿಂದ ಸಕತ್​ ಫೇಮಸ್​ ಆಗಿರೋ ಈ ನಟಿ  ತೆಲುಗು, ಹಿಂದಿ ಮಾತ್ರವಲ್ಲದೇ  ತಮಿಳು, ಕನ್ನಡ ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಗಿಲ್ಲಿ (Gilli) ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಈ ದೆಹಲಿಯ ಸುಂದರಿ  ಬಾಲಿವುಡ್‌ನಲ್ಲಿ (Bollywood) ನೆಲೆಸಿದ್ದಾರೆ. ಕಳೆದ ವರ್ಷ ಸದ್ದು ಮಾಡಿದ್ದ ಡ್ರಗ್ಸ್​ ಕೇಸ್​ನಲ್ಲಿಯೂ ಈಕೆಯ ಹೆಸರು ಥಳಕು ಹಾಕಿಕೊಂಡಿತ್ತು. ನೋಟಿಸ್​ ಕೂಡ ಜಾರಿಯಾಗಿತ್ತು. ಸದ್ಯ ರಕುಲ್​ ಅವರು ಕಾಂಡೋಮ್​ ವಿಷಯವಾಗಿ ಭಾರಿ ಚರ್ಚೆಯಲ್ಲಿ ಇದ್ದಾರೆ. ಇತ್ತೀಚೆಗೆ ಅವರು ನಟಿಸಿರುವ  'ಛತ್ರಿವಾಲಿ' ಸಿನಿಮಾ ಇತ್ತೀಚೆಗೆ ನೇರವಾಗಿ ಓಟಿಟಿಗೆ ಬಂದಿದೆ. ಇದರಲ್ಲಿ ಅವರು ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಡೋಮ್​ ವಿಷಯವಾಗಿ ಕೇಳಿರುವ ಕೆಲವೊಂದು ಪ್ರಶ್ನೆಗಳಿಗೆ ರಕುಲ್​ ನೇರಾನೇರ ಉತ್ತರಿಸಿದ್ದು, ಅದೀಗ ಮುನ್ನೆಲೆಗೆ ಬಂದಿದೆ.

ಅಂದಹಾಗೆ 'ಛತ್ರಿವಾಲಿ' (Chatriwali) ಸೋಶಿಯಲ್ ಕಾಮಿಡಿ ಎಂಟರ್‌ಟೈನರ್ ಚಿತ್ರ. ತೇಜಸ್ ಡೊಸ್ಕರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ಜನವರಿ 20ಕ್ಕೆ ಇದು  ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಕಥಾವಸ್ತು  ಲೈಂಗಿಕ ಶಿಕ್ಷಣದ ಕುರಿತು ಆಗಿರುವ ಹಿನ್ನೆಲೆಯಲ್ಲಿ ರಕುಲ್​ ಕಾಂಡೋಮ್​ ಬಗ್ಗೆ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಮುಜುಗರವಿಲ್ಲದೇ ಉತ್ತರಿಸಿದ್ದಾರೆ. ಇವರ ಬೋಲ್ಡ್​ (Bold) ಉತ್ತರ ಈಗ ಸಾಕಷ್ಟು ವೈರಲ್ ಆಗುತ್ತಿದೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ನಾಯಕಿಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಬಳಿಕ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಹೇಗೆಲ್ಲ ಕೆಲಸ ಮಾಡುತ್ತಾರೆ ಎನ್ನುವುದೇ ಛತ್ರಿವಾಲಿಯ ಕಥೆ. 

Tap to resize

Latest Videos

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

ಲೈಂಗಿಕ ಕ್ರಿಯೆಗೆ (Sexual Intercource) ಸಂಬಂಧಿಸಿದಂತೆ ಕೆಲವರು ಸಾಕಷ್ಟು ಅನುಮಾನಗಳು ಇರುತ್ತವೆ. ಅದೇ ರೀತಿ ಸಾಕಷ್ಟು ಊಹಾಪೋಹಗಳು ಇರುತ್ತವೆ. ಅದರ ವಿಷಯವನ್ನು  'ಛತ್ರಿವಾಲಿ' ಚಿತ್ರದಲ್ಲಿ ಚರ್ಚಿಸಲಾಗಿದೆ.   'ನಾವು ಯಾರಿಗೂ ಉಪದೇಶ ನೀಡುತ್ತಿಲ್ಲ. ಇದು ಜೀವನದ ಒಂದು ಭಾಗವಾದ ಕೌಟುಂಬಿಕ ಸಿನಿಮಾವಾಗಿದೆ (Family Movie. ನಿಮಗೆ ಮುಜುಗರ ಆಗುವಂತ ಯಾವುದೇ ದೃಶ್ಯವಿಲ್ಲ. ನಾವು ಸೂಕ್ಷ್ಮವಾಗಿ ಮನರಂಜನೆ ರೀತಿಯಲ್ಲಿ ಹೇಳಿದ್ದೀವಿ. ನಾವು ಇಲ್ಲಿ ಯಾವುದೇ ಪಾಠದ ಹಾಗೆ ಹೇಳುತ್ತಿಲ್ಲ' ಎಂದು ರಕುಲ್ ಹೇಳಿದ್ದರು. ಇದೀಗ ಎರಡು ಕಾಂಡೋಮ್ (Condom)​ ಬಳಸಬಹುದಾ ಎಂಬ ಕುತೂಹಲದ ಪ್ರಶ್ನೆಯೊಂದಕ್ಕೆ ರಕುಲ್​ ಬೋಲ್ಡ್​ ಆಗಿ ಉತ್ತರಿಸಿದ್ದಾರೆ.  
 
'ಲೈಂಗಿಕ ಕ್ರಿಯೆಯಿಂದ ಹರಡುವ ಕಾಯಿಲೆಗಳು ಹಾಗೂ ಗರ್ಭಧಾರಣೆ ತಡೆಯಲು ಸುರಕ್ಷತೆಗಾಗಿ ಪುರುಷರು ಎರಡು ಕಾಂಡೋಮ್ (Condom) ಬಳಸಬಹುದಾ ಎನ್ನುವ ಪ್ರಶ್ನೆಯೊಂದು ರಕುಲ್​ ಅವರಿಗೆ ಎದುರಾಗಿತ್ತು. ಅದಕ್ಕೆ ರಕುಲ್​ ಅವರು ನೀಡಿರುವ ಉತ್ತರ ಏನೆಂದರೆ, 'ಬೇಡ. ಇದು ಸರಿಯಲ್ಲ, ಎರಡು ಕಾಂಡೋಮ್​ ಬಳಕೆ  ಒಳ್ಳೆಯ ಆಲೋಚನೆಯಲ್ಲ. ಏಕೆಂದರೆ ಹೀಗೆ ಮಾಡಿದರೆ ಎರಡರ ನಡುವೆ ತಿಕ್ಕಾಟ ಉಂಟಾಗಿ ಹರಿದು ಹೋಗಬಹುದು. ಒಂದು ವೇಳೆ ತುಂಬಾ ಸುರಕ್ಷತೆ ಅಗತ್ಯ ಎನಿಸಿದರೆ  ಮಹಿಳೆಯರು ಫೀಮೇಲ್ ಕಾಂಡೋಮ್ ಬಳಸಬಹುದು. ಗರ್ಭ ನಿರೋಧಕ ಮಾತ್ರೆ ಸೇವಿಸಬಹುದು, ಐಯುಡಿ (IUD) ರೀತಿಯ ಗರ್ಭನಿರೋಧಕ ಪರಿಕರಗಳನ್ನು ಬಳಸಬಹುದು. ಆದರೆ ಹಾಗೆಂದು ಪುರುಷರು ಎರಡು ಕಾಂಡೋಮ್​ ಬಳಸುವುದು ಒಳ್ಳೆಯದಲ್ಲ' ಎಂದಿದ್ದಾರೆ.

ದಪ್ಪಗಾಗ್ತೇನೆ ಎಂದು ಉಪವಾಸ ಇಟ್ಟರು! ಕರಾಳ ದಿನ ನೆನೆದ ನಟಿ Sameera Reddy

ನಟಿ ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಅಜಯ್ ದೇವಗನ್ (Ajay Devagan) ಜೊತೆ ರನ್ ವೇ 34 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಛತ್ರಿವಾಲಿ ಜೊತೆಗೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಥ್ಯಾಂಕ್ ಗಾಡ್, ಅಕ್ಷಯ್ ಕುಮಾರ್ ಜೊತೆ ಮಿಷನ್ ಸಿಂಡ್ರೆಲಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

click me!