ರಂಗಸ್ಥಲಂ ಚಿತ್ರದಲ್ಲಿ ನಟ ರಾಮ್ಚರಣ್ಗೆ ಇಷ್ಟವಿಲ್ಲದಿದ್ದರೂ ನಟಿ ಸಮಂತಾ ಸುದೀರ್ಘ ಚುಂಬನ ಮಾಡಿರುವುದಾಗಿ ಸುದ್ದಿ ವೈರಲ್ ಆಗಿತ್ತು. ಇದರ ಸತ್ಯಾಂಶ ಏನು?
ಟಾಲಿವುಡ್ ನಟಿ ಸಮಂತಾ (Samantha) ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿರುವ ವಿಷಯವಾಗಿ ಹಲವು ತಿಂಗಳುಗಳಿಂದ ಅವರದ್ದೇ ಚರ್ಚೆಯಾಗಿತ್ತು. ನಂತರ ಸಮಂತಾ ಅವರು ಸುದ್ದಿಯಾದದ್ದು ಅವರ ಕಾಯಿಲೆಯ ವಿಷಯವಾಗಿ. `ಯಶೋದ’ (Yashoda) ಸಿನಿಮಾ ರಿಲೀಸ್ ಸಮಯದಲ್ಲಿ ಮೈಯೋಸಿಟಿಸ್ ಕಾಯಿಲೆಯಿಂದ ನಟಿ ಬಳಲುತ್ತಿರುವ ವಿಷಯ ತಿಳಿದುಬಂದಿದ್ದು, ಅದಕ್ಕೆ ಈಗ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಶಾಕುಂತಲಂ’ ಸಿನಿಮಾ ಈವೆಂಟ್‌ನಲ್ಲಿ ಕೂಡ ತಮ್ಮ ಕಾಯಿಲೆ ವಿಷಯದಲ್ಲಿ ಸಮಂತಾ ಕಣ್ಣೀರಿಟ್ಟಿದ್ದರು. ಇವರ ಅಭಿಮಾನಿಗಳು ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದಾರೆ. ಅದೇ ಇನ್ನೊಂದೆಡೆ, ಸಮಂತಾ ಅವರು, ರಂಗಸ್ಥಲಂ ಚಿತ್ರದ ಸಂದರ್ಭದಲ್ಲಿ ನಟ ರಾಮ್ಚರಣ್ ಅವರಿಗೆ ಲಿಪ್ಲಾಕ್ ಮಾಡಿರುವ ವಿಷಯ ಈಗ ಭಾರಿ ವೈರಲ್ ಆಗುತ್ತಿದೆ. ಚಲನಚಿತ್ರಗಳಲ್ಲಿ ಲಿಪ್ಲಾಕ್ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಈ ಸುದ್ದಿ ಇಷ್ಟೆಲ್ಲಾ ವೈರಲ್ ಆಗುತ್ತಿರುವುದಕ್ಕೆ ಕಾರಣವೂ ಇದೆ.
ಸಾಮಾನ್ಯವಾಗಿ ಪ್ರೀತಿ, ಚುಂಬನ, ಲಿಪ್ಲಾಕ್ (Liplock) ವಿಷಯಕ್ಕೆ ಬಂದಾಗ ಕೆಲ ನಟಿಯರು ತಮಗಾಗಿರುವ ಕಹಿ ಅನುಭವಗಳನ್ನು ಹಂಚಿಕೊಂಡಿದ್ದುಂಟು. ನಟನಾದವನು ತಮಗೆ ಇಷ್ಟವಿಲ್ಲದಿದ್ದರೂ ಈ ದೃಶ್ಯವನ್ನು ಪದೇ ಪದೇ ರೀಟೇಕ್ ಮಾಡಿ ಚುಂಬಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಆದರೆ ಸಮಂತಾ ಮತ್ತು ರಾಮ್ ಚರಣ್ ವಿಷಯಕ್ಕೆ ಬಂದರೆ, ರಾಮ್ ಚರಣ್ ಅವರಿಗೆ ಇಷ್ಟವಿಲ್ಲದಿದ್ದರೂ ಸಮಂತಾ ಲಿಪ್ಲಾಕ್ ಮಾಡಿರುವುದಾಗಿ ಸುದ್ದಿಯಾಗಿತ್ತು. ಅಷ್ಟಕ್ಕೂ ಈ ಸಿನಿಮಾ ರಿಲೀಸ್ ಆದದ್ದು 2018ರಲ್ಲಿ. ಸಿನಿಮಾ ಬಿಡುಗಡೆಯಾಗಿ ನಾಲ್ಕೂವರೆ ವರ್ಷಗಳಾದ ಮೇಲೆ ಈ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಮ್ ಚರಣ್ ಅವರಿಗೆ ಇಷ್ಟವಿಲ್ಲದಿದ್ದರೂ ಸಮಂತಾ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ.
ಸಂಬಂಧ ಇವ್ರ ಜೊತೆ, ಮದ್ವೆ ಅವ್ರ ಜೊತೆ, ಬಾಲಿವುಡ್ನ 9 ನಟಿಮಣಿಯರು ಇವ್ರೇ ನೋಡಿ!
'ರಂಗಸ್ಥಲಂ' (Rangasthalam) ಚಿತ್ರವನ್ನು ಪುಷ್ಪ ಖ್ಯಾತಿಯ ಸುಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ ರಂಗಸ್ಥಲಂನಲ್ಲಿ ಹಳ್ಳಿ ಹುಡುಗಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ರಾಮ್ ಚರಣ್ ಕೂಡ ಹಳ್ಳಿ ಹೈದನಾಗಿ ಮಿಂಚಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದರ ಜೊತೆಗೆ ರಾಮ್ ಚರಣ್ ಮತ್ತು ಸಮಂತಾ ಇಬ್ಬರಿಗೂ ದೊಡ್ಡ ಮೈಲೇಜ್ ತಂದುಕೊಟ್ಟಿತ್ತು. ಆದರೆ ಈ ಚಿತ್ರದಲ್ಲಿನ ದೀರ್ಘ ಚುಂಬನದ ದೃಶ್ಯ ಬಹಳ ಸುದ್ದಿಯಾಗಿತ್ತು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ನಾಗ ಚೈತನ್ಯ ಅವರನ್ನು ಆಗಷ್ಟೇ ಮದುವೆಯಾಗಿದ್ದ ಸಮಂತಾ, ನಟ ರಾಮ್ ಚರಣ್ ಜೊತೆ ಮಾಡಿದ ಲಿಪ್ ಲಾಕ್ ಮಾಡಿರುವುದರಿಂದ ಟ್ರೋಲ್ (Troll) ಕೂಡ ಆಗಿದ್ದರು. ಆದರೆ ಕಿಸ್ಸಿಂಗ್ ಹಿಂದಿನ ಸತ್ಯ ಇದೀಗ ಬಹಿರಂಗವಾಗಿದೆ.
ಈ ಕುರಿತು ಖುದ್ದು ಈಗ ನಟಿ ಸಮಂತಾ ವಿಷಯ ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಈ ಲಿಪ್ಲಾಕ್ ದೃಶ್ಯದಲ್ಲಿ ನಾವಿಬ್ಬರೂ ನಿಜವಾಗಿಯೂ ಲಿಪ್ಲಾಕ್ ಮಾಡಲಿಲ್ಲ. ಬದಲಾಗಿ ಇದು ವಿಎಫ್ಎಕ್ಸ್ (Virtual Path Cross Connect) ಕೆಲಸ ಎಂದು ನಟಿ ಹೇಳಿದ್ದಾರೆ. ಇದರ ಅರ್ಥ ಇದರಲ್ಲಿ ನಿಜವಾಗಿಯೂ ತಾವಿಬ್ಬರೂ ಹತ್ತಿರದಲ್ಲಿ ಇದ್ದು ನಿಜವಾಗಿಯೂ ಕಿಸ್ ಮಾಡಿದ್ದಲ್ಲ, ಬದಲಿಗೆ ಅಣುಕು ಪ್ರದರ್ಶನದ ರೂಪದಲ್ಲಿ ಈ ತಂತ್ರಜ್ಞಾನ ರೂಪಿಸಲಾಗಿದೆ ಎಂದು ಸಮಂತಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಮ್ ಚರಣ್ ನನ್ನ ಕೆನ್ನೆ ಟಚ್ ಮಾಡಿದ್ದರು ಅಷ್ಟೇ. ಲಿಪ್ ಲಾಕ್ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಸಮಂತಾ ಮಾತ್ರವಲ್ಲದೇ ಖುದ್ದು ರಾಮ್ ಚರಣ್ ಕೂಡ ಸ್ಪಷ್ಟನೆ ನೀಡಿದ್ದಾರೆ. ನಿಜವಾಗಿಯೂ ತಾವಿಬ್ಬರೂ ಲಿಪ್ಲಾಕ್ ಮಾಡಲಿಲ್ಲ ಎಂದಿದ್ದಾರೆ. ಚಿತ್ರಗಳಲ್ಲಿ ತೋರಿಸುವ ಎಲ್ಲಾ ದೃಶ್ಯಗಳೂ ನಿಜವಾಗಿ ಇರುವುದಿಲ್ಲ. ಕೆಲವೊಂದು ದೃಶ್ಯಗಳಿಗೆ ವಿಎಫ್ಎಕ್ಸ್ (VFX) ತಂತ್ರಜ್ಞಾನ ರೂಪಿಸಲಾಗುತ್ತದೆ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ದರಿಂದ ವಿನಾಕಾರಣ, ಟ್ರೋಲ್ ಮಾಡಬೇಡಿ ಎಂದು ಇಬ್ಬರೂ ಮನವಿ ಮಾಡಿಕೊಂಡಿದ್ದಾರೆ.
ಹಂದಿ ಮಾಂಸದ ಜೊತೆ ಟೈಟ್, ಸೌದಿಯಲ್ಲಿ ಅರೆಸ್ಟ್ ಘಟನೆ ಬಿಚ್ಚಿಟ್ಟ ಅನುರಾಗ್ ಕಶ್ಯಪ್!
ಈ ಕುರಿತು ರಾಮ್ಚರಣ್ ಅವರು, 'ಲಿಪ್ ಲಾಕ್ ಸೀನ್ ಮಾಡುವಂತೆ ನಿರ್ದೇಶಕರು ತುಂಬಾ ಒತ್ತಾಯಿಸಿದ್ದರು. ಆದರೆ ಹೀಗೆ ಮಾಡಿದರೆ ನನ್ನ ಪತ್ನಿ ಉಪಾಸನಾ ಕಾಮಿನೇನಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಟೆನ್ಷನ್ ಆಗಿದ್ದೆ. ಸಮಂತಾ ಅವರ ಮದುವೆ ಕೂಡ ಆಗಷ್ಟೇ ಆಗಿತ್ತು. ಆದ್ದರಿಂದ ಇಬ್ಬರೂ ನಿರಾಕರಿಸಿದ್ದೆವು. ನಂತರ ಈ ದೃಶ್ಯವನ್ನು VFX ಸಹಾಯದಿಂದ ಚಿತ್ರೀಕರಿಸಲಾಗಿದೆ. ಇದರಲ್ಲಿ ಇಬ್ಬರೂ ಕಿಸ್ ಮಾಡಲು ಹತ್ತಿರ ಬಂದಿದ್ದೇವೆಯೇ ಹೊರತುವ ಸ್ಮೂಚ್ ಮಾಡಿಲ್ಲ. ಈ ಕೆಲಸವನ್ನು ವಿಎಫ್ಎಕ್ಸ್ ಸಹಾಯದಿಂದ ಮಾಡಲಾಗಿದೆ' ಎಂದಿದ್ದಾರೆ.