
ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಸದ್ಯ ಸತ್ಯ ಪ್ರೇಮ್ ಕಿ ಕಥಾ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಇಬ್ಬರೂ ಸಿಕ್ಕಾಪಟ್ಟೆ ಪ್ರಮೋಷನ್ ಮಾಡುತ್ತಿದ್ದಾರೆ. ಈ ನಡುವೆ ಈ ಸಿನಿಮಾದಲ್ಲಿ ಬಳಿಸಿಕೊಂಡ ಒಂದು ಹಾಡು ಈಗ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಹಾಡೊಂದನ್ನು ಈ ಸಿನಿಮಾದಲ್ಲಿ ರಿಮೇಕ್ ಮಾಡಲಾಗಿದೆ. ಈ ಬಗ್ಗೆ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಪಾಕ್‌ನ ಜನಪ್ರಿಯ 'ಪಸೂರಿ...' ಹಾಡನ್ನು ಈ ಸಿನಿಮಾದಲ್ಲಿ ರಿಮೇಕ್ ಮಾಡಲಾಗಿದೆ. ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಪಾಕ್ ಮಂದಿ ಕೂಡ ಬಾಲಿವುಡ್ ಅನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
ಪಸೂರಿ ಮೂಲತಃ ಪಾಕಿಸ್ತಾನದ ಅಲಿ ಸೇಥಿ ಮತ್ತು ಶೇ ಗಿಲ್ ಹಾಡಿದ ಹಾಡಾಗಿದೆ. ಈ ಹಾಡಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮೀಮ್ ಮತ್ತು ಟ್ರೋಲ್‌ಗಳು ಹರಿದಾಡುತ್ತಿವೆ. ಇದು ಸತ್ಯ ಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಅರಿಜಿತ್ ಸಿಂಗ್ ಮತ್ತು ತುಳಸಿ ಕುಮಾರ್ ಅವರ ಧ್ವನಿಯಲ್ಲಿ ಬಂದಿದೆ. ಈ ಬಗ್ಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವು ಬೇಸರ ಹೊರಹಾಕುತ್ತಿದ್ದಾರೆ. ಶೋಯೆಬ್ ಅಖ್ತರ್ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.
ವೇದಿಕೆ ಮೇಲೆಯೇ ಕಿಯಾರಾಗೆ ಚಪ್ಪಲಿ ಹಾಕಿದ ಕಾರ್ತಿಕ್ ಆರ್ಯನ್: ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ
ಶೋಯೆಬ್ ಅಖ್ತರ್, ‘ಏನಿದು ಅನಾಹುತ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ. ‘ಅವರು ಇದನ್ನು ಹಾಳು ಮಾಡಿದರು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಟಿ ಸೀರಿಸ್ನವರು ಈ ಪಸೂರಿ ಹಾಡನ್ನು ಹಾಳು ಮಾಡಿದರು’ ಎಂದು ಹೇಳುತ್ತಿದ್ದಾರೆ. ‘ಟಿ ಸೀರಿಸ್ಗೆ ಹೊಸ ದಿನ ಹೊಸ ಅವಮಾನ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸತ್ಯಪ್ರೇಮ್ ಕಿ ಕಥಾ ಬಜೆಟ್‌ನ ಅರ್ಧದಷ್ಟು ಕಾರ್ತಿಕ್ ಆರ್ಯನ್ ಅವರ ಜೇಜು ಸೇರಿದೆ!
ಸತ್ಯ ಪ್ರೇಮ್ ಕಿ ಕಥಾ ಸಿನಿಮಾತಂಡ ಸಿಕ್ಕಾಪಟ್ಟೆ ಪ್ರಮೋಷನ್ ಮಾಡುತ್ತಿದೆ. ಯಾವುದೇ ವಿವಾದ ಅಥವಾ ಟ್ರೋಲ್‌ಗಳಿಗೂ ತಲೆಕೆಡಿಸಿಕೊಳ್ಳದೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಿಯಾರಾ ಮತ್ತು ಕಾರ್ತಿಕ್ ಇಬ್ಬರೂ ಅನೇಕ ಕಡೆ ಓಡಾಡಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ. ಅನೇಕ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಕಾರ್ಯಕ್ರಮವೊಂದರಲ್ಲಿ ಕಾರ್ತಿಕ್ ಆರ್ಯನ್ ನಟಿ ಕಿಯಾರಾ ಕಾಲಿಗೆ ಚಪ್ಪಲಿ ಹಾಕುವ ಮೂಲಕ ಸುದ್ದಿಯಾಗಿದ್ದರು. ವೇದಿಕೆ ಮೇಲೆ ನಡೆದ ಈ ಘಟನೆ ನೋಡಿ ಅನೇಕರು ಕಾರ್ತಿಕ್ ಆರ್ಯನ್‌ನನ್ನು ಹೊಗಳಿದ್ರೆ ಇನ್ನೂ ಕೆಲವು ಇದು ಪ್ರಮೋಷನ್ ಗಿಮಿಗ್ ಎಂದು ಜರಿದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.