ಮುಖ ಮುಚ್ಚಿಕೊಂಡು ಮನೆಗೆ ಗಣಪನ ತಂದ ಶಿಲ್ಪಾ ಪತಿ ರಾಜ್​ಕುಂದ್ರಾ: ಷೇಮ್​ ಷೇಮ್​ ಎಂದ ನೆಟ್ಟಿಗರು

Published : Sep 18, 2023, 03:38 PM IST
ಮುಖ ಮುಚ್ಚಿಕೊಂಡು ಮನೆಗೆ ಗಣಪನ ತಂದ ಶಿಲ್ಪಾ ಪತಿ ರಾಜ್​ಕುಂದ್ರಾ: ಷೇಮ್​ ಷೇಮ್​ ಎಂದ ನೆಟ್ಟಿಗರು

ಸಾರಾಂಶ

ನಟಿ ಶಿಲ್ಪಾಶೆಟ್ಟಿ ಮನೆಗೆ ಗಣಪನ ತರುವ ಸಂದರ್ಭದಲ್ಲಿ ಪೋರ್ನ್​ ಕೇಸ್​ನಲ್ಲಿ ಸಿಕ್ಕಿಬಿದ್ದಿರೋ ಅವರ  ಪತಿ ಮುಖಮುಚ್ಚಿಕೊಂಡಿದ್ದಾರೆ. ಇದಕ್ಕಾಗಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.  

ಇಂದು ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ. ಸೆಲೆಬ್ರಿಟಿಗಳ ಮನೆಯಲ್ಲಿಯೂ ಕೂಡ ಗಣೇಶನ ಕುಳ್ಳರಿಸಿ ಪೂಜೆ  ಮಾಡುವುದು ಇದೆ. ಬಾಲಿವುಡ್​ ವಿಷಯಕ್ಕೆ ಬಂದರೆ, ಹಬ್ಬ-ಹರಿದಿಗಳಲ್ಲಿ ಎತ್ತಿದ ಕೈ ನಟಿ ಶಿಲ್ಪಾ ಶೆಟ್ಟಿ ಅವರದ್ದು. ಬಾಲಿವುಡ್​ನ ಕ್ಯೂಟ್​ ನಟಿಯರಲ್ಲಿ ಒಬ್ಬರು ಕನ್ನಡದ ಬೆಡಗಿ ಶಿಲ್ಪಾ ಶೆಟ್ಟಿ. ವಯಸ್ಸು 48 ಆದರೂ 20ರ ಯುವತಿಯರಂತೆ  ಮೆಂಟೇನ್​ ಮಾಡಿದ್ದಾರೆ ನಟಿ. ಯೋಗ, ಧ್ಯಾನದ ಮೂಲಕ ಶರೀರವನ್ನು ಫಿಟ್​ ಆಗಿಟ್ಟುಕೊಂಡಿದ್ದಾರೆ. ಇವರು ಹಬ್ಬ-ಸಂಪ್ರದಾಯಗಳ ವಿಷಯದಲ್ಲಿಯೂ ಹಿಂದೆ ಬಿದ್ದಿಲ್ಲ. ಪ್ರತಿ ಬಾರಿಯೂ ಇವರು ಮನೆಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆ. ಕಳೆದ ಬಾರಿ ತೀವ್ರ ಕಾಲಿನ ಅಪಘಾತದ ಬಳಿಕವೂ ನಟಿ ಗಣೇಶನ ವಿಸರ್ಜನೆಗೆ ಹೋಗಿ ಸುದ್ದಿಯಾಗಿದ್ದರು. ಇಂದು ಕೂಡ ಮನೆಯಲ್ಲಿ ಗಣೇಶೋತ್ಸವವನ್ನು ನಟಿಯ ಮನೆಯಲ್ಲಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಗಣೇಶನನ್ನು ಕುಳ್ಳರಿಸುವ ಸಲುವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ನಟಿ ಗಣೇಶನನ್ನು ಕರೆದುಕೊಂಡು ಬಂದಿದ್ದು ಅದರ ವಿಡಿಯೋ ವೈರಲ್​ ಆಗಿದೆ.

ಇಲ್ಲಿ ಒಂದು ವಿಷಯ ಹೈಲೈಟ್​ ಆಗಿದ್ದು, ಸಕತ್​ ಟ್ರೋಲ್​ ಕೂಡ ಆಗುತ್ತಿದೆ. ಇದಕ್ಕೆ ಕಾರಣ, ಶಿಲ್ಪಾ  ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಮುಖವನ್ನು ಮುಚ್ಚಿಕೊಂಡು ಗಣೇಶನನ್ನು ತರುತ್ತಿರುವುದು. ಇದಕ್ಕೆ ಟ್ರೋಲಿಗರು ಷೇಮ್​ ಷೇಮ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ದೇಶದ ಅತೀ ಶ್ರೀಮಂತ ಗಣಪನಿಗೆ ಈ ಬಾರಿ 360 ಕೋಟಿಯ ವಿಮೆ: 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯ ಅಲಂಕಾರ

 ಇದೀಗ ರಾಜ್​ ಕುಂದ್ರಾ ಮುಖ ಮುಚ್ಚಿಕೊಂಡು ಗಣೇಶನನ್ನು ತರುತ್ತಿರುವ ವಿಡಿಯೋ ವೈರಲ್​ ಆಗಿದೆ. ರಾಜ್​ಕುಂದ್ರಾ ಜೊತೆ ಶಿಲ್ಪಾ ಕೂಡ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಮಾಡಬಾರದ್ದನ್ನು ಮಾಡಿದರೆ ಹೀಗೆಯೇ ಆಗುವುದು ಎನ್ನುತ್ತಿದ್ದಾರೆ. ಅಷ್ಟಕ್ಕೂ ರಾಜ್​ ಕುಂದ್ರಾ ಅವರ ವಿರುದ್ಧದ ಈ ಕೇಸಿಗೆ ಸಂಬಂಧಿಸಿದಂತೆ  ಪೊಲೀಸರು ಸಾಕಷ್ಟು  ಸಾಕ್ಷ್ಯಗಳನ್ನು  ಕಲೆ ಹಾಕಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ 'ಹಾಟ್ ಶಾಟ್ಸ್' ನ್ನು ಗೂಗಲ್ ಮತ್ತು ಆಪಲ್‌ ಪ್ಲೇ ಸ್ಟೋರ್ ಡಿಲೀಟ್ ಮಾಡಲಾಗಿತ್ತು.  

ಇದರ ಜೊತೆಗೆ ರಾಜ್‌ಕುಂದ್ರಾ ಈ ಆ್ಯಪ್‌ ಮೂಲಕ ಹೇಗೆ ಗ್ರಾಹಕರ ಜೊತೆ ಸಂವಹನ ಮಾಡುತ್ತಿದ್ದರು, ಈ ಆಪ್‌ನೊಳಗೆ ಏನಿತ್ತು ಅನ್ನೋ ರಹಸ್ಯವೂ ಬಯಲಾಗಿತ್ತು.  ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್‌ ಭಕ್ಷಿ ಎಂಬಾತನ ಕೆನ್ರಿನ್‌ ಲಿಮಿಟೆಡ್‌ (Cranin Limited) ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು. ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್‌ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು.  ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಈಗ ಸಾರ್ವಜನಿಕವಾಗಿ ಹೋಗುವಾಗ ಹೀಗೆ ಅವರು ಮುಖಮುಚ್ಚಿಕೊಂಡು ಹೋಗುವುದು ಸಾಮಾನ್ಯವಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?