ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಕೈ ಹಿಡಿಯುವುದೇ ದಿ ಗ್ರೇಟ್ ಇಂಡಿಯನ್‌ ಫ್ಯಾಮಿಲಿ! 2ನೇ ಸಿನಿಮಾ ರಿಲೀಸ್‌ಗೆ ದಿನಗಣನೆ

Published : Sep 18, 2023, 01:18 PM ISTUpdated : Sep 18, 2023, 02:32 PM IST
ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಕೈ ಹಿಡಿಯುವುದೇ ದಿ ಗ್ರೇಟ್ ಇಂಡಿಯನ್‌ ಫ್ಯಾಮಿಲಿ! 2ನೇ ಸಿನಿಮಾ ರಿಲೀಸ್‌ಗೆ ದಿನಗಣನೆ

ಸಾರಾಂಶ

ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್‌ ಬಾಲಿವುಡ್‌ನಲ್ಲಿ ಮೊದಲ ಚಿತ್ರ ಸೋಲಿನ ಬಳಿಕ 2ನೇ ಸಿನಿಮಾ ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ ರಿಲೀಸ್‌ಗೆ ಸಿದ್ಧವಾಗಿದೆ.ಈ ಸಿನಿಮಾ ಮಾನುಷಿ ಕೈ ಹಿಡಿಯುವುದೇ ಕಾದುನೋಡಬೇಕಿದೆ.  

ಮುಂಬೈ (ಸೆ.18): ಭಾರತ ದೇಶದಿಂದ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಬೆರಳೆಣಿಕೆ ಜನರಲ್ಲಿ ಮಾನುಷಿ ಚಿಲ್ಲರ್‌ ಕೂಡ ಒಬ್ಬರಾಗಿದ್ದಾರೆ. ಇನ್ನು ಭಾರತದಿಂದ ಸ್ಪರ್ಧಿಸಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಬಹುತೇಕರು ಸಿನಿಮಾದಲ್ಲಿ ಮಿಂಚಿದ್ದಾರೆ. ಆದರೆ, 2017ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮಾನುಷಿ ಚಿಲ್ಲರ್‌ ಮೊದಲ ಸಿನಿಮಾದಲ್ಲಿಯೇ ಪ್ಲಾಫ್‌ ಆಗಿದ್ದಾರೆ. ಈಗ 2ನೇ ಸಿನಿಮಾ 'ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಬಾಲಿವುಡ್‌ ಮಂದಿ ಕೈ ಹಿಡಿಯುವರೇ ಎಂಬುದು ಚಿಂತನೆಯಾಗಿದೆ. ಇನ್ನು ಈಗಾಗಲೇ ಬಾಲಿವುಡ್‌ನಿಂದ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿರುವ ಮಾನುಷಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾಳೆ.

ಮಾಜಿ ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ಬಳಿಕ ಮಾನುಷಿ ಮತ್ತೆ ತೆರೆಮೇಲೆ ಬಂದಿರಲಿಲ್ಲ. ಈಗ ಬಾಲಿವುಡ್‌ನ ಧೂಮ್ 3ಖ್ಯಾತಿಯ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ ಕೌಟುಂಬಿಕ ಮತ್ತು ಹಾಸ್ಯಭರಿತ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಚಿತ್ರದಲ್ಲಿ ವಿಕ್ಕಿ ಕೌಶಲ್‌ಗೆ ಮಾನುಷಿ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 22ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ರಾಜ್ ಫಿಲ್ಮ್ಸ್ ಸೆಪ್ಟೆಂಬರ್ 15 ರಂದು ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ 'ಸಾಹಿಬಾ' ಹೊಸ ಹಾಡನ್ನು ಅನಾವರಣಗೊಳಿಸಿತ್ತು. 

Zee Kannada Modern ಗೋಪಿಕೆಯರ ನಡುವೆ ಕೃಷ್ಣಲೋಲನಾದ ಗಾಯಕ ಹನುಮಂತ

ಇನ್ನು ಮಾನುಷಿ ಚಿಲ್ಲರ್‌ ದಿ ಗ್ರೇಟ್‌ ಇಂಡಿಯನ್‌ ಫ್ಯಾಮಿಲಿ ಚಿತ್ರದ ಮೂಲಕ ತಮ್ಮ ಗೆಲುವಿನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಮೊದಲ ಸಿನಿಮಾ ಸೋತಿದೆ ಎಂದು ಅವರಿಗೆ ಸಿನಿಮಾಗಳಿಗೆ ಅವಕಾಶ ಸಿಗುತ್ತಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗಿದೆ. ಕಾರಣ, ಮೊದಲ ಸೋಲಿನ ನಡುವೆಯೂ ಮನುಷಿ ಚಿಲ್ಲರ್‌ ಭರ್ಜರಿಯಾಗಿಯೇ ಬಿಜಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಒಂದಾದ ಮೇಲೊಂದರಂತೆ ಸಿನಿಮಾದ ಅವಕಾಶಗಳು ಬರುತ್ತಿವೆ. ಈಗ ಸದ್ಯಕ್ಕೆ ಮಾನುಷಿ 4 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಜಾನ್ ಅಬ್ರಹಾಂ ಜತೆಗೆ 'ಟೆಹ್ರಾನ್' ಹಾಗೂ ಪೃಥ್ವಿರಾಜ್ ಸುಕುಮಾರನ್, ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಬಡೇ ಮಿಯ್ಯಾ ಛೋಟೇ ಮಿಯ್ಯಾ' ಸಿನಿಮಾಗಳು ಮಾನುಷಿ ಜೋಳಿಗೆಯಲ್ಲಿವೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬರುತ್ತಿರುವ ವರುಣ್ ತೇಜ್ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಸಿನಿಮಾಗಳಲ್ಲಿ ಮಾನುಷಿ ನಟಿಸುತ್ತಿದ್ದಾರೆ. 

'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ' ಸಿನಿಮಾ ನಮ್ಮ ಕೌಟುಂಬಿಕ ಮೌಲ್ಯಗಳು, ನಮ್ಮ ವೈವಿಧ್ಯತೆಯ ಆಚರಣೆಯಾಗಿದೆ. ಇದೆಲ್ಲವನ್ನೂ ಒಂದು ಸಿನಿಮಾದಲ್ಲಿ ಮನರಂಜನೆಯ ರೀತಿಯಲ್ಲಿ ಹೇಳಲಾಗುತ್ತದೆ. ಜೊತೆಗೆ, ಭಾರತೀಯ ಕುಟುಂಬ ಮತ್ತು ಸಂಸ್ಕೃತಿಯನ್ನು ಹೊಂದಿರುವ ನಮಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ.
- ವಿಕ್ಕಿ ಕೌಶಲ್, ನಟ 

ರಾಮಾಚಾರಿ ಧಾರವಾಹಿ: 'ಚಾರು'ಗೆ ಅಳುವ ಪಾತ್ರ ಬೇಡ, ಸರಪಟಾಕಿ ಪಾತ್ರ ಕೊಡಿ! ಅಭಿಮಾನಿಗಳ ಡೈರೆಕ್ಟ್‌ ಹಿಟ್

ಮಾನುಷಿ ಚಿಲ್ಲರ್‌ ಮೊದಲ ಸಿನಿಮಾದ ಸೋಲಿನ ಬಳಿಕ ಕಂಗೆಡದೇ ಸಿನಿಮಾದಲ್ಲಿ ಭರ್ಜರಿಯಾಗಿ ಮುಂದಡಿ ಇಟ್ಟಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಮಾನುಷಿ ತೆಲುಗು ಸಿನಿಮಾ ಮೂಲಕ ಮಾನುಷಿ ಸೌತ್ ಸಿನಿಮಾದ ಖಾತೆ ತೆರೆಯುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಟ ವರುಣ್ ತೇಜ್ ಜೊತೆ ಮಾನುಷಿ ನಟಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿರುವ ಭಾರತೀಯ ವಾಯುಪಡೆ ಆಧಾರಿತ ಚಿತ್ರಕ್ಕಾಗಿ ಇಬ್ಬರೂ ಜೋಡಿಯಾಗುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!