
ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ.
ಪಾತ್ರ ಹೇಗೇ ಇರಲಿ, ಅದಕ್ಕೆ ಜೀವ ತುಂಬಿ ಲೀಲಾಜಾಲವಾಗಿ ನಟಿಸೋದ್ರಲ್ಲಿ ಎತ್ತಿದ ಕೈ ಇವರದ್ದು. ಇಂಥಾ ಪ್ರತಿಭಾವಂತ ನಟಿ ಗಾರ್ಗಿ ಸಿನಿಮಾಕ್ಕಾಗಿ ಕನ್ನಡವನ್ನೂ ಕಲಿತು ಅಚ್ಚ ತೀರ್ಥಹಳ್ಳಿ ಭಾಷೆಯಲ್ಲಿ ಮಾತಾಡಿದ್ದು ಕನ್ನಡಿಗರನ್ನು ಮಾತ್ರ ಅಲ್ಲ, ದಕ್ಷಿಣ ಭಾರತೀಯ ಚಿತ್ರರಂಗದವರನ್ನೇ ದಂಗಾಗಿಸಿತ್ತು. ಇನ್ನು ನಮ್ಮ ಕನ್ನಡದಲ್ಲಿ ಎಷ್ಟೋ ನಟಿಯರು ಅದೆಷ್ಟೋ ಕಾಲದಿಂದ ಇಂಡಸ್ಟ್ರಿಯಲ್ಲಿದ್ದೂ ಅವರ ಪಾತ್ರಕ್ಕೆ ಮತ್ಯಾರೋ ಡಬ್ಬಿಂಗ್ ಮಾಡುತ್ತಾರೆ. ಆದರೆ ಸಾಯಿ ಪಲ್ಲವಿ ಕನ್ನಡ ಕಲಿತು ಎಲ್ಲರ ಮೆಚ್ಚುಗೆ ಗಳಿಸಿದವರು.
ಮದ್ವೆಯಾಗದೇ ಪ್ರೆಗ್ನೆಂಟ್ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ಅಂದಹಾಗೆ ಸಾಯಿ ಪಲ್ಲವಿ ಎಂಬಿಬಿಎಸ್ ಮಾಡಿದ್ದಾರೆ. ವೈದ್ಯಯಾಗಿಯೇ ವೃತ್ತಿ ಆರಂಭಿಸಿದವರು. ಇವರು ಎಲ್ಲಿಯೇ ಹೋದರೂ ಸದ್ಯ ಇವರ ಮದುವೆಯ ವಿಷಯ ಮುನ್ನೆಲೆಗೆ ಬರುತ್ತದೆ. 1990ರಲ್ಲಿ ಹುಟ್ಟಿರೋ ನಟಿ ಸಾಯಿ ಪಲ್ಲವಿಗೆ ಈಗ 33 ವರ್ಷದ ಅವಿವಾಹಿತೆ. ಕಳೆದ ವರ್ಷ ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರೆ ಎನ್ನುವ ಗಾಳಿ ಸುದ್ದಿ ಸಕತ್ ಸದ್ದು ಮಾಡಿತ್ತು. ಮದುವೆ ಮಾಡಿಕೊಳ್ಳಲು ನಟಿ ಸಾಯಿ ಪಲ್ಲವಿ ಸಜ್ಜಾಗಿದ್ದು, ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎಂದೆಲ್ಲಾ ಹೇಳಲಾಗಿತ್ತು. ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ (Love) ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹಾಗಾಗಿ ಮನೆಯವರೇ ಸಾಯಿ ಪಲ್ಲವಿಗೆ ತಕ್ಕ ವರನನ್ನು ಹುಡುಕುತ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಇದ್ಯಾವುದಕ್ಕೂ ತುಟಿಕ್ ಪಿಟಿಕ್ ಅಂದಿಲ್ಲ ಈ ಬ್ಯೂಟಿ. ಮದುವೆಯ ಬಗ್ಗೆ ಸಸ್ಪೆನ್ಸ್ ಆಗಿಯೇ ಇಟ್ಟಿರುವ ನಟಿ, ಈ ಬಗ್ಗೆ ಕೇಳುವ ಪ್ರಶ್ನೆಗೆ ಮೌನದಿಂದಲೇ ಉತ್ತರ ನೀಡುತ್ತಾರೆ.
ಇದೀಗ ಅವರ ಬಾಲ್ಯದ ಘಟನೆಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಬಾಲ್ಯದಲ್ಲಿಯೇ ನಟಿ ಪ್ರೇಮಪಾಶಕ್ಕೆ ಸಿಲುಕಿ ಪ್ರೇಮ ಪತ್ರ ಬರೆದಿದ್ದರಂತೆ. ಆದರೆ ಈ ಪ್ರೇಮ ಪತ್ರದ ವಿಷಯ ಮನೆಯವರಿಗೆ ತಿಳಿದು ಸಾಯಿಪಲ್ಲವಿ ಅವರನ್ನು ತೀವ್ರವಾಗಿ ಥಳಿಸಿದ್ದಂತೆ. ಅಲ್ಲಿಂದ ಇಲ್ಲಿಯವರೆಗೂ ಪ್ರೇಮ, ಮದುವೆ ಎಂದರೆ ಉಸಾಬರಿಯೇ ಬೇಡ ಎನ್ನುವ ಮಟ್ಟಿಗೆ ಹೋಗಿದ್ದಾರೆ ನಟಿ. ನಿಜ ಜೀವನದಲ್ಲಿ ಆಕೆಗೆ ಬಾಯ್‌ಫ್ರೆಂಡ್ ಇದ್ದಾನೋ ಇಲ್ಲವೋ ಎಂಬುದು ಬಹಿರಂಗವಾಗಿಲ್ಲ. ಆದರೆ ಬಾಲ್ಯದಲ್ಲಿ, ಅವರು ಪ್ರೀತಿಸಿ ಸೋಲನ್ನು ಕಂಡವರು. ಈ ಕುರಿತು ಸ್ವತಃ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Ramayan: ಬಾಲಿವುಡ್ಗೆ ಹಾರಿದ ನ್ಯಾಚುರಲ್ ಬ್ಯೂಟಿ: ಸೀತೆ ಪಾತ್ರಕ್ಕೆ ಆಲಿಯಾ ಬದ್ಲು ಸಾಯಿ ಪಲ್ಲವಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.