
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಗ್ಗೆ ಯಾರಿಗೆ ಗೊತ್ತಿಲ್ಲ? ಭಾರತವನ್ನೂ ಮೀರಿ ಬಹುತೇಕ ಜಗತಿನಾದ್ಯಂತ ಅವರ ಪ್ರಸಿದ್ಧಿ ಹಬ್ಬಿದೆ. ಅಂಥ ನಟ, ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಕೂಡ ಒಮ್ಮೆ ಜೀವನದಲ್ಲಿ ಭಾರೀ ಸೋಲು ಅನುಭವಿಸಿದ್ದರು. ಕೈನಲ್ಲಿ ಕಾಸಿಲ್ಲ, ಮಾಡಲು ಕೆಲಸವಿಲ್ಲ ಎಂಬ ಪರಿಸ್ಥಿತಿಗೆ ಸಿಲುಕಿದ್ದರು. ಅಷ್ಟೇ ಅಲ್ಲ, ಊಹೆಗೂ ನಿಲುಕಿದ ಕೋಟಿಗಟ್ಟಲೆ ಸಾಲವನ್ನು ಮಾಡಿಕೊಂಡು ದಿಕ್ಕು ತೋಚದಂತಾಗಿದ್ದರು. ಆಗ ಬಗ್ಗೆ ಸ್ವತಃ ನಟ ಅಮಿತಾಭ್ ಅದೇನು ಹೇಳಿದ್ದಾರೆ ನೋಡಿ..
ನನ್ನ ಕೈನಲ್ಲಿ ಯಾವುದೇ ಸಿನಿಮಾಗಳು ಇರಲಿಲ್ಲ, ಹಣವೂ ಇರಲಿಲ್ಲ. ನಾನು ದಿವಾಳಿ ಆಗಿದ್ದೆ. ನಾನು 90 ಕೋಟಿ ರೂಪಾಯಿಗಳನ್ನು ಬೇರೆಯವರಿಗೆ ಕೊಡಬೇಕಿತ್ತು. 55 ಲೀಗಲ್ ಕೇಸ್‌ಗಳು ನನ್ನ ಮೇಲೆ ಇದ್ದವು. ದಿನ ಬೆಳಗಾದರೆ ಮನೆಯ ಬಳಿ ಸಾಲ ವಾಪಸ್ ಕೇಳಿ ಯಾರಾದರೊಬ್ಬರು ಬಂದೇ ಬರುತ್ತಿದ್ದರು. ನಾವು ಒಂದು ದಾರಿಯಲ್ಲಿ ತಪ್ಪು ಮಾಡಿ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೆ ಉಳಿದೆಲ್ಲಾ ದಾರಿಗಳು ತನ್ನಿಂತಾನೃ ಸಮಸ್ಯೆಯೊಳಕ್ಕೆ ಬಂದುಬಿಡುತ್ತವೆ.
'ಜಗ್ಗೇಶ್ ಸ್ಟುಡಿಯೋಸ್' ಬಗ್ಗೆ ನವರಸನಾಯಕನ ಮಾತು; ಯಲಾಕುನ್ನಿ ಕೆಲ್ಸ ಅಲ್ಲೇ ಆಗಿದ್ದಂತೆ!
ಜನರು ನಿಮ್ಮ ಮೇಲೆ ತಕ್ಷಣಕ್ಕೇ ನಂಬಿಕೆ ಕಳೆದುಕೊಳ್ಳುತ್ತಾರೆ. ನಿಮ್ಮ ಮುಖವನ್ನೂ ಕೂಡ ನೋಡಲು ಬಯಸುವುದಿಲ್ಲ. ಒಂದು ದಿನ ನಾನು ಮುಂಜಾನೆ 4 ಗಂಟೆಗೇ ಎದ್ದೆ. ನನ್ನ ಆಫೀಸಿನ ಒಳಕ್ಕೆ ಹೋಗಿ ಕುರ್ಚಿಯ ಮೇಲೆ ಕುಳಿತು ಯೋಚಿಸತೊಡಗಿದೆ. 'ಈಗ ತಕ್ಷಣಕ್ಕೆ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವೇನು' ಎಂದು ಯೋಚಿಸಿದೆ.
ನಮ್ಮ ಮನೆಯ ಪಕ್ಕದಲ್ಲೇ ಇರುವ ನನ್ನ ಉತ್ತಮ ಸ್ನೇಹಿತ ನಿರ್ಮಾಪಕ ಯಶ್ ಚೋಪ್ರಾ ಅವರ ಮನೆಗೆ ಹೋದೆ. ಅವರ ಬಳಿಯಲ್ಲಿ ನಿಂತು 'ನನಗೆ ನಾನುಮಾಡಬಹುದಾದ ಯಾವುದಾದರೂ ಕೆಲಸ ಕೊಡಲು ಸಾಧ್ಯವೇ?' ಎಂದು ಕೇಳಿದೆ. ತಕ್ಷಣವೇ ಹಿಂದುಮುಂದು ಯೋಚಿಸದೇ ಅವರು 'ನಾನೊಂದು 'ಮೊಹಬ್ಬತ್' ಹೆಸರಿನ ಸಿನಿಮಾ ಮಾಡುತ್ತಿದ್ದೇನೆ. ಅರಲ್ಲಿ ನೀವು ಕೆಲಸ ಮಾಡಲು ಸಾಧ್ಯವೇ?' ಎಂದು ಕೇಳಿದೆ.
ಸಾವಿನ ದೃಶ್ಯಕ್ಕೆ ಸಂಬಂಧಿಸಿದ ಅದೊಂದು ಪ್ರಾಕ್ಟೀಸ್ ಕನ್ನಡ ಚಿತ್ರರಂಗದಲ್ಲಿದೆ, ಏನದು?
ಅದಕ್ಕೊಪ್ಪಿ ನಾನು ಕೆಲಸ ಮಾಡಲು ಶುರ ಮಾಡಿದೆ. ಅಲ್ಲಿಂದ ನನ್ನ ಜೀವನದ ಮತ್ತೊಂದು ಯಶಸ್ಸಿನ ಹೆಜ್ಜೆ ಶುರುವಾಯ್ತು. ಆವತ್ತು ನಾನು ಮಾಡಿದ ಒಂದು ನಿರ್ಧಾರ ಹಾಗು ಯಶ್ ಚೋಪ್ರಾ ಅವರು ಕೊಟ್ಟ ಕೆಲಸ ಇಂದಿನವರೆಗೂ ನಾನು ಯಶಸ್ಸಿನ ಜರ್ನಿಯಲ್ಲೇ ಇರುವಂತೆ ಮಾಡಿದೆ' ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.