Samisha Shetty: ಗಾಯಗೊಂಡ ಹಕ್ಕಿಗಾಗಿ ಗಾಯತ್ರಿ ಮಂತ್ರ ಜಪಿಸಿದ ಶಿಲ್ಪಾ ಶೆಟ್ಟಿ ಮಗಳು

Published : Jan 13, 2022, 02:57 PM ISTUpdated : Jan 13, 2022, 03:07 PM IST
Samisha Shetty: ಗಾಯಗೊಂಡ ಹಕ್ಕಿಗಾಗಿ ಗಾಯತ್ರಿ ಮಂತ್ರ ಜಪಿಸಿದ ಶಿಲ್ಪಾ ಶೆಟ್ಟಿ ಮಗಳು

ಸಾರಾಂಶ

ಗಾಯಗೊಂಡಿದ್ದ ಹಕ್ಕಿಗಾಗಿ ಗಾಯತ್ರಿ ಮಂತ್ರ ಜಪಿಸಿದ ಶಿಲ್ಪಾ ಮಗಳು ಬಾಲಿವುಡ್ ಅಮ್ಮ-ಮಗಳ ಕ್ಯೂಟ್ ವಿಡಿಯೋ

ಬಾಲಿವುಡ್(Bollywood) ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರ ಮಗಳು ಸಮೀಷಾ ಶೆಟ್ಟಿ ಕ್ಯೂಟ್ ಆಗಿ ನಿಧಾನವಾಗಿ ನಡೆಯುತ್ತಾಳೆ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯೋ ಶಿಲ್ಪಾ ಮಗಳು ಅಮ್ಮನ ಜೊತೆ ಹಬ್ಬಗಳನ್ನೂ ಆಚರಿಸುತ್ತಾಳೆ. ಎಲ್ಲ ಹಬ್ಬದಲ್ಲಿಯೂ ಅಮ್ಮನೊಂದಿಗೆ ಮ್ಯಾಚಿಂಗ್ ಡ್ರೆಸ್ ಹಾಕಿ ಮಿಂಚುವ ಸಮೀಷಾ ಅಣ್ಣನ ಮುದ್ದು ತಂಗಿ. ಇದೀಗ ನಟಿ ಮಗಳ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಮೀಶಾ ಗಾಯತ್ರಿ ಮಂತ್ರ(Gayatri Mantra) ಜಪಿಸುವುದನ್ನು ಕಾಣಬಹುದು. ಈ ಮುದ್ದಾದ ವಿಡಿಯೋ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ.

ಶಿಲ್ಪಾ ಶೆಟ್ಟಿ ಅವರ ಪುತ್ರಿ ಸಮೀಷಾ ಇತ್ತೀಚೆಗೆ ತಮ್ಮ ತೋಟದಲ್ಲಿ ಕಾಣಿಸಿಕೊಂಡ ಗಾಯಗೊಂಡ ಹಕ್ಕಿಗಾಗಿ ಪ್ರಾರ್ಥಿಸಿದ್ದಾರೆ.  ವೀಡಿಯೊದಲ್ಲಿ, ಸಮೀಶಾ ಮತ್ತು ಶಿಲ್ಪಾ ಪಕ್ಷಿಯು ಉತ್ತಮವಾಗಲು ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವುದನ್ನು ಕಾಣಬಹುದು. ನಂತರ ಪೆಟಾ ಇಂಡಿಯಾ ಈ ಪಕ್ಷಿಯನ್ನು ರಕ್ಷಿಸಿದೆ ಎಂದು ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಗೊಂಬೆಯಂತಿದ್ದಾಳೆ ಶಿಲ್ಪಾ ಮಗಳು, ಪುಟ್ಟ ಕಂಗಳ ತುಂಬಾ ಬರೀ ಅಚ್ಚರಿ

ಸಮೀಶಾ ಗಾರ್ಡನ್ ಏರಿಯಾದಲ್ಲಿ ನಿಂತಿದ್ದು, ಕ್ಯಾಮೆರಾಗೆ ಬೆನ್ನು ಹಾಕಿ, ಸಮೀಶಾ ನೀನು ಪ್ರಾರ್ಥನೆ ಮಾಡುತ್ತಿದ್ದೀಯಾ, ಬರ್ಡಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೀಯಾ? ಬರ್ಡಿಗೆ ಬೂ ಬೂ ಆಗಿದೆಯಾ? ಎಂದು ಕೇಳುತ್ತಿದ್ದಂತೆ ವೀಡಿಯೊ ಆರಂಭವಾಗಿದೆ. ಸಮೀಷಾ ಗಾಯಗೊಂಡ ಹಕ್ಕಿಯ ಕಡೆಗೆ ಕೈತೋರಿಸಿ ಬರ್ಡಿ ಬೂ ಬೌ ಎಂದಳು. ಶಿಲ್ಪಾ ತನ್ನ ಮಾತನ್ನು ಪುನರಾವರ್ತಿಸಿದಳು.

ಸಮೀಶಾ ಕಳವಳಗೊಂಡಂತೆ ಕಾಣಿಸಿದಳು. ಹಕ್ಕಿಯ ಕಡೆಗೆ ತೋರಿಸಿದಳು. ಬರ್ಡಿ ಸಾಯುತ್ತದೆಯೇ ಎಂದು ಹೆದರುತ್ತಾಳೆ. ಆಗ ಶಿಲ್ಪಾ ತನ್ನ ಮಗಳ ಬಳಿ ಮಂಡಿಯೂರಿ, ಇಲ್ಲ ಮಗು, ಬರ್ಡಿ ಇನ್ನೂ ಸಾಯುತ್ತಿಲ್ಲ, ಉತ್ತಮವಾಗಿ ಚೇತರಿಸುತ್ತಾಳೆ ಎಂದು ಹೇಳುತ್ತಾಳೆ. ನಂತರ ಕ್ಯಾಮೆರಾ ನಮಗೆ ಪಕ್ಷಿಯನ್ನು ತೋರಿಸುತ್ತದೆ. ಹಕ್ಕಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೀಯಾ? ಬೇಗ ಗುಣಮುಖವಾಗಲಿ ಬರ್ಡಿ, ಬೇಗ ಗುಣವಾಗಲಿ ಎಂದು ಮಗಳ ಜೊತೆಯಲ್ಲಿ ಕೈ ಜೋಡಿಸಿ ಪ್ರಾರ್ಥಿಸುತ್ತಾರೆ ಶಿಲ್ಪಾ ಶೆಟ್ಟಿ.

ವೀಡಿಯೊವನ್ನು ಹಂಚಿಕೊಂಡ ಶಿಲ್ಪಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಂದದ ಕ್ಯಾಪ್ಶನ್ ಕೊಟ್ಟಿದ್ದಾರೆ. ಮಕ್ಕಳು ನಿಜವಾಗಿಯೂ ಪರಿಶುದ್ಧ ಹೃದಯವನ್ನು ಹೊಂದಿದ್ದಾರೆ. ಸಮೀಶಾ ಇನ್ನೂ 2 ವರ್ಷದವಳಲ್ಲ. ಸಹಾನುಭೂತಿಯನ್ನು ಅನುಭವಿಸುವುದನ್ನು ನೋಡುವುದು ಅದ್ಭುತವಾಗಿದೆ. ಯಾರಿಗಾದರೂ ಪ್ರಾರ್ಥನೆ ಮತ್ತು ಬೇಷರತ್ತಾದ ಪ್ರೀತಿ ಬೇಕು ಎಂದು ಸಹಜತೆಯಿಂದ ತಿಳಿಯುತ್ತದೆ. ಪ್ರಾರ್ಥನೆ ಮತ್ತು ನಂಬಿಕೆಯು ಜಗತ್ತನ್ನು ಸುತ್ತುವಂತೆ ಮಾಡುತ್ತದೆ. ದೊಡ್ಡವರಾದ ನಾವು ಅದನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೆ ಎಂದು ಶಿಲ್ಪಾ ಬರೆದಿದ್ದಾರೆ.

ಹಬ್ಬದ ದಿನ ಅಣ್ಣನಿಗೆ ಶುಭಾಶಯ ಹೇಳಿದ ಶಿಲ್ಪಾ ಶೆಟ್ಟಿ ಮಗಳು

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) ಅವರು ತಮ್ಮ ಮಗಳು ಸಮಿಶಾ ಶೆಟ್ಟಿ ಕುಂದ್ರಾ (Shamisha Shetty Kundra) ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.  ತಾಯಿ-ಮಗಳ ಜೋಡಿ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದಾಗ ಪಾಪರಾಜಿಗಳ ಕ್ಯಾಮಾರಾಕ್ಕೆ ಸೆರೆ ಸಿಕ್ಕಿದ್ದಾರೆ. ಈ ಸಮಯದ ಕ್ಯೂಟ್‌ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗಿತ್ತು.  ಡಿಸೆಂಬರ್ 23, 2021 ರಂದು, ಶಿಲ್ಪಾ ಶೆಟ್ಟಿ  ತಮ್ಮ ಮಗಳು ಸಮಿಶಾ ಶೆಟ್ಟಿ ಕುಂದ್ರಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಮಯದಲ್ಲಿ  ತಾಯಿ-ಮಗಳು  ಹೆಚ್ಚು ಕಡಿವೆ ಒಂದೇ ರೀತಿಯ ಔಟ್‌ಫಿಟ್‌ ಧರಿಸಿದ್ದರು. ಪುಟ್ಟ ಸಮಿಶಾ ಬಿಳಿ ಸ್ವೆಟರ್ ಮತ್ತು ಪ್ಯಾಂಟ್‌ ಧರಿಸಿ ಎರಡು ಪೋನಿ ಟೇಲ್‌ನೊಂದಿಗೆ ಮುದ್ದಾಗಿ ಕಾಣುತ್ತಿದ್ದಳು. ಇನ್ನೊಂದು ಬದಿಯಲ್ಲಿ, ಆಕೆಯ ಗಾರ್ಜಿಯಸ್‌ ಮಮ್ಮಿ ಕಪ್ಪು ಲೆದರ್‌ ಪ್ಯಾಂಟ್‌ ಜೊತೆ ಮ್ಯಾಚ್‌ ಆಗುವ ಎತ್ತರದ ಬೂಟುಗಳನ್ನು ಪೇರ್‌ ಮಾಡಿಕೊಂಡಿದ್ದರು ಮತ್ತು ಅವರು ಬಹುತೇಕ  ಮಗಳ ರೀತಿಯ ಬಿಳಿ ಸ್ವೆಟರ್ ಅನ್ನು ಧರಿಸಿರುವುದನ್ನು ಕಾಣಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?