Actor Siddharth booked: ಸೈನಾಗೆ ಅವಮಾನ, ಸೌತ್ ನಟನ ವಿರುದ್ಧ ಕೇಸ್

By Suvarna News  |  First Published Jan 13, 2022, 11:44 AM IST
  • ಸೈನಾ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಪೇಚಿಗೆ ಸಿಲುಕಿದ ನಟ
  • ಸೌತ್ ನಟನಿಗೆ ಸಂಕಷ್ಟ, ಪೊಲೀಸ್ ಕೇಸ್

ಹೈದರಾಬಾದ್(ಜ.13): ಹೈದರಾಬಾದ್ ಪೊಲೀಸರು ಕಾಲಿವುಡ್ ನಟ ಸಿದ್ಧಾರ್ಥ್‌ ವಿರುದ್ಧ ಕೇಸು ದಾಖಲಿಸಿದ್ದಾರೆ. ಒಲಿಪಿಂಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್(Saina Nehwal) ವಿರುದ್ಧ ಅವಹೇಳನಕಾರಿ ಹೇಳಿಕೆ ಕಮೆಂಟ್‌ಗಳನ್ನು ಮಾಡಿದ ಹಿನ್ನೆಲೆ ನಟನ ವಿರುದ್ಧ ಕೇಸ್ ದಾಖಲಾಗಿದೆ. ಸೈಬರ್ ಕ್ರೈಂ ವಿಭಾಗದ ಎಡಿಷನಲ್ ಡಿಎಸ್ಪಿ ಕೆವಿಎಂ ಪ್ರಸಾದ್ ಅವರು, ಪ್ರೇರಣಾ ಎಂಬಾಕೆ ಸೈಬರ್ ಕ್ರೈಂಗೆ ಬಂದು ಸಿದ್ಧಾರ್ಥ್‌ ವಿರುದ್ಧ ದೂರು ಕೊಟ್ಟಿದ್ದಾರೆ. ಸೈನಾ ಇರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವುದಕ್ಕೆ ದೂರು ನೀಡಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಿದ್ಧಾರ್ಥ್‌ಗೆ ನೋಟಿಸ್ ನೀಡಲಾಗುವುದು ಎಂದು ಹೆಚ್ಚುವರಿ ಡಿಸಿಪಿ ತಿಳಿಸಿದ್ದಾರೆ.

Tap to resize

Latest Videos

ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್‌ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!

ಜನವರಿ 6 ರಂದು ಟ್ವಿಟರ್ ಪೋಸ್ಟ್‌ನಲ್ಲಿ ನಟ, ಜನವರಿ 5 ರಂದು ಪಂಜಾಬ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಮತಿ ನೆಹ್ವಾಲ್ ಅವರ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ ನಂತರ ವಿವಾದದಲ್ಲಿ ಸಿಲುಕಿದ್ದರು. ವಿವಿಧ ಕಾರ್ಯಕರ್ತರು ಸಿದ್ಧಾರ್ಥ್ ಅವರ ಕಾಮೆಂಟ್‌ಗಳನ್ನು ಲೈಂಗಿಕ, ಸ್ತ್ರೀದ್ವೇಷ ಎಂದು ಕರೆದರು. ಅವರು ಶ್ರೀಮತಿ ನೆಹ್ವಾಲ್ ಅವರಿಗೆ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದರು.

ನಟನ ಕಮೆಂಟ್ ನೋಡಿ ನೆಟ್ಟಿಗರು ಸಿಟ್ಟಾಗಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಹಿಳೆಯರ ಘನತೆಗೆ ಅಗೌರವ,  ಅವಮಾನ ಮಾಡುವ, ಸ್ತ್ರೀದ್ವೇಷ ಮತ್ತು ಅತಿರೇಕದ ವರ್ತನೆ ಎಂದು ನಟನ ವಿರುದ್ಧ ಕಿಡಿಕಾರಿದ್ದಾರೆ. ನಟ ಈ ಎಲ್ಲ ಬೆಳವಣಿಗೆಗಳ ನಂತರ ನೆಹ್ವಾಲ್ ಬಳಿ ಕ್ಷಮೆಯಾಚಿಸಿದರು. ಬಹಿರಂಗ ಪತ್ರದಲ್ಲಿ ಸಿದ್ಧಾರ್ಥ್ ಅವರು ತಮ್ಮ ಪದಗಳ ಆಟ ಮತ್ತು ಹಾಸ್ಯ ಯಾವುದೇ ದುರುದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಭಾರಿ ಸದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ  ಭದ್ರತಾ ಲೋಪ(PM Modi Security lapse) ಪ್ರಕರಣದ ಕುರಿತು ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಭಾರತದ ತಾರಾ ಟೆನಿಸ್‌ ಆಟಗಾರ್ತಿ ಸೈನಾ ನೆಹ್ವಾಲ್‌ (Saina Nehwal) ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಪ್ರಧಾನಿ ಭದ್ರತೆಯಲ್ಲಾದ ಲೋಪದ ಬಗ್ಗೆ ಖಂಡಿಸಿದ್ದರು. ಆದರೆ ಸೈನಾ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ನಟ ಸಿದ್ಧಾರ್ಥ್ ಆಕೆಯ ವಿರುದ್ಧ ಅಸಹ್ಯಕರ ಪದವನ್ನು ಬಳಸಿದ್ದಾರೆ. ಹೀಗಾಗಿ ನೆಟ್ಟಿಗರು ನಟ ಸಿದ್ಧಾರ್ಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ  ಕ್ರಿಕೆಟಿಗ ಸುರೇಶ್ ರೈನಾ ಸೈನಾ, ಸದ್ಗುರು ನೆಹ್ವಾಲ್‌ಗೆ  ತಮ್ಮ ಬೆಂಬಲ ಸೂಚಿಸಿದ್ದಾರೆ. 

'ಯಾವುದೇ ರಾಷ್ಟ್ರವು ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ರಾಜಿ ಮಾಡಿಕೊಂಡರೆ ತಾನು ಸುರಕ್ಷಿತ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಪ್ರಬಲವಾದ ಪದಗಳಲ್ಲಿ ಇದನ್ನು ಖಂಡಿಸುತ್ತೇನೆ, ಅರಾಜಕತಾವಾದಿಗಳ ಹೇಡಿತನದ ದಾಳಿಯನ್ನು ನಾನು ಖಂಡಿಸುತ್ತೇನೆ. #BharatStandsWithModi #PMModi" ಎಂದು ಜನವರಿ 5 ರಂದು ನೆಹ್ವಾಲ್‌ ಟ್ವೀಟ್‌ ಮಾಡಿದ್ದರು.  ಇದಕ್ಕೆ ಪ್ರತ್ಯುತ್ತರವಾಗಿ ಸಿದ್ಧಾರ್ಥ್ ಕಟುವಾದ ಪದವನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.

ರೈನಾ (Suresh Raina) ಕೂಡ ನೆಹ್ವಾಲ್ ಅನ್ನು ಬೆಂಬಲಿಸಿದ್ದು 'ಕ್ರೀಡಾಪಟುಗಳು ತಮ್ಮ ದೇಶಕ್ಕಾಗಿ ತಮ್ಮ ಬೆವರು ಮತ್ತು ರಕ್ತವನ್ನು ನೀಡುತ್ತಾರೆ. ನಮ್ಮ ಹೆಮ್ಮೆ ಮತ್ತು ಕ್ರೀಡಾ ಐಕಾನ್ ಸೈನಾ ವಿರುದ್ಧ ಇಂತಹ ಸಡಿಲವಾದ ಭಾಷೆಯನ್ನು ಬಳಸುತ್ತಿರುವುದು ದುಃಖಕರವಾಗಿದೆ. ಭಾರತೀಯ ಕ್ರೀಡಾಪಟುವಾಗಿ ಮತ್ತು ಮಾನವನಾಗಿ, ನಾನು ಸೈನಾ ಅವರೊಂದಿಗೆ ನಿಲ್ಲುತ್ತೇನೆ ಮತ್ತು ಅಸಹ್ಯಕರ ಭಾಷೆಯನ್ನು ಖಂಡಿಸುತ್ತೇನೆ ' ಎಂದು ಟ್ವೀಟ್ ಮಾಡಿದ್ದಾರೆ.

click me!