ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ? ಇಲ್ಲಿದೆ ಡಿಟೇಲ್ಸ್
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಯ ಕೊನೆಯ ಪುತ್ರಿ ಸಮೀಶಾಗೆ ಇಂದು ನಾಲ್ಕನೆಯ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರು ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ಕುಂದ್ರಾ, 2009ರಲ್ಲಿ ಮದುವೆಯಾಗಿದ್ದರು. 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್‌ಗೆ ಅಪ್ಪ-ಅಮ್ಮ ಆದರು. 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು.
2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೇವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣಗೆ ಮತ್ತೊಂದು ಗರಿ! ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ದಕ್ಕಿದೆ ಸ್ಥಾನ
ಆದ್ದರಿಂದ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಮುಂದಾದೆವು. ಬಳಿಕ ನಾವು ಮತ್ತೊಮ್ಮೆ ತಂದೆ-ತಾಯಿ ಆಗುತ್ತಿದ್ದೇವೆ ಎಂಬುದು ಫೆಬ್ರವರಿ ತಿಂಗಳಿನಲ್ಲಿ ತಿಳಿಯಿತು. ಅದಕ್ಕೂ ಮೊದಲು ದತ್ತು ಮಗು ಪಡೆಯುವ ಬಗ್ಗೆ ಯೋಚನೆ ಮಾಡಿದೆವು. ಆದರೆ ಯಾಕೋ ಸರಿ ಕಾಣಿಸಲಿಲ್ಲ. ಆದ್ದರಿಂದ ಬಾಡಿಗೆ ತಾಯ್ತನದ ಬಗ್ಗೆ ಯೋಚಿಸಿದೆವು. ಏಕೆಂದರೆ ವಿಹಾನ್ಗೆ ಒಡಹುಟ್ಟಿದವರು ಇರಬೇಕೆಂದು ನಾವು ಬಯಸಿದ್ದೆವು. ಅದು ಏಕೆ ಮುಖ್ಯ ಎನ್ನುವುದು ಕೂಡ ನಮಗೆ ಚೆನ್ನಾಗಿ ತಿಳಿದಿತ್ತು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೊನೆಗೆ ನಾವು ಬಾಡಿಗೆ ತಾಯ್ತನದ ಮೊರೆ ಹೋಗಲು ನಿರ್ಧರಿಸಿದೆವು ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.
ಅದಾದ ಬಳಿಕ ನಟಿಯ ಬಾಳಲ್ಲಿ ಬಿರುಗಾಳಿ ಬಂದದ್ದು ಎಲ್ಲರಿಗೂ ತಿಳಿದದ್ದೇ. 2021ರಲ್ಲಿ ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು. ಆದರೆ ಅದರಿಂದ ಹೊರಬಂದು ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಇಬ್ಬರೂ ಸದ್ಯ ನಿರಾಳರಾಗಿದ್ದಾರೆ.
ಪ್ರೀತಿ, ಕಾಮದ ಟಿಪ್ಸ್ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್ ವಿಷ್ಯ ಹೇಳಿದ ನಟಿ ಜೀನತ್ ಅಮಾನ್!