ಪ್ರೀತಿ, ಕಾಮದ ಟಿಪ್ಸ್ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್ ವಿಷ್ಯ ಹೇಳಿದ್ದಾರೆ ನಟಿ ಜೀನತ್ ಅಮಾನ್, ಬಾಲಿವುಡ್ ತಾರೆ ಹೇಳಿದ್ದೇನು?
ಬಾಲಿವುಡ್ನ ಹಿರಿಯ ನಟಿ ಜೀನತ್ ಅಮನ್ (Zeenat Aman) 70 ರಿಂದ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು. ತಮ್ಮ ಸೆಕ್ಸಿ ಲುಕ್ ಹಾಗೂ ಅಮಲೇರಿದ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಇವರು. ತಮ್ಮ ಮಾದಕ ನೋಟ, ನೃತ್ಯದಿಂದ ಜೀನತ್ ಹಲವರ ಹೃದಯ ಗೆದ್ದಿದ್ದರು. ಆ ಕಾಲದಲ್ಲಿಯೇ ಅತ್ಯಂತ ಬೋಲ್ಡ್ ಆಗಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ಹರೇ ಕೃಷ್ಣ ಹರೇ ರಾಮ್ ಚಿತ್ರದಲ್ಲಿನ ದಮ್ಮರೇ ದಂ... ಹಾಡಂತೂ ಕೆಲ ದಶಕಗಳವರೆಗೆ ಎಲ್ಲರ ಬಾಯಲ್ಲೂ ನಲಿದಾಡಿತ್ತು. ಇಂಥ ನಟಿ ಕೆಲ ದಿನಗಳ ಹಿಂದೆ ದುಡ್ಡು ಹಾಗೂ ಜೀವನದ ಪಾಠವನ್ನು ಜಾಹೀರಾತಿನ ಮೂಲಕ ಹೇಳಿದ್ದರು. 'ನಟನಾಗುವುದು ಸುಲಭ, ಆದರೆ ನಿಮ್ಮನ್ನು ನೀವೇ ತಿಳಿದುಕೊಳ್ಳುವುದು ಹಾಗೂ ನೀವು ನೀವೇ ಆಗಿರುವುದು ತುಂಬಾ ಕಷ್ಟ' ಎಂದಿದ್ದಾರೆ. 'ನೀವು ಯಾರು?' 'ನಿಮ್ಮ ಉದ್ದೇಶವೇನು?' 'ನಾನೇಕೆ ಇಲ್ಲಿದ್ದೇನೆ?' ಎಂಬ ಅಸ್ತಿತ್ವವಾದದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ನೀವು ನೀವಾದಾಗ ಉದ್ಭವಿಸುತ್ತದೆ ಎಂದಿರುವ ನಟಿ, ಜೀವನದಲ್ಲಿ ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಹಣದಿಂದ ಪ್ರೀತಿ ಖರೀದಿಸಲು ಸಾಧ್ಯವಿಲ್ಲ ಎಂದಿದ್ದರು.
ಇದೀಗ ನಟಿಗೆ 72 ವರ್ಷ ವಯಸ್ಸು. ನಿನ್ನೆ ಎಲ್ಲೆಡೆ ಪ್ರೇಮಿಗಳ ದಿನ ಆಚರಿಸಿದ್ದ ಸಂದರ್ಭದಲ್ಲಿ, ಪ್ರೀತಿ ಪ್ರೇಮದ ಕುರಿತು ಹಾಗೂ ತಾವು ಈ ವಯಸ್ಸಿನಲ್ಲಿ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇವೆ ಎನ್ನುವುದರ ಕುರಿತು ನಟಿ ಮಾತನಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಅಂದಹಾಗೆ ನಟಿ, ಸದ್ಯ ಒಂಟಿಯಾಗಿರಬಹುದು, ಆದರೆ ವ್ಯಕ್ತಿಯ ಜೀವನದಲ್ಲಿ ಸಂಬಂಧಗಳು ಎಷ್ಟು ಮುಖ್ಯ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, 2024 ರ ಪ್ರೇಮಿಗಳ ದಿನದ ಸಂದರ್ಭದಲ್ಲಿ, ಜೀನತ್ ಅಮನ್ ತಮ್ಮ ಅಭಿಮಾನಿಗಳಿಗೆ ಡೇಟಿಂಗ್ ಸಲಹೆಗಳನ್ನು ನೀಡಿದ್ದು ಅದೀಗ ವೈರಲ್ ಆಗಿದೆ.
ಡೇಟಿಂಗ್ ಮಾಡ್ತಿದ್ರೆ ಹಾಸಿಗೆ ವಿಷ್ಯದಲ್ಲಿ ಹೇಗಿರಬೇಕು? ಬಾಲಿವುಡ್ ನಟಿ ಜೀನತ್ ಅಮನ್ ಪಾಠ
ಜಾತಿ, ಧರ್ಮ, ವರ್ಗ ಮತ್ತು ಲಿಂಗದ ಕಾರಣದಿಂದ ಯಾರ ಕುಟುಂಬಗಳು ತಮ್ಮ ಸಂಗಾತಿಯನ್ನು ಇಷ್ಟಪಡುವುದಿಲ್ಲವೋ ಅಂತಹ ಪ್ರೇಮಿಗಳಿಗೆ ಈ ಸಲಹೆ ಎಂದಿದ್ದಾರೆ ನಟಿ. ಜೀನತ್ ಅಮಾನ್ ತಮ್ಮ ಪೋಸ್ಟ್‌ನಲ್ಲಿ, 'ಜಾತಿ, ವರ್ಗ, ಧರ್ಮ, ಲಿಂಗ ಅಥವಾ ಅಂತಹ ಯಾವುದೇ ವಿಭಜಕ ವಿಷಯದ ಕಾರಣದಿಂದ ನಿಮ್ಮ ಕುಟುಂಬವು ನಿಮ್ಮ ಸಂಬಂಧವನ್ನು ವಿರೋಧಿಸಿದರೆ, ಅವರಿಗೆ ಸವಾಲು ಹಾಕಿ! ಆದರೆ ಈ ಕಾರಣಗಳಿಗಾಗಿ ಅವನು ನಿಮ್ಮ ಸಂಗಾತಿಯನ್ನು ಇಷ್ಟಪಡದಿದ್ದರೆ, ಅವನ ಮಾತನ್ನು ಕೇಳಿ. ಅವರು ಸರಿ ಎಂದು ನಾನು ಹೇಳುತ್ತಿಲ್ಲ ... ಆಗಾಗ್ಗೆ ನಮ್ಮ ಕುಟುಂಬವು ದಾರಿತಪ್ಪಿಸುವ ದೃಷ್ಟಿಕೋನವನ್ನು ನೀಡಬಹುದು ಎಂದು ನಾನು ಹೇಳುತ್ತಿದ್ದೇನೆ. ಅಮ್ಮ (ತಾಯಿ) ಮಾತು ಕೇಳಿದ್ದರೆ ಖಂಡಿತಾ ಒಂದೋ ಎರಡೋ ಸಂದರ್ಭಗಳು ಬಂದಿವೆ ಎಂದಿದ್ದಾರೆ.
ಹೊಸ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವ ಕುರಿತು ಸಲಹೆಯನ್ನು ನೀಡುತ್ತಾ, ಜೀನತ್ ಅಮಾನ್, 'ಸಂಬಂಧದ ಮೊದಲ ಕೆಲವು ಕಷ್ಟದ ತಿಂಗಳುಗಳು ನಿಮ್ಮನ್ನು ನಿಮ್ಮ ಇಂದ್ರಿಯಗಳಿಂದ ದೂರವಿಡುತ್ತವೆ. ಇವು ಸಾಮಾನ್ಯವಾಗಿ ವ್ಯಾಮೋಹ ಮತ್ತು ಕಾಮ, ಇದನ್ನು ಪ್ರೀತಿ ಎಂದು ತಪ್ಪಾಗಿ ಗ್ರಹಿಸಬೇಡಿ. ಆ ರಂಗಗಳಲ್ಲಿಯೂ ಹೊಂದಾಣಿಕೆಯ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ ತಾವು ಈ ವಯಸ್ಸಿನಲ್ಲಿ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವುದನ್ನು ನಟಿ ಬಹಿರಂಗಪಡಿಸಿದ್ದಾರೆ. ಈ ದಿನಗಳಲ್ಲಿ ನಾನು ನನ್ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಪ್ರೀತಿಯ, ದೀರ್ಘಾವಧಿಯ ಪಾಲುದಾರರು ಮಾಡುವ ಎಲ್ಲಾ ಕೆಲಸಗಳನ್ನು ನಾನು ನನಗಾಗಿ ಮಾಡುತ್ತೇನೆ. ನಿಮಗೆ ಅರ್ಹವಾದಷ್ಟು ನಿಮ್ಮನ್ನು ಪ್ರೀತಿಸುವ ವ್ಯಕ್ತಿಯನ್ನು ನೀವು ಕಂಡುಹಿಡಿಯಲಾಗದಿದ್ದರೆ, ಅದು ನಿಮ್ಮನ್ನು ಪ್ರೀತಿಸುವ ಸಮಯ ಎಂದು ಹೇಳುವ ಮೂಲಕ ನಿಮ್ಮನ್ನು ನೀವು ಮೊದಲು ಪ್ರೀತಿಸಿ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಹೃತಿಕ್ಗೆ ಇದೇನಾಯ್ತು? ಊರುಗೋಲು ಹಿಡಿದ ಫೋಟೋ ವೈರಲ್!