
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಕಳೆದೊಂದು ವಾರದಿಂದ ಬಾಲಿವುಡ್ ತಾರೆ ಸುದ್ದಿಯಲ್ಲಿದ್ದಾರೆ.
ಪೋರ್ನ್ ವಿಡಿಯೋ ನಿರ್ಮಾಣ ಮತ್ತು ಹಂಚಿಕೆ ವಿಚಾರವಾಗಿ ರಾಜ್ ಕುಂದ್ರಾ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು ಈಗಾಗಲೇ ನಟಿ ಶಿಲ್ಪಾ ಹಲವು ಆಫರ್, ಸಿನಿಮಾ, ಜಾಹೀರಾತುಗಳನ್ನು ಕಳೆದುಕೊಳ್ಳುವಂತಾಗಿದೆ. ಇದೀಗ ನಟಿ ತಮ್ಮ ಕುರಿತು ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ನಟಿ ಕೇಸ್ ದಾಖಲಿಸಿದ್ದಾರೆ.
ಶಿಲ್ಪಾ ಜೊತೆ ಸಂಬಂಧ ಚೆನ್ನಾಗಿರ್ಲಿಲ್ಲ..! ಮನೆಲಿದ್ದಾಗೆಲ್ಲಾ ಸ್ಟ್ರೆಸ್ ಆಗಿದ್ದ ರಾಜ್ ಕುಂದ್ರಾ
ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಶಿಲ್ಪಾ ಶೆಟ್ಟಿ 29 ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧ ಸುಳ್ಳು ವರದಿಗಾರಿಕೆ ಹಾಗೂ ಪೋರ್ನೋಗ್ರಫಿ ಕೇಸ್‌ನಲ್ಲಿ ಆಕೆಯ ಇಮೇಜ್ ಕೆಡಿಸಿರುವ ಆರೋಪ ಮಾಡಿದ್ದಾರೆ.
"
ಈ ಘಟನೆ ಆಕೆಯ ಘನತೆ ದೊಡ್ಡ ನಷ್ಟವುಂಟುಮಾಡಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿ ಮಾಧ್ಯಮ ಕ್ಷಮೆ ಕೇಳಿ, ಅಂತಹ ಕಂಟೆಂಟ್ ಅಳಿಸಿ ಹಾಕಬೇಕು. ಇದಕ್ಕೆ 25 ಕೋಟಿ ಪರಿಹಾರ ನೀಡಬೇಕು ಎಂದು ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.