Happy Birthday Sanju: ಅಧೀರನ ಸ್ಪೆಷಲ್ ಪೋಸ್ಟರ್ ರಿಲೀಸ್

By Suvarna NewsFirst Published Jul 29, 2021, 3:16 PM IST
Highlights
  • Happy Birthday ಸಂಜಯ್ ದತ್
  • ಬಾಲಿವುಡ್ ನಟನ ಬುನಿರೀಕ್ಷಿತ ಕೆಜಿಎಫ್ ಪೋಸ್ಟರ್ ರಿಲೀಸ್

ಸೂಪರ್ ಸ್ಟಾರ್ ಸಂಜಯ್ ದತ್ ಅವರ ಜನ್ಮದಿನದ ಆಚರಣೆಗೆ ವಿಶೇಷ ಕಳೆ ಬಂದಿದೆ. ರಾಷ್ಟ್ರದಾದ್ಯಂತದ ಅಭಿಮಾನಿಗಳು ಸಂಜುಗೆ ವಿಶ್ ಮಾಡ್ತಿದ್ದರೆ, ಕೆಜಿಎಫ್ 2 ತಯಾರಕರು ತಮ್ಮ ಎಲ್ಲ ಅಭಿಮಾನಿಗಳಿಗೆ ವಿಶೇಷ ಸರ್ಪೈಸ್ ಕೊಟ್ಟಿದ್ದಾರೆ.

ವರ್ಷದ ಬಹು ನಿರೀಕ್ಷಿತ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ನಟನ ವಿಶೇಷ ದಿನದಂದು ಅಧೀರ/  ಸಂಜಯ್ ದತ್ ಅವರ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ.

ಸಂಜಯ್ ದತ್ ಬರ್ತಡೇಗೆ ಕೆಜಿಎಫ್‌ನಿಂದ ಗಿಫ್ಟ್; ‘ಅಧೀರ’ ಫಸ್ಟ್‌ಲುಕ್ ರಿಲೀಸ್

ಡಾರ್ಕ್ ಕಲರ್‌ನ ಈ ಪೋಸ್ಟರ್‌ನಲ್ಲಿ ಸಂಜು ಕೆಜಿಎಫ್ ಲುಕ್ ರಿವೀಲ್ ಆಗಿದ್ದು, ಸಖತ್ ರೆಸಪಾನ್ಸ್ ಸಿಕ್ಕಿದೆ. ನಟನ ಹೊಸ ನೋಟಕ್ಕೆ ಎಲ್ಲೆಡೆಯಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Thank you so much everyone for all the warm birthday wishes. Working on has been amazing. I know you all have been waiting for the film's release for a long time and I assure you that it'll be worth the wait! pic.twitter.com/zXSqJGeb6i

— Sanjay Dutt (@duttsanjay)

ಪ್ರಶಾಂತ್ ನೀಲ್ ನಿರ್ದೇಶಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕೆಜಿಎಫ್ 2 ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಾಗಿದ್ದು ಈ ಚಿತ್ರದಲ್ಲಿ ರವೀನಾ ಟಂಡನ್ ಜೊತೆಗೆ ಪ್ಯಾನ್-ಇಂಡಿಯನ್ ಸೂಪರ್ ಸ್ಟಾರ್ ಯಶ್ ಪ್ರಮುಖ ಪಾತ್ರದಲ್ಲಿದ್ದಾರೆ.

click me!