ಅನಂತ್​ ಅಂಬಾನಿಯನ್ನು ಕೆಲ ದಿನ ನನ್ನ ಬಳಿ ಬಿಡಿ ಎಂದ ರಾಖಿ! ಕಾರಣ ಕೇಳಿ ನೆಟ್ಟಿಗರು ಕಿಡಿಕಿಡಿ

Published : Mar 07, 2024, 09:24 PM IST
ಅನಂತ್​ ಅಂಬಾನಿಯನ್ನು ಕೆಲ ದಿನ ನನ್ನ ಬಳಿ ಬಿಡಿ ಎಂದ ರಾಖಿ! ಕಾರಣ ಕೇಳಿ ನೆಟ್ಟಿಗರು ಕಿಡಿಕಿಡಿ

ಸಾರಾಂಶ

ಅನಂತ್​ ಅಂಬಾನಿಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ವಿಡಿಯೋ ಶೇರ್​ ಮಾಡಿದ ನಟಿ ರಾಖಿ ಸಾವಂತ್​.  ನೆಟ್ಟಿಗರು ಕಿಡಿಕಿಡಿ  

ಅಂಬಾನಿಜೀ ರಾಖಿ ಸಾವಂತ್​ ನಿಮಗೆ ಹಲವಾರು ರೀತಿಯಲ್ಲಿ ಉಪಯೋಗ ಆಗುತ್ತಾಳೆ. ನೀವು ನನ್ನನ್ನು ಹೈಯರ್​ ಮಾಡಿ. ನಿಮ್ಮ ಮಗ ಅನಂತ್​ ಅಂಬಾನಿಯವರನ್ನು ನನ್ನ ಬಳಿ ಬಿಡಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಮಾಡಿರುವ ರಾಖಿ ಸಾವಂತ್​ ಇದಕ್ಕೆ  ಕಾರಣವನ್ನು ನೀಡಿ ಇದೀಗ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದರು, ನಟಿಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು, ಅಷ್ಟಕ್ಕೂ ರಾಖಿ ಸಾವಂತ್​ ಹೇಳಿದ್ದೇನೆಂದರೆ, ಅನಂತ್​ ಅಂಬಾನಿಯವರ ತೂಕ ಸಿಕ್ಕಾಪಟ್ಟೆ ಹೆಚ್ಚಿದೆ. ನಿಮ್ಮ ಸೊಸೆ ಎಷ್ಟೊಂದು ನಾಜೂಕಾಗಿ, ಸೂಕ್ಷ್ಮವಾಗಿ ಇದ್ದರು, ಇದರಿಂದ ಐದು ದಿನ ಅನಂತ್​ ಅವರನ್ನು ನನ್ನ ಬಳಿ ಬಿಡಿ. ಅವರ ಸೈಜ್​ ಜೀರೋ ಮಾಡುವೆ. ಅವರಿಗೆ ಸಂಪೂರ್ಣ ತೃಪ್ತಿ ಪಡಿಸುವ ಮೂಲಕ ಜೀರೋ ಫಿಗರ್​ ಮಾಡಿ ಕಳುಹಿಸುವೆ. ಅದು ಹೇಗೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ಖಂಡಿತ ಮಾಡುತ್ತೇನೆ. ಇದರಿಂದ ಎಲ್ಲರೂ ಖುಷಿಯಾಗಿ ಇರುತ್ತಾರೆ ಎಂದಿದ್ದರು, 

ಆದರೆ ಈ ರೀತಿ ಹೇಳುವಾಗ ಅವರು ಅಸಭ್ಯವಾಗಿ ಕೂಡ ವರ್ತಿಸಿರುವುದನ್ನು ನೋಡಿ ನೆಟ್ಟಿಗರು ಕಿಡಿಕಿಡಿಯಾಗಿದ್ದರು, ಅನಂತ್​ ಅಂಬಾನಿಯವರಿಗೆ ವೈದ್ಯಕೀಯ ಸಮಸ್ಯೆ ಇದೆ. ಇದೇ ಕಾರಣಕ್ಕೆ ಅವರು ಇದಾಗಲೇ ಹಲವು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು, ಅವರನ್ನು ಈ ರೀತಿಯಲ್ಲಿ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ರಾಖಿಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದರು, ಇನ್ನು ಕೆಲವರು ತೃಪ್ತಿ ಪಡಿಸುವೆ ಎನ್ನುವ ಮೂಲಕ ಅಸಭ್ಯವಾದ ಹೇಳಿಕೆ, ಅಂಗಗಳ ಚಲನೆ ಮಾಡಿರುವ ನೀನೊಬ್ಬಳು ಹೆಣ್ಣಾ ಎಂದು ಪ್ರಶ್ನಿಸುತ್ತಿದ್ದರು, ಇದಾಗಲೇ ಹಲವರನ್ನು ಮದುವೆಯಾಗಿ ಇಲ್ಲಸಲ್ಲದ್ದನ್ನೆಲ್ಲಾ ಮಾಡಿರುವ ನೀನು ಈ ರೀತಿ ಅಶ್ಲೀಲವಾಗಿ ವರ್ತಿಸಿರುವುದನ್ನು ನೋಡಿದರೆ ಹೆಣ್ಣಿನ ಜನ್ಮಕ್ಕೆ ನೀನು ಕಳಂಕ ಎಂದಿದ್ದರು, 

ಮದ್ವೆಗೆ ಯಾಕೆ ಕರೆದಿಲ್ಲ? ಹಾಟ್‌-ಸೆಕ್ಸಿಯಾಗಿ ಬರ್ತಿದ್ದೆ, ಪಾತ್ರೆ ತೊಳೀತಿದ್ದೆ, ರೂಮ್‌ ಕ್ಲೀನ್ ಮಾಡ್ತಿದ್ದೆ, ಮತ್ತು...

ಇನ್ನೊಂದು ವಿಡಿಯೋದಲ್ಲಿ ನಟಿ ನಿನ್ನೆಯಷ್ಟೇ ತಮ್ಮನ್ನು ಯಾಕೆ ಮದುವೆಗೆ ಕರೆದಿಲ್ಲ ಎಂದು ಪ್ರಶ್ನಿಸಿದ್ದರು. ಅಂಬಾನಿಜೀ... ಮದ್ವೆಗೆ ನನ್ನನ್ಯಾಕೆ ಕರೆದಿಲ್ಲ? ನಾನು ಹೇಗೆ ಡ್ಯಾನ್ಸ್‌ ಮಾಡ್ತಿದ್ದೆ ಎನ್ನುವುದು ನಿಮಗೆ ಗೊತ್ತಿಲ್ವಾ? ಮುನ್ನಿ ಬದ್ನಾಮ್‌ ಹುಯೀ ಅಂಥ ಎಷ್ಟೋ ಸೆಕ್ಸಿ ಡ್ಯಾನ್ಸ್‌ ಮಾಡಿದ್ದೇನೆ. ನೀವು ನೋಡಿಲ್ವಾ? ನನ್ನನ್ನು ಯಾಕೆ ಕರೆದಿಲ್ಲಾ ಅಂಬಾನಿಜೀ... ಯಾರ್‍ಯಾರಿಗೋ ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕರೆಸಿಕೊಂಡ್ರಿ. ರಿಹಾನಾಗೆ ಅಷ್ಟೆಲ್ಲಾ ದುಡ್ಡು ಕೊಟ್ಟಿದ್ರೂ ಹರಿದ ಬಟ್ಟೆಯೊಂದಿಗೆ ಪರ್ಫಾಮ್ ಮಾಡಿದ್ಲು... ನನ್ನನ್ನು ಯಾಕೆ ಕರೆದಿಲ್ಲ? ನನ್ನನ್ನು ಕರೆದಿದ್ರೆ ಹಾಟ್‌-ಸೆಕ್ಸಿಯಾಗಿ ಬರುತ್ತಿದ್ದೆ.. ಇನ್ನು ಏನೆಲ್ಲಾ ಮಾಡುತ್ತಿದ್ದೆ... ಎಂದಿದ್ದರು. 

ತಮ್ಮನ್ನು ಯಾಕೆ ಕರೆದಿಲ್ಲ ಎಂದು ಅಂಬಾನಿಯವರನ್ನು ಪ್ರಶ್ನಿಸಿದ್ದರು, ತಮ್ಮನ್ನು ಮದುವೆಗೆ ಕರೆದಿದ್ದರೆ ನಾಲ್ಕು ಉಪಯೋಗವಿತ್ತು ಎನ್ನುತ್ತಲೇ ಅದರ ಬಗ್ಗೆ ಹೇಳಿದ್ದರು, ಡ್ಯಾನ್ಸ್‌ ಮಾಡುವ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದೆ, ಉದ್ದನೆ ಬಟ್ಟೆ ಹಾಕಿಕೊಂಡು ಬಂದು ನೆಲವನ್ನೂ ಗುಡಿಸುತ್ತಿದ್ದೆ, ಅತಿಥಿಗಳು ಊಟ ಮಾಡಿದ ಬಳಿಕ ಪಾತ್ರೆ ತೊಳೆಯುತ್ತಿದ್ದೆ, ಅವರ ಕೋಣೆಯನ್ನೆಲ್ಲಾ ಶುಚಿಗೊಳಿಸುತ್ತಿದ್ದೆ. ಇಷ್ಟಾದರೂ ನನ್ನನ್ನು ಯಾಕೆ ಕರೆದಿಲ್ಲ. ತುಂಬಾ ತಪ್ಪು ಮಾಡಿಬಿಟ್ರಿ ಎಂದು ರಾಖಿ ಸಾವಂತ್‌ ಗೋಳೋ ಎಂದಿದ್ದರು, ನನ್ನನ್ನು ಕರೆದಿದ್ದರೆ ವೇದಿಕೆಗೇ ಕಿಚ್ಚು ಹೊತ್ತಿಸುತ್ತಿದೆ, ಖುರ್ಚಿಗಳನ್ನು ಕಿತ್ತು ಹಾಕುವಂಥ ಪರ್ಫಾಮ್‌ ಮಾಡುತ್ತಿದ್ದೆ. ಇನ್ನು ಏನೇನೋ ಮಾಡುತ್ತಿದ್ದೆ. ಆದರೆ ನನ್ನನ್ನು ನೀವು ಕರೆಯದೇ ಬಹಳ ತಪ್ಪು ಮಾಡಿರುವಿರಿ, ಯಾರ್‍ಯಾರನ್ನೋ ಕರೆದಿರುವಿರಿ ಎಂದು ರಾಖಿ ಸಾವಂತ್‌ ಹೇಳಿದ್ದರು.

ಡ್ರಗ್ಸ್​ ತಗೊಂಡು ಲೈವ್​ಗೆ ಬಂದ್ರಾ? ಅಂಬಾನಿ ಫಂಕ್ಷನ್​ನಲ್ಲಿ ಕುಣಿಯಲು ಚಾರ್ಜ್​ ಮಾಡಿದ್ರಾ? ಆಮೀರ್​ ಹೇಳಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal
3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ