ರಾಖಿ ಸಾವಂತ್ ಜೊತೆ ಆದಿಲ್ ಖಾನ್‌ರ ಮದ್ವೆನೇ ಆಗಿರಲಿಲ್ವಾ? ಹಾಗಿದ್ರೆ ನಟಿ ಮತಾಂತರ ಆಗಿದ್ಯಾಕೆ? ಇದೇನಿದು ಹೊಸ ಟ್ವಿಸ್ಟ್?
ಡ್ರಾಮಾ ಕ್ವೀನ್, ಕಾಂಟ್ರವರ್ಸಿ ಲೇಡಿ ಎಂದೇ ಖ್ಯಾತ ಆಗಿರೋರು ಎಂದರೆ ರಾಖಿ ಸಾವಂತ್. ಕೆಲ ತಿಂಗಳ ಹಿಂದೆ ರಾಖಿ ಸಾವಂತ್ ಮತ್ತು ಮೈಸೂರಿನ ಆದಿಲ್ ಖಾನ್ ದುರ್‍ರಾನಿ ಮದ್ವೆ ವಿಷಯ ಸಕತ್ ಚರ್ಚೆಯಲ್ಲಿತ್ತು. ಇನ್ನು ರಾಖಿ ಬಗ್ಗೆಯಂತೂ ಎಲ್ಲರಿಗೂ ತಿಳಿದದ್ದೇ. ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್ ಖಾನ್ರನ್ನುಜೈಲಿಗೆ ತಳ್ಳಿದ್ದು, ಅವರೀಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಅದಾದ ಬಳಿಕ ಇವರಿಬ್ಬರ ಡಿವೋರ್ಸ್ ಕೂಡ ಆಯಿತು ಎನ್ನಲಾಗಿತ್ತು.
ಇಷ್ಟಾಗುತ್ತಿದ್ದಂತೆಯೇ ಇವರಿಬ್ಬರ ನಡುವೆ ಮತ್ತೋರ್ವ ನಟಿ ಶೆರ್ಲಿನ್ ಚೋಪ್ರಾ ಎಂಟ್ರಿ ಕೊಟ್ಟಿದ್ದರು. ಅಷ್ಟಕ್ಕೂ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಬಹಳ ಹಿಂದೆಯೇ ವಿವಾದವಿತ್ತು. ಶೆರ್ಲಿನ್ ಅವರ ಖಾಸಗಿ ವಿಡಿಯೋಗಳನ್ನು ರಾಖಿ ಲೀಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ರಾಖಿ ವಿರುದ್ಧ ಮಾಡಿದ್ದರು. ನಂತರ ಸ್ನೇಹಿತರಾಗಿದ್ದರು. ನಂತರ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಶೆರ್ಲಿನ್ ಚೋಪ್ರಾ ಮತ್ತು ಆದಿಲ್ ಖಾನ್ ರೊಮ್ಯಾನ್ಸ್ ಮಾಡುತ್ತಿದ್ದರು. ಹೋಟೆಲ್ ಒಂದರಲ್ಲಿ ಇಬ್ಬರೂ ಒಟ್ಟಿಗೇ ಇದ್ದು ಮಾತುಕತೆಯಲ್ಲಿ ತೊಡಗಿರುವುದು ಹಾಗೂ ರೊಮ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿತ್ತು.
ಅನಂತ್ ಅಂಬಾನಿಯನ್ನು ಕೆಲ ದಿನ ನನ್ನ ಬಳಿ ಬಿಡಿ ಎಂದ ರಾಖಿ! ಕಾರಣ ಕೇಳಿ ನೆಟ್ಟಿಗರು ಕಿಡಿಕಿಡಿ
ಇವೆಲ್ಲವುಗಳ ನಡುವೆಯೇ, ಮೊನ್ನೆಯಷ್ಟೇ ಆದಿಲ್ ಖಾನ್ ರಾಖಿಗೂ ಶಾಕ್ ಕೊಟ್ಟಿದ್ದರು. ಇದೀಗ ಅವರು ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇದೀಗ ಬಂದಿರೋ ಟ್ವಿಸ್ಟ್ ಏನೆಂದರೆ, ಆದಿಲ್ ಖಾನ್, ಇದು ತಮ್ಮ ಮೊದಲ ಮದುವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ತಂದಿದ್ದಾರೆ. ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಆದಿಲ್ ಖಾನ್ ಮತ್ತೊಮ್ಮೆ ಮದ್ವೆಯಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ನಡೆದ ರಹಸ್ಯ ಸಮಾರಂಭದಲ್ಲಿ ಸೋಮಿ ಖಾನ್ ಜೊತೆ ಹಸೆಮಣೆ ತುಳಿದಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಮದ್ವೆಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಸೋಮಿ ಖಾನ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ 2018ರಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆ ಇವರ ಸೋದರಿ ಸಭಾ ಖಾನ್ ಕೂಡ ಭಾಗಿಯಾಗಿದ್ದರು.
ಇದೀಗ ವೈರಲ್ ಆಗುತ್ತಲೇ ರಾಖಿಯ ತಲೆ ತಿರುಗುವಂಥ ಹೇಳಿಕೆಯನ್ನು ಆದಿಲ್ ಖಾನ್ ನೀಡಿದ್ದಾರೆ. ‘ಇದು ನನ್ನ ಮೊದಲ ಮದುವೆ, ಎಲ್ಲೆಡೆ ವರದಿಯಾಗಿರುವಂತೆ ಎರಡನೆಯ ಮದ್ವೆಯಲ್ಲ. ನಾವು ಬೆಂಗಳೂರಿನಲ್ಲಿ ಇದ್ದೇವೆ. ಮುಂಬೈಗೆ ಬಂದ ಬಳಿಕ ಮದುವೆಯ ಕುರಿತು ಅಧಿಕೃತ ಘೋಷಣೆ ಮಾಡುತ್ತೇವೆ. ನಾನು ಎಲ್ಲವನ್ನೂ ಇಂಚಿಂಚಾಗಿ ವಿವರಿಸುತ್ತೇನೆ ಎಂದಿದ್ದಾರೆ. ಹಾಗಿದ್ದರೆ ರಾಖಿ ಜೊತೆ ಆದಿಲ್ ಖಾನ್ ಮದ್ವೆ ಆಗಿರಲಿಲ್ವಾ? ಹಾಗಿದ್ರೆ ರಾಖಿ ಮತಾಂತರಗೊಂಡಿದ್ದು ಏಕೆ ಎಂಬ ಪ್ರಶ್ನೆಗಳು ಈಗ ಸುಳಿದಾಡುತ್ತಿವೆ. ಅಂದಹಾಗೆ, ಆದಿಲ್ ಹಾಗೂ ಸೋಮಿ ಖಾನ್ ಅವರು ಮಾರ್ಚ್ 2ರಂದು ವಿವಾಹ ಆದರು. ಮುಸ್ಲಿಂ ಧರ್ಮದ ಪ್ರಕಾರ ಈ ಮದುವೆ ನಡೆದಿದೆ. ಸೋಮಿ ಊರಾದ ಜೈಪುರದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ. ರಾಖಿ ಸಾವಂತ್ ಈ ಮೊದಲು ಕೂಡ ಒಂದು ಮದುವೆ ಆಗಿದ್ದರು. ರಾಖಿ ಹಾಗೂ ರಿತೇಶ್ ವಿವಾಹ ನೆರವೇರತ್ತು. ಆದರೆ, ಇವರ ಸಂಬಂಧ ಹೆಚ್ಚು ದಿನ ಉಳಿದಿರಲಿಲ್ಲ.