ಸೆಲ್ಫಿಗೆ ಬಂದ ಅಭಿಮಾನಿಯನ್ನು ನಗುನಗುತ್ತಲೇ ದೂರ ಮಾಡಿದ ಶಿಲ್ಪಾ ಶೆಟ್ಟಿ! ವಿಡಿಯೋ ನೋಡಿ ಭಲೆ ಭಲೆ ಹೆಣ್ಣೇ ಅಂತಿದ್ದಾರೆ ನೆಟ್ಟಿಗರು
ಸಿನಿಮಾ ನಟ ನಟಿಯರನ್ನು ಕಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿ ಬೀಳುವುದು ಸಾಮಾನ್ಯವಾಗಿದೆ. ಈ ವೇಳೆ ಸೆಲೆಬ್ರಿಟಿಗಳು ನಟರು ಎನಿಸಿಕೊಂಡವರು ಕಿರಿಕಿರಿಗೊಳಗಾಗುತ್ತಾರೆ. ಕೆಲವರು ಹೀಗೆ ಫೋಟೋ ತೆಗೆಸಿಕೊಳ್ಳಲು ಬಂದವರ ಮೇಲೆಯೇ ಹಲ್ಲೆ ಮಾಡಿದ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿದೆ. ಕೆಲ ನಟರು ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಯ ಕೆನ್ನೆಗೆ ಬಾರಿಸಿ ಬಳಿಕ ಕ್ಷಮೆ ಕೇಳಿದ ಘಟನೆಯೂ ನಡೆದಿದೆ. ಕೆಲ ದಿನಗಳ ಹಿಂದೆ ಖಳನಟನ ಪಾತ್ರದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ನಟ ನಾನಾ ಪಾಟೇಕರ್ ಕೂಡ ಸೆಲ್ಫಿ ತೆಗೆಸಿಕೊಳ್ಳಲು ಬಂದ ಬಾಲಕನೋರ್ವನ ತಲೆಗೆ ಹೊಡೆದು ಓಡಿಸಿದ್ದು ಭಾರಿ ಸುದ್ದಿಯಾಗಿತ್ತು, ಜೊತೆಗೆ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.
ಆದರೆ ಪಾಪ ಎಷ್ಟೋ ಸಂದರ್ಭದಲ್ಲಿ ನಟ-ನಟಿಯರು ಹೀಗೆ ವರ್ತಿಸಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಅಭಿಮಾನಿಗಳು ಒಂದು ಹಂತ ಮೀರಿ ವರ್ತಿಸುತ್ತಾರೆ. ಅಷ್ಟಕ್ಕೂ ನಟ-ನಟಿಯರನ್ನು ದೇವರೆಂದೇ ನಂಬುವ, ಅವರ ಒಂದು ನೋಟಕ್ಕಾಗಿ ಜೀವವನ್ನೇ ಕೊಡುವ ಹುಚ್ಚು, ಅತಿರೇಕದ ಅಭಿಮಾನಿಗಳೂ ಇದ್ದಾರೆ. ಇಂಥವರಿಂದಲೇ ನಟ-ನಟಿಯರ ಚಿತ್ರಗಳು ಓಡುವುದು ಎನ್ನುವುದೂ ಸುಳ್ಳಲ್ಲ. ಇದೇ ಅಧಿಕಾರದ ಮೇಲೆ ಅವರನ್ನು ಕಂಡಾಗ ಅಭಿಮಾನಿಗಳು ಮುಗಿ ಬೀಳುವುದು ಸಾಮಾನ್ಯ. ಆದರೆ ಕೆಲವರು ಇಂಥ ಸನ್ನಿವೇಶವನ್ನು ಕೂಲ್ ಆಗಿ ಹ್ಯಾಂಡಲ್ ಮಾಡಿದರೆ, ಮತ್ತೆ ಕೆಲವರು ದೂರ ತಳ್ಳುವುದು, ಹೊಡೆಯುವುದು, ಕೆನ್ನೆಗೆ ಬಾರಿಸುವುದು... ಇತ್ಯಾದಿ ಮಾಡಿ ಟ್ರೋಲ್ ಆಗುವುದು ಇದೆ.
ಮಲಗಿದ್ದ ಶಿಲ್ಪಾ ಶೆಟ್ಟಿ ಮೇಲೆ ಎರಗಿ ತಬ್ಬಿ, ಉರುಳಾಡಿದ ಅಮೆರಿಕನ್ ನಟ! ಶಾಕಿಂಗ್ ವಿಡಿಯೋ ವೈರಲ್
ಇದೀಗ ಶಿಲ್ಪಾ ಶೆಟ್ಟಿ ಸರದಿ. ಕೆಲವು ನಟ-ನಟಿಯರಿಗೆ ಕ್ಯಾಮೆರಾ ಕಣ್ಣು ತಮ್ಮ ಮೇಲೆ ಸದಾ ನೆಟ್ಟಿರುತ್ತದೆ ಎನ್ನುವ ಅರಿವು ಇರುತ್ತದೆ. ಅದಕ್ಕಾಗಿಯೇ ಇಂಥ ಸನ್ನಿವೇಶಗಳನ್ನು ಜಾಗರೂಕತೆಯಿಂದ ಹ್ಯಾಂಡಲ್ ಮಾಡುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಶಿಲ್ಪಾ ಶೆಟ್ಟಿ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಮಹಿಳೆಯೊಬ್ಬಳು ಶಿಲ್ಪಾರನ್ನು ಕೈಹಿಡಿದು ಮಾತನಾಡಿಸಲು ಟ್ರೈ ಮಾಡಿದ್ದಾರೆ. ಇದು ಶಿಲ್ಪಾಗೆ ಕಿರಿಕಿರಿ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಮಹಿಳೆ ಸೆಲ್ಫಿಗಾಗಿ ಹತ್ತಿರ ಬಂದು ಪಕ್ಕದಲ್ಲಿಯೇ ನಿಂತಿದ್ದಾಳೆ. ಆದರೆ ಕ್ಯಾಮೆರಾ ಕಣ್ಣುಗಳ ತಮ್ಮ ಮೇಲೆ ಇರುವ ಕಾರಣ, ಇಂಥ ಪರಿಸ್ಥಿತಿಯಲ್ಲಿ ಸ್ವಲ್ಪ ಹೆಚ್ಚೂ ಕಮ್ಮಿ ಆದರೂ ಟ್ರೋಲ್ ಆಗಬೇಕಾಗುತ್ತದೆ ಎನ್ನುವುದನ್ನು ಅರಿತೇ ಶಿಲ್ಪಾ ನಗುನಗುತ್ತಲೇ ಆ ಮಹಿಳೆಯನ್ನು ಗೊತ್ತಾಗದ ರೀತಿಯಲ್ಲಿ ದೂರ ಸರಿಸಿ ನಗುನಗುತ್ತಲೇ ಸೆಲ್ಫಿಗೆ ಪೋಸ್ ಕೊಟ್ಟಂತೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಆದರೆ ವಿಡಿಯೋ ವೈರಲ್ ಆದ ಮೇಲೆ ಇವೆಲ್ಲಾ ಗೊತ್ತಾಗದೇ ಇರತ್ತಾ? ನಟಿಯ ಈ ನಡವಳಿಕೆ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಬಿದ್ದಿದೆ. ಆದರೆ ಶಿಲ್ಪಾರನ್ನು ಯಾರೂ ಟ್ರೋಲ್ ಮಾಡುವಂತೆ ಇಲ್ಲ. ಏಕೆಂದರೆ ಅವರು ಮಾಡಿದ್ದು ಸರಿಯೇ ಇದೆ ಎನ್ನಿಸುತ್ತದೆ. ಯಾರನ್ನೂ ಬೈದಿಲ್ಲ, ಕೈಹಿಡಿದು ದೂರ ತಳ್ಳಲೂ ಇಲ್ಲ, ಸಾಲದು ಎನ್ನುವುದಕ್ಕೆ ನಗುತ್ತಲೇ ಸೆಲ್ಫಿಗೆ ಪೋಸ್ ಕೂಡ ಕೊಟ್ಟಿದ್ದಾರೆ. ಇವರನ್ನು ನೋಡಿದರೆ ಭಲೆ ಭಲೆ ಹೆಣ್ಣೇ ಎನ್ನುತ್ತಿದ್ದಾರೆ. ಕನ್ನಡಿಗರಂತೂ ನಮ್ಮ ಕರಾವಳಿ ಬೆಡಗಿ ಅಂದ್ರೆ ಸುಮ್ನೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ವಯಸ್ಸು 50 ದಾಟಿದರೂ ಶಿಲ್ಪಾರ ಸೌಂದರ್ಯವನ್ನು ಮೀರಿಸುವವರು ಇಲ್ಲ. ಸದ್ಯ ಪತಿ ರಾಜ್ ಕುಂದ್ರಾ ಮತ್ತು ಮಕ್ಕಳ ಜೊತೆ ಶಿಲ್ಪಾ ಸುಖಮಯ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.
ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನೀಲಿ ಚಿತ್ರ ತಾರೆ ಬನ್ನಾ ಶೇಖ್ ಅರೆಸ್ಟ್! ಶಿಲ್ಪಾ ಶೆಟ್ಟಿ ಪತಿಗೂ ಸಂಕಷ್ಟ...
ಇನ್ನು ಶಿಲ್ಪಾ ಮತ್ತು ರಾಜ್ ಕುಂದ್ರಾ ಕುರಿತು ಹೇಳುವುದಾದರೆ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ಜೈಲು ವಾಸವನ್ನೂ ಅನುಭವಿಸಿದರು. ಆದರೆ ಸದ್ಯ ದಂಪತಿ ನಿರಾಳರಾಗಿದ್ದಾರೆ. ಇದರ ನಡುವೆಯೇ ಶಿಲ್ಪಾ ರಾಜ್ ಅವರನ್ನು ಹಣಕ್ಕಾಗಿ ಮದ್ವೆಯಾದ್ರು ಎನ್ನುವ ಸುದ್ದಿ ಬಿ-ಟೌನ್ನಲ್ಲಿ ಹರಿದಾಡಿತ್ತು. ಇದಕ್ಕೆ ಕೆಂಡಾಮಂಡಲವಾಗಿದ್ದ ನಟಿ, ನಾನು ರಾಜ್ ಕುಂದ್ರಾರನ್ನು ಮದುವೆಯಾದಾಗ ಅವರು ಶ್ರೀಮಂತರಾಗಿದ್ದರು ಎನ್ನುವುದು ನಿಜವೇ. ಆದರೆ ಆ ಸಮಯದಲ್ಲಿ ನಾನೆಷ್ಟು ಶ್ರೀಮಂತ ಆಗಿದ್ದೆ ಎನ್ನುವುದನ್ನು ಜನ ಗೂಗಲ್ ಮಾಡಿದಂತೆ ಕಾಣುತ್ತಿಲ್ಲ. ನಾನು ಆಗಲೂ ಆಗರ್ಭ ಶ್ರೀಮಂತೆನೇ ಆಗಿದ್ದೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಆಗ ಮತ್ತು ಈಗ ನನ್ನ ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ ಎಂದಿದ್ದರು. ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ನಾನು ಮದುವೆಯಾಗುವ ಸಮಯದಲ್ಲಿ ರಾಜ್ಗಿಂತಲೂ ಶ್ರೀಮಂತರಾಗಿದ್ದ ಕೆಲವರು ನನ್ನನ್ನು ವರಿಸಲು ಕೇಳಿದ್ದರು. ಆದರೆ ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟವಳಲ್ಲ. ನನಗೆ ಅವರು ಇಷ್ಟವಾದರು, ಅವರ ನಡತೆ ಇಷ್ಟವಾಯಿತು. ಅದಕ್ಕೇ ಮದುವೆಯಾದೆ ಎಂದಿದ್ದರು.