"ರಣ್‌ಬೀರ್ ಕಪೂರ್‌ ಹೆಚ್ಚು ಬಳಸೋ ಕಾಂಡೋಮ್ ಗಿಫ್ಟ್ ಕೊಡ್ತೀನಿ" ನಟಿ ಹೇಳಿಕೆ ವೈರಲ್

Published : Sep 29, 2024, 01:47 PM IST
"ರಣ್‌ಬೀರ್ ಕಪೂರ್‌ ಹೆಚ್ಚು ಬಳಸೋ ಕಾಂಡೋಮ್ ಗಿಫ್ಟ್ ಕೊಡ್ತೀನಿ" ನಟಿ ಹೇಳಿಕೆ ವೈರಲ್

ಸಾರಾಂಶ

ಬಾಲಿವುಡ್ ನಟ ರಣ್‌ಬೀರ್ ಕಪೂರ್ ತಮ್ಮ ರಿಲೇಶನ್‌ಶಿಪ್ ವಿಷಯಗಳಿಂದಲೇ ಹೆಚ್ಚು ಸುದ್ದಿಯಾದ ನಟ. ಖ್ಯಾತ ನಟಿಯೊಬ್ಬರು ರಣ್‌ಬೀರ್‌ಗೆ ಕಾಂಡೋಮ್ ಗಿಫ್ಟ್ ನೀಡುವೆ ಎಂದು ಹೇಳಿದ್ದರು.

ಮುಂಬೈ: ಬಾಲಿವುಡ್ ನಟ ರಣ್‌ಬೀರ್ ಕಪೂರ್‌ಗೆ ಕಾಂಡೋಮ್ ಪ್ಯಾಕೇಟ್ ಗಿಫ್ಟ್ ಕೊಡುವೆ ಎಂದು ಹೇಳಿದ್ದ ಖ್ಯಾತ ನಟಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೆಪ್ಟೆಂಬರ್ 28ರಂದು ಹುಟ್ಟುಹಬ್ಬ ಆಚರಿಸಿಕೊಂಡ ರಣ್‌ಬೀರ್ ಕಪೂರ್ ಮದುವೆಯಾಗಿ ಸಾಂಸರಿಕ ಜೀವನದಲ್ಲಿ ಸೆಟಲ್ ಆಗಿದ್ದರು. ಸಿನಿ ಜೀವನದ ಆರಂಭದಿಂದಲೂ ಲವರ್ ಬಾಯ್ ಇಮೇಜ್ ಹೊಂದಿದ್ದ ರಣ್‌ಬೀರ್ ಕಪೂರ್ ಹೆಸರು ಹಲವು ನಟಿಯರ ಜೊತೆ ಥಳಕು ಹಾಕಿಕೊಂಡಿತ್ತು. ಆರಂಭದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‌ಬೀರ್ ಕಪೂರ್ ಪ್ರೇಮಿಗಳಂತೆ ಬಾಲಿವುಡ್ ಅಂಗಳದಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಸುಮಾರು ವರ್ಷಗಳ ಕಾಲ ರಣ್‌ಬೀರ್ ಮತ್ತು ದೀಪಿಕಾ ರಿಲೇಶನ್‌ಶಿಪ್‌ ನಲ್ಲಿದ್ದರು ಎಂಬುದರ ಕುರಿತು ಹಲವು ವರದಿಗಳು ಪ್ರಕಟವಾಗಿವೆ. ಬ್ರೇಕಪ್ ಬಳಿಕ ಇಬ್ಬರು ಬೇರೆ ಬೇರೆಯವರನ್ನು ಮದುವೆಯಾಗಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಹೇಳಿದ ಕಾಂಡೋಮ್ ಗಿಫ್ಟ್ ಹೇಳಿಕೆ ಮತ್ತೆ ಮುನ್ನಲೆಗೆ ಬಂದಿದೆ. 

2008ರಲ್ಲಿ ಬಿಡುಗಡೆಯಾಗಿದ್ದ 'ಬಚಾನೋ ಏ ಹಸಿನೋ' ಚಿತ್ರದಲ್ಲಿ ಮೊದಲ ಬಾರಿಗೆ ರಣ್‌ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿದ್ದರು. ಆಗ ತಾನೇ ಬಾಲಿವುಡ್‌ಗೆ ಕಾಲಿಟ್ಟಿದ್ದ ದೀಪಿಕಾಗೆ ರಣ್‌ಬೀರ್ ಕಪೂರ್ ಜೊತೆಯಾಗಿ ಗೆಳೆಯನಾಗಿದ್ದರು. ಇಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು ಎಂದು ಬಾಲಿವುಡ್ ಅಂಗಳ ಹೇಳುತ್ತದೆ. ಸುಮಾರು ಎರಡು ವರ್ಷಕ್ಕಿಂತ ಅಧಿಕ ಇಬ್ಬರು ರಿಲೇಶನ್‌ಶಿಪ್‌ ನಲ್ಲಿ ದ್ದರು ಎಂದು ಹೇಳಲಾಗುತ್ತದೆ. ಆದ್ರೆ ಅದೇನು ಆಯ್ತು ಗೊತ್ತಿಲ್ಲ ಇಬ್ಬರು ಬೇರೆ ಬೇರೆಯಾದರು. ಬ್ರೇಕಪ್ ಬಳಿಕ ರಣ್‌ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಏ ಜವಾನಿ, ಹೈ ದಿವಾನಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ತದನಂತರ ಬಂದ 'ತಮಾಷಾ' ಯಶಸ್ಸು ಕಾಣಲಿಲ್ಲ. 

ದೀಪಿಕಾ ಪಡುಕೋಣೆ ತಮ್ಮ ಪ್ರೀತಿಯ ಸಂಕೇತವಾಗಿ ಕತ್ತಿನ ಮೇಲೆ "ಆರ್‌ಕೆ" ಎಂಬ ಟ್ಯಾಟೂ ಸಹ ಹಾಕಿಸಿಕೊಂಡಿದ್ದರು. ಟ್ಯಾಟೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ರಣ್‌ವೀರ್ ಸಿಂಗ್ ಜೊತೆಗಿನ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಟ್ಯಾಟೂ ಅಳಿಸಿಕೊಂಡಿದ್ದಾರೆ. ದೀಪಿಕಾ ಜೊತೆಗಿನ ಬ್ರೇಕಪ್ ಬಳಿಕ ರಣ್‌ಬೀರ್ ಕಪೂರ್ ಹೆಸರು ನಟಿಯರಾದ ಕತ್ರಿನಾ ಕೈಫ್ ಮತ್ತು ಮಹಿರಾ ಖಾನ್ ಜೊತೆಯಲ್ಲಿಯೂ ಕೇಳಿ ಬಂದಿತ್ತು. ಅಂತಿಮವಾಗಿ ನಟಿ ಆಲಿಯಾ ಭಟ್‌ ಅವರನ್ನು ಮದುವೆಯಾಗಿ ರಹಾ ಹೆಸರಿನ ಮಗಳಿದ್ದಾಳೆ.

ಛೇ... ಈಗ ತಾನೇ ಕಣ್ಣುಬಿಟ್ಟ ದೀಪಿಕಾ ಮಗುವಿಗೆ ಇದೆಂಥ ಕಾಟ! ಅಪ್ಪನ ಹೆಸರಿನಲ್ಲಿ ಹೀಗೆ ಮಾಡೋದು ಸರಿನಾ?

ಕಾಫಿ ವಿಥ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ವೇಳೆ ದೀಪಿಕಾ ಪಡುಕೋಣೆ ಗಿಫ್ಟ್ ಹೇಳಿಕೆ ನೀಡಿದ್ದರು. ದೀಪಿಕಾ ಪಡುಕೋಣೆ ಜೊತೆಯಲ್ಲಿ ಸೋನಮ್ ಕಪೂರ್ ಸಹ ಭಾಗಿಯಾಗಿದ್ದರು. ಶೋ ನಿರೂಪಕ ಕರಣ್ ಜೊಹರ್, ಸ್ನೇಹಿತ ರಣ್‌ಬೀರ್ ಕಪೂರ್‌ಗೆ ಏನು ಗಿಫ್ಟ್ ಕೊಡಲು ಬಯಸುತ್ತೀರಿ ಎಂದು ಕೇಳಲಾಗುತ್ತದೆ. ಇದಕ್ಕೆ ಕೊಂಚವೂ ಹಿಂಜರಿಯದ ದೀಪಿಕಾ, ಕಾಂಡೋಮ್ ಗಿಫ್ಟ್ ಪ್ಯಾಕೇಟ್ ಕೊಡುತ್ತೇನೆ. ಕಾರಣ ರಣ್‌ಬೀರ್ ಅದನ್ನು ಹೆಚ್ಚು ಬಳಸುತ್ತಾರೆ ಎಂದು ಹೇಳುವ ಮೂಲಕ ಆತ ಲವರ್ ಬಾಯ್ ಎಂಬ ವಿಷಯವನ್ನು ರಿವೀಲ್ ಮಾಡಿದ್ದರು. 

2018ರಂದು ರಣ್‌ವೀರ್ ಸಿಂಗ್ ಜೊತೆಯಲ್ಲಿ ದೀಪಿಕಾ ಪಡುಕೋಣೆ ಮದುವೆಯಾಗಿದ್ದು, ಸೆಪ್ಟೆಂಬರ್ 8 ರಂದು ಮುದ್ದಾದ ಮಗಳನ್ನು ಬರಮಾಡಿಕೊಂಡಿದ್ದಾರೆ. ಕೊನೆಯ ಬಾರಿ ಪ್ರಭಾಸ್ ಜೊತೆಯಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ದೀಪಿಕಾ ಪ್ರೆಗ್ನೆಸಿ ಬಗ್ಗೆ ಸೋಶೀಯಲ್ ಮೀಡಿಯಾದಲ್ಲಿ ಕೆಲವರು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!