ಕೊಲೆ, ದೌರ್ಜನ್ಯ ಏನೇ ಮಾಡಿದ್ರೂ ಸೈ... ಅದು ನನಗೋಸ್ಕರ ಮಾತ್ರ ಆಗಿರ್ಬೇಕು... ಅಂಥ ಬಾಯ್​ಫ್ರೆಂಡ್​​ ನಂಗಿಷ್ಟ...

By Suchethana DFirst Published Jul 3, 2024, 12:02 PM IST
Highlights

ಕ್ರೌರ್ಯ, ದೌರ್ಜನ್ಯ, ಹಿಂಸೆ ಬಿಂಬಿಸುವ ಅನಿಮಲ್​ ಚಿತ್ರ ಮಹಿಳೆಯರಿಗೆ ಈ ಪರಿ ಇಷ್ಟವಾಗಲು ಕಾರಣವೇನು ಎಂಬ ಕುತೂಹಲದ ಮಾಹಿತಿ ಬಿಚ್ಚಿಟ್ಟ ನಟಿ ಶರ್ಮಿಳಾ ಠಾಗೋರ್​.
 

ಕಳೆದ ವರ್ಷ ಬಿಡುಗಡೆಯಾದ ಸಂದೀಪ್ ವಂಗಾ ರೆಡ್ಡಿ ಅವರ ನಿರ್ದೇಶನದ ಅನಿಮಲ್​ ಚಿತ್ರ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅತಿ ದೊಡ್ಡ ಬಜೆಟ್​ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಸಾವಿರಾರು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತು.  ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಅಶ್ಲೀಲತೆ, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಹೀಗೆ ಅತ್ಯಂತ ಹಿಂಸೆಯಿಂದ ಕೂಡಿದ ಈ ಚಿತ್ರ ಈ ಪರಿಯಲ್ಲಿ ಸಕ್ಸಸ್​ ಆಗಿರುವುದಕ್ಕೆ ಬಹು ಅಚ್ಚರಿ ವ್ಯಕ್ತಪಡಿಸಿದವರು ಹಲವರು. ಅಷ್ಟಕ್ಕೂ, ಯಾವುದೇ ಒಂದು ಚಿತ್ರ ಬಿಡುಗಡೆಯಾದಾಗ ಅದನ್ನು ನೋಡುವ ವೀಕ್ಷಕರ ಭಾವನೆ ಒಂದೇ ರೀತಿ ಆಗಿರಬೇಕೆಂದೇನೂ ಇಲ್ಲ. ಕೆಲವರಿಗೆ ಚಿತ್ರಗಳು ಇಷ್ಟವಾದರೆ, ಇನ್ನು ಕೆಲವರಿಗೆ ಅದು ಇಷ್ಟವಾಗದೇ ಹೋಗಬಹುದು. ಕೆಲವರಿಗೆ  ನಾಯಕರು ಕೊಲೆ, ಸುಲಿಗೆ, ರಕ್ತಪಾತ ಹರಿಸುದು, ಲಾಂಗು ಮಚ್ಚು ಹಿಡಿದುಕೊಳ್ಳುವುದು ಇಷ್ಟವಾದರೆ, ಇದು ಇನ್ನು ಕೆಲವರಿಗೆ ಅಸಹ್ಯದ ಪರಮಾವಧಿ ಎನ್ನಿಸಬಹುದು. 

ಚಿತ್ರದ ಯಶಸ್ಸಿನ ಬಗ್ಗೆ ಇದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.  ಇದರ ಯಶಸ್ಸನ್ನು ಕಂಡು ಗೀತ ರಚನೆಕಾರ ಜಾವೇದ್​ ಅಖ್ತರ್ ಶಾಕ್​  ಆಗಿ ಹೇಳಿಕೆಯೊಂದನ್ನು ನೀಡಿದ್ದರು.  ಪ್ರಸ್ತುತ ಚಲನಚಿತ್ರದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.   ಅನಿಮಲ್​ ಚಿತ್ರವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅದರಲ್ಲಿರುವ ಮಿತಿ ಮೀರುವ ದೌರ್ಜನ್ಯದ ಬಗ್ಗೆ ಬೇಸರಿಸಿದ್ದರು. ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆ ನಿಂತಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಇದು ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಪುರುಷ ಹೇಳಿದರೆ ಆ ಚಿತ್ರ ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಅಖ್ತರ್ ಹೇಳಿದ್ದರು.

ಕರೀನಾಳ ಟ್ಯಾಟೂ ಅಳಿಸಿದ ಬೆನ್ನಲ್ಲೇ ಸೈಫ್​ ರಹಸ್ಯ ಖಾತೆ ಬಹಿರಂಗ! 5ನೇ ಖಾನ್​ ಸೃಷ್ಟಿಸಲು ಸ್ಕೆಚ್ಚಾ ಎಂದ ಫ್ಯಾನ್ಸ್​

 ಆದರೆ ಈ ಚಿತ್ರ ಇಷ್ಟೊಂದು ಸಕ್ಸಸ್​ ಕಾಣಲು ಅದರ ಹಿಂದಿರುವ ಸತ್ಯ ಏನು ಎಂಬ ಬಗ್ಗೆ ಹಿರಿಯ ನಟಿ ಶರ್ಮಿಳಾ ಠಾಗೋರ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಪಿಲ್ ಸಿಬಲ್ ಅವರ ಯೂಟ್ಯೂಬ್ ಚಾನೆಲ್ ದಿಲ್ ಸೆ ಕಪಿಲ್ ಸಿಬಲ್‌ಗೆ ನೀಡಿದ ಸಂದರ್ಶನದಲ್ಲಿ ಶರ್ಮಿಳಾ ಠಾಗೋರ್ ಅವರು ಅನಿಮಲ್​ ಚಿತ್ರ ಒಂದು ಭಯಾನಕ ಚಿತ್ರ. ಹಿಂಸೆಗಳಿಂದ ಕೂಡಿದೆ. ಇದರ ತುಂಬಾ ಮಹಿಳಾ ವಿರೋಧಿ ಅಂಶಗಳೂ ಇವೆ ಎನ್ನುವುದು ಸುಳ್ಳಲ್ಲ. ಆದರೆ ಇದನ್ನು ನೋಡಿದ ದೊಡ್ಡ ಮಹಿಳಾ ಪ್ರೇಕ್ಷಕ ವರ್ಗ ಇಷ್ಟಪಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಚಿತ್ರ ಈ ಪರಿಯಲ್ಲಿ ಹಿಟ್​ ಆಗಲು ಕಾರಣ ಏನೆಂದರೆ, ಕೊಲೆ, ದೌರ್ಜನ್ಯ ಏನೇ ಮಾಡಿದ್ರೂ ಸೈ... ಅದು ನನಗೋಸ್ಕರ ಮಾತ್ರ ಆಗಿರ್ಬೇಕು... ಅಂಥ  ಬಾಯ್​ಫ್ರೆಂಡ್​​ ನಂಗಿಷ್ಟ ಎನ್ನುವ ದೊಡ್ಡ ವರ್ಗದ ಮಹಿಳೆಯರು ಇದ್ದಾರೆ. ಹಿಂಸೆ, ಕ್ರೌರ್ಯ, ದೌರ್ಜನ್ಯ ಬೇರೆಯವರ ಮೇಲೆ ಎಸಗಿದಾಗ ಅದು ನನ್ನ ಬಾಯ್​ಫ್ರೆಂಡ್​​ ನನಗೋಸ್ಕರ ಮಾಡಿದ್ದು ಎಂದು ತಿಳಿದಾಗ ಹೆಚ್ಚಿನ ಸ್ತ್ರೀಯರಿಗೆ ಅದು ಖುಷಿ ಕೊಡುತ್ತದೆ. ಇದೇ ಕಾರಣಕ್ಕೆ ಅನಿಮಲ್​ ಈ ಪರಿಯ ಸಕ್ಸಸ್​ ಕಂಡಿದೆ ಎಂಬ ಗುಟ್ಟನ್ನು ನಟಿ ಬಿಚ್ಚಿಟ್ಟಿದ್ದಾರೆ. 

 ಇದೇ ವೇಳೆ ನೂರಾರು ಕೋಟಿ ಬಜೆಟ್​ನ ಅನಿಮಲ್​ ಚಿತ್ರವನ್ನು  ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್​ನ ಲಾ ಪತಾ ಲೇಡೀಸ್​ ಚಿತ್ರ ಅಳಿಸಿ ಹಾಕಿರುವುದು ಅಷ್ಟೇ ಸತ್ಯ. ಚಿತ್ರಗಳು ಹಿಟ್​ ಆಗಬೇಕೆಂದರೆ ಕ್ರೌರ್ಯವನ್ನೇ ಬಿಂಬಿಸಬೇಕೆಂದೇನೂ ಇಲ್ಲ. ಸರಳವಾಗಿ, ಚಿಕ್ಕ ಬಜೆಟ್​ನಲ್ಲಿ ಚಿತ್ರ ತಯಾರಿಸಿ ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳೂ ಬ್ಲಾಕ್​ಬಸ್ಟರ್​ ಆಗುತ್ತವೆಎಂದಿದ್ದಾರೆ.  ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕಥಾ ಹಂದರವನ್ನು ಲಾ ಪತಾ ಲೇಡೀಸ್​ ಚಿತ್ರ ಹೊಂದಿದೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​! ಫ್ರಿಜ್​ ಖರೀದಿ ಮಾಡ್ಬೇಡಿ ಅನ್ನೋದಾ ಟ್ರೋಲಿಗರು?

click me!