ಬಾಲಿವುಡ್ ನಟಿಯ ಮದ್ವೆಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮೂಲಕ ಕಿಚ್ಚು ಹೊತ್ತಿಸಿದ್ದಾರೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ. ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಮದುವೆ, ಹುಟ್ಟುಹಬ್ಬದ ಪಾರ್ಟಿಗಳು ಅಥವಾ ಇತರ ಕಾರ್ಯಕ್ರಮಗಳಿಗೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಆಹ್ವಾನಿಸುವುದು ಮಾಮೂಲಾಗಿದೆ. ಹಾಗೆಂದು ಇವರೇನು ಪರಿಚಯಸ್ಥರು ಎಂದೋ ಇಲ್ಲವೇ ಚಿಕ್ಕಮೊತ್ತಕ್ಕೆ ಇಂಥ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದುಕೊಳ್ಳಬೇಡಿ. ಒಂದು ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ಒಂದು ಫಂಕ್ಷನ್ನಲ್ಲಿ (Functions) ಇರುವ ಇವರು ವಿಧಿಸುವ ಮೊತ್ತ ಕೇಳಿದರೆ ಹತ್ತಾರು ಮಂದಿಯ ಮದುವೆಯನ್ನು ಮಾಡಿಸುವಷ್ಟು ಇರುತ್ತದೆ. ಶಾರುಖ್ ಖಾನ್, ರಣವೀರ್ ಸಿಂಗ್ ಅವರಿಂದ ಹಿಡಿದು ಕತ್ರಿನಾ ಕೈಫ್, ದೀಪಿಕಾ ಪಡುಕೋಣೆಯವರೆಗೆ ಸೆಲೆಬ್ರಿಟಿಗಳು ಆಗಾಗ್ಗೆ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸೆಲೆಬ್ರಿಟಿಗಳು ಸಿನಿಮಾ, ವೆಬ್ ಸೀರೀಸ್, ಬ್ರಾಂಡ್ ಎಂಡಾರ್ಸ್‌ಮೆಂಟ್ (brand Endorcement) ಮತ್ತು ಜಾಹೀರಾತುಗಳಿಗೆ ಭಾರಿ ಮೊತ್ತವನ್ನು ವಿಧಿಸುವುದು ಗೊತ್ತೇ ಇದೆ. ಅದೇ ರೀತಿ ವಿವಿಧ ಕಾರ್ಯಕ್ರಮಗಳಲ್ಲಿಯೂ ನಟ-ನಟಿಯರು ಭಾರಿ ಸಂಭಾವನೆ ಪಡೆಯುತ್ತಾರೆ. ಅದು 1-2 ಕೋಟಿಗೂ ಮೀರುವುದೂ ಇದೆ.
ಅದೇ ರೀತಿ, ಇದೀಗ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ಕುಂದ್ರಾ ಮದುವೆಯೊಂದರಲ್ಲಿ ವೇದಿಕೆ ಮೇಲೆ ನೃತ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ. ಚಲನಚಿತ್ರ ನಿರ್ಮಾಪಕ ಜಾಕಿ ಭಗ್ನಾನಿ ಮತ್ತು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಗೋವಾದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಭರ್ಜರಿ ಡ್ಯಾನ್ಸ್ ಮಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಇವರ ವಿವಾಹ ಗೋವಾದಲ್ಲಿ ಇಂದು (ಫೆಬ್ರುವರಿ 21) ನಡೆಯುತ್ತಿದೆ.
ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ?
ಅದಕ್ಕೂ ಮುನ್ನ ನಿನ್ನೆ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಈ ಜೋಡಿ ಭರ್ಜರಿ ಸ್ಟೆಪ್ ಹಾಕಿದೆ. ಮದುವೆಗೂ ಮುಂಚೆ ಬಾಲಿವುಡ್ ಹಲವಾರು ಸೆಲೆಬ್ರಿಟಿಗಳು ಗೋವಾದ ಐಷಾರಾಮಿ ಹೋಟೆಲ್ ಐಟಿಸಿ ಗ್ರ್ಯಾಂಡ್ ಇನ್ ಅನ್ನು ತಲುಪಿದ್ದರು. ನಿನ್ನೆ ನಡೆದ ಹಲ್ದಿ ಸಮಾರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಡ್ಯಾನ್ಸ್ ಮಾಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರೂ ವೇದಿಕೆಯಲ್ಲಿ ಅಬ್ಬರಿಸಿರುವುದನ್ನು ನೋಡಬಹುದು.
'ಗುರ್ ನಾಲ್ ಇಷ್ಕ್ ಮೀಠಾ' ಕಾರ್ಯಕ್ರಮದಲ್ಲಿ ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋದಲ್ಲಿ ನಟಿ ನೀಲಿ ಸೀರೆಯನ್ನು ಧರಿಸಿದ್ದು, ರಾಜ್ ಕುಂದ್ರಾ ಇಂಡೋ ವೆಸ್ಟರ್ನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಜಾಕಿ ಮತ್ತು ರಾಕುಲ್ ಕೂಡ ಇಂತಹ ಅದ್ಭುತ ಅಭಿನಯ ನೋಡಿ ಪುಳಕಗೊಂಡಿದ್ದಾರೆ. ಅಂದಹಾಗೆ, ರಾಕುಲ್ ಪ್ರೀತ್ 2022 ರಲ್ಲಿ ಜಾಕಿ ಭಗ್ನಾನಿ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಅಂದಿನಿಂದ, ಇಬ್ಬರೂ ನಿರಂತರವಾಗಿ ಒಟ್ಟಿಗೆ ರೊಮ್ಯಾಂಟಿಕ್ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ತಾನು ಮತ್ತು ಜಾಕಿ ಒಂದು ಕಾಲದಲ್ಲಿ ನೆರೆಹೊರೆಯವರು ಆದರೆ ಅವರು ಎಂದಿಗೂ ಮಾತನಾಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ರಾಕುಲ್ ಹೇಳಿದ್ದರು. ನಂತರ ಲಾಕ್‌ಡೌನ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.
ಮಗಳ ಜೊತೆ ಶಿಲ್ಪಾ ಪತಿಯ ಮುದ್ದು ತುಂಟಾಟ: ಕ್ಯೂಟ್ ಅನ್ನೋ ಬದ್ಲು ಪೋರ್ನ್ ವಿಷ್ಯನೇ ಕೆದಕೋದಾ ನೆಟ್ಟಿಗರು?