ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟ, ನಟಿ, ವಿಲನ್ ಸೇರಿದಂತೆ ಹಲವಾರು ಪ್ರಶಸ್ತಿ ಲಭಿಸಿದೆ. ಇವರ ಲಿಸ್ಟ್ ಇಲ್ಲಿದೆ!
2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಶಾರುಖ್ ಖಾನ್, ನಯನತಾರಾ ಸೇರಿದಂತೆ ಹಲವು ನಟ-ನಟಿಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ನಿನ್ನೆ ಅಂದರೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಬಾಲಿವುಡ್ ಬಾದ್ಶಾ ಮತ್ತು ಬಹುಭಾಷಾ ನಟಿ ನಯನತಾರಾ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಬ್ಬರು ಕೂಡ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾಕ್ಕಾಗಿ ಪ್ರಶಸ್ತಿ ಪಡೆದಿರುವುದು ವಿಶೇಷ. ಇದೇ ವೇಳೆ ರಾಣಿ ಮುಖರ್ಜಿ ಅವರಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಇವರಿಗೆ ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.,
ನಿನ್ನೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಶಾರುಖ್ ಅವರು, ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಆಯ್ಕೆ ಮಾಡಿರೋದು ಖುಷಿ ತಂದಿದೆ. ಇದನ್ನು ಪಡೆಯುವ ಯೋಗ್ಯತೆ ನನಗಿದೆ ಎಂದು ನಿರ್ಧರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿದ್ದಾರೆ. ಅಷ್ಟಕ್ಕೂ ನಟ ಶಾರುಖ್ ಅವರಿಗೆ 2023 ಅದೃಷ್ಟ ತಂದುಕೊಟ್ಟ ವರ್ಷ. 2023ಕ್ಕಿಂತಲೂ ಹಿಂದೆ ಒಂದರ ಮೇಲೊಂದರಂತೆ ಫ್ಲಾಪ್ ಸಿನಿಮಾ ಕೊಟ್ಟು ಸಿನಿಮಾದಲ್ಲಿ ದೂರವೇ ಉಳಿದಿದ್ದ ಶಾರುಖ್ ಅವರಿಗೆ ಪಠಾಣ್ ಮತ್ತು ಜವಾನ್ ಬ್ಲಾಕ್ಬಸ್ಟರ್ ಜೀವ ತಂದುಕೊಟ್ಟಿತು. ಖುದ್ದು ಮಾತ್ರವಲ್ಲದೇ ಮಕಾಡೆ ಮಲಗಿದ್ದ ಬಾಲಿವುಡ್ಗೂ ಜೀವ ತಂದುಕೊಟ್ಟ ಚಿತ್ರಗಳು ಇವು. ಇದೀಗ ಜವಾನ್ ಚಿತ್ರಕ್ಕೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರಕ್ಕಾಗಿ ನಯನತಾರಾ ಮತ್ತು ರಾಣಿ ಮುಖರ್ಜಿ ಅವರೂ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶೂಟಿಂಗ್ನಲ್ಲಿ ಜಾರಿಬಿದ್ದ ಹಾಟ್ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?
ಇದೇ ವೇಳೆ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಹೆಣ್ಣುಮಕ್ಕಳ ಮೇಲೆ ಮಿತಿಮೀರಿದ ದೌರ್ಜನ್ಯ, ಅತ್ಯಾಚಾರ, ಕ್ರೌರ್ಯವನ್ನು ಬಿಂಬಿಸುವ ಈ ಚಿತ್ರದ ಬಗ್ಗೆ ಹಲವಾರು ರೀಯಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೀಗ, ಸಂದೀಪ್ ರೆಡ್ಡಿ ವಾಂಗ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ವಿಲನ್ ಪಾತ್ರಧಾರಿ, ಬಾಬಿ ಡಿಯೋಲ್ ಅವರಿಗೆ ಅತ್ಯುತ್ತುಮ ಖಳನಾಯಕ ಪ್ರಶಸ್ತಿ ಲಭಿಸಿದೆ.
ಜವಾನ್ ಚಿತ್ರಕ್ಕಾಗಿ ಅನಿರುದ್ಧ ರವಿಚಂದರ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ, ಜರಾ ಜಟ್ಕೆ ಜರಾ ಬಚ್ಕೆ ಚಿತ್ರಕ್ಕಾಗಿ ತರು ಜೈನ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ, ಪಠಾಣ್ ಚಿತ್ರದ ಬೇಷರಂ ಹಾಡಿಗೆ ಶಿಲ್ಪಾ ರಾವ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಲಭಿಸಿದೆ. ಅನುಮಪಾ ಸೀರಿಯಲ್ ನಟನೆಗಾಗಿ ರೂಪಾಲಿ ಗಂಗೂಲಿ ಅವರಿಗೆ ಅತ್ಯುತ್ತಮ ನಟಿ, ಘುಮ್ ಹೈ ಕಿಸಿಕೆ ಪ್ಯಾರ್ ಮೇ ಸೀರಿಯಲ್ಗಾಗಿ ನೀಲ್ ಭಟ್ ಅವರಿಗೆ ಅತ್ಯುತ್ತಮ ನಟ, ಇದೇ ಸೀರಿಯಲ್ಗೆ ಅತ್ಯುತ್ತಮ ಧಾರಾವಾಹಿ, ಸ್ಕೂಪ್ ವೆಬ್ ಸರಣಿಯ ನಟನೆಗಾಗಿ ಕರಿಷ್ಮಾ ತನ್ನಾ ಅವರಿಗೆ ಉತ್ತಮ ನಟಿ, ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆಗಾಗಿ ಮೌಶುಮಿ ಚಟರ್ಜಿ, ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆಗಾಗಿ ಕೆ.ಜೆ. ಯೇಸುದಾಸ್ ಅವರಿಗೆ ಪ್ರಶಸ್ತಿ ಲಭಿಸಿವೆ.
ಡಿವೋರ್ಸ್, ಮಯೋಸೈಟಿಸ್ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್ ಪ್ರಭು