ಬಾಲಿವುಡ್ ನಟಿ ಕಂಗನಾ ರಣಾವತ್ ಅವರ 10 ಕೋಟಿ ರೂಪಾಯಿ ಆಸ್ತಿಯ ಒಡತಿಯಾದ್ದಾರೆ ಬಹುಭಾಷಾ ನಟಿ ಮೃಣಾಲ್ ಠಾಕೂರ್! ಏನಿದು ವಿಷ್ಯ?
ಖ್ಯಾತ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರು ನಟಿ ಕಂಗನಾ ರಣಾವತ್ ಅವರಿಗೆ ಸೇರಿರುವ ಆಸ್ತಿಯನ್ನು ಖರೀದಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ಕಂಗನಾ ಕುಟುಂಬದ ಆಸ್ತಿ ಇದಾಗಿದೆ. ಇದರಲ್ಲಿ ಎರಡು ಅಪಾರ್ಟ್‌ಮೆಂಟ್ ಇದ್ದು, ಇದರ ಮೌಲ್ಯ 10 ಕೋಟಿ ರೂಪಾಯಿಯದ್ದಾಗಿದೆ. ಮೃಣಾಲ್ ಠಾಕೂರ್ ಮತ್ತು ಅವರ ತಂದೆ ಉದಯಸಿಂಗ್ ಭಾಟೇಸಿಂಗ್ ಠಾಕೂರ್ ಅವರು ಒಬೆರಾಯ್ ಸ್ಪ್ರಿಂಗ್ಸ್ ಎಂಬ ಪ್ರಾಜೆಕ್ಟ್ನಲ್ಲಿ ಕಂಗನಾ ರಣಾವತ್ ಅವರ ಸಹೋದರ ಅಕ್ಷತ್ ದೀಪ್ ರಣಾವತ್ ಅವರಿಂದ 5 ಕೋಟಿ ರೂಪಾಯಿಗೆ ಒಂದು ಅಪಾರ್ಟ್‌ಮೆಂಟ್ ಮತ್ತು ಕಂಗನಾ ಅವರ ತಂದೆ ಅಮರ್ ದೀಪ್ ಸಿಂಗ್ ರಣಾವತ್ ಅವರಿಂದ 5 ಕೋಟಿ ರೂಪಾಯಿಯ ಇನ್ನೊಂದು ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಫ್ಲಾಟ್ನಲ್ಲಿ ಸದ್ಯಕ್ಕೆ ಇಂಟೀರಿಯರ್ ಡಿಸೈನ್ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಹೊಸ ಅಪಾರ್ಟ್ಮೆಂಟ್ಗೆ ಅವರು ಶಿಫ್ಟ್ ಆಗಲಿದ್ದಾರೆ ಎಂದು ವರದಿಯಾಗಿದೆ.
ಅಷ್ಟಕ್ಕೂ ಈ ಅಪಾರ್ಟ್‌ಮೆಂಟ್ ಖರೀದಿ ಮಾಡಲು ಕಾರಣ ಏನೆಂದರೆ, ಕಂಗನಾ ಅವರು ಮುಂಬೈನಿಂದ ಶಿಫ್ಟ್ ಆಗಿದ್ದು ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ಬ್ಯೂಟಿಯ ಅಪಾರ್ಟ್ಮೆಂಟ್ಗಳು ಸೌತ್ ಬ್ಯೂಟಿ ಮೃಣಾಲ್ ಪಾಲಾಗಿವೆ. ಈ ಅಪಾರ್ಟ್‌ಮೆಂಟ್‌ಗಳನ್ನು ಕಳೆದ ಜನವರಿ 2ರಂದು ನೋಂದಾಯಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಈ ಅಪಾರ್ಟ್ಮೆಂಟ್ಗಳ ಬಗ್ಗೆ ಒಂದಿಷ್ಟು ಅಂಕಿಅಂಶ ನೀಡುವುದಾದರೆ, ಒಂದು ಅಪಾರ್ಟ್‌ಮೆಂಟ್‌ನ ವಿಸ್ತೀರ್ಣ 94.46 ಚದರ ಮೀಟರ್ ಹಾಗೂ ಇನ್ನೊಂದು ಅಪಾರ್ಟ್‌ಮೆಂಟ್‌ನ ವಿಸ್ತೀರ್ಣ 92.66 ಚದರ ಮೀಟರ್ ಆಗಿದ್ದು, ಎರಡಕ್ಕೂ ತಲಾ 30 ಲಕ್ಷ ರೂಪಾಯಿ ನೋಂದಣಿ ಶುಲ್ಕ ಅಂದ್ರೆ ಒಟ್ಟು 60 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ.
ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?
ಇನ್ನು ಕಂಗನಾ ಕುರಿತು ಹೇಳುವುದಾದರೆ, ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರವಾಗಿ ಹೇಳಿ, ಯಾರಿಗೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಲೇ ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರು ಪಡೆದವರು. ಸದ್ಯ ಯಾಕೋ ಬಾಲಿವುಡ್ನಲ್ಲಿ ಅವರ ಚಿತ್ರಗಳು ಹಿಟ್ ಆಗುತ್ತಲೇ ಇಲ್ಲ. ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್ ಮೇಲೆ ಶಾಕ್ ನೀಡುತ್ತಿವೆ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ. ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವಿದು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು.
ಇನ್ನು ಮೃಣಾಲ್ ಕುರಿತು ಹೇಳುವುದಾದರೆ, ಇವರು ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಬಾಲಿವುಡ್ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಸೂಪರ್ ಸ್ಟಾರ್ ಎನಿಸಿಕೊಳ್ಳುತ್ತಿದ್ದಾರೆ. ಹಿಂದಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಮೃಣಾಲ್ ಠಾಕೂರ್ ಸದ್ಯ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸದ್ಯ ನಟಿ ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಹಿಂದಿಯಲ್ಲಿ ‘ಸೂಪರ್ 30’, ‘ಬಾಟ್ಲಾ ಹೌಸ್’, ‘ತೂಫಾನ್’, ‘ಜರ್ಸಿ’, ‘ಲಸ್ಟ್ ಸ್ಟೋರೀಸ್ 2’ ಮುಂತಾದ ಸಿನಿಮಾಗಳಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಸೀತಾ ರಾಮಂ’ ಸೂಪರ್ ಹಿಟ್ ಆಯಿತು.
ಶೂಟಿಂಗ್ನಲ್ಲಿ ಜಾರಿಬಿದ್ದ ಹಾಟ್ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?