ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾಗೆ ಕೇಳಿದ ಪ್ರಶ್ನೆಯೊಂದಕ್ಕೆ ನಟಿ ನನಗೆ ನಾಚಿಕೆ ಆಗತ್ತಪ್ಪಾ ಎಂದರು. ವಿಡಿಯೋಗೆ ನೆಟ್ಟಿಗರು ಥಹರೇವಾರಿ ಕಮೆಂಟ್ ಹಾಕ್ತಿದ್ದಾರೆ. ಅಷ್ಟಕ್ಕೂ ಕೇಳಿದ ಪ್ರಶ್ನೆ ಏನು?
ಶೆರ್ಲಿನ್ ಚೋಪ್ರಾ ಎಂಬ ಹೆಸರು ಕೇಳಿದ ತಕ್ಷಣ, ಸಿನಿ ಪ್ರಿಯರ ಕಣ್ಣೆದುರು ಬರುವುದು ಅಸಭ್ಯ, ಅಶ್ಲೀಲ ಎನ್ನುವಷ್ಟರ ಮಟ್ಟಿಗಿನ ತುಂಡು ಬಟ್ಟೆ ಧರಿಸಿ ಪ್ಲಾಸ್ಟಿಕ್ ದೇಹದ ಪ್ರದರ್ಶನ ಮಾಡುವ ನಟಿಯ ದೃಶ್ಯ. ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದಾಕೆ ಇವರು. ಈಕೆ ಡೀಸೆಂಟ್ ಡ್ರೆಸ್ ಹಾಕಿರುವ ಫೋಟೋ ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಶೆರ್ಲಿನ್ ಅವತಾರ ಇದೆ. ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಎದೆ ಭಾಗ ಮಾತ್ರ ನೋಡಲು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಕಾಣಿಸುತ್ತಿದೆ. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಕೆಲ ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ-ವಿಚಿತ್ರ ರೀತಿಯಲ್ಲಿ ಪೋಸ್ ಕೊಡುತ್ತಲೇ ಸದ್ದು ಮಾಡುತ್ತಿರುವ ಶೆರ್ಲಿನ್ಗೆ ನಾಚಿಕೆನೂ ಅಗತ್ತಂತೆ! ಹೌದು. ಪ್ರತಿ ಹೆಣ್ಣಿನಲ್ಲಿಯೂ ನಾಚಿಕೆ ಎನ್ನುವುದು ಹುಟ್ಟುತ್ತಲೇ ಬರುವ ಕ್ರಿಯೆ ನಿಜವಾದರೂ, ಇಂದಿನ ಕೆಲವರನ್ನು ಅದರಲ್ಲಿಯೂ ಬಾಲಿವುಡ್ನ ನಟಿಯರನ್ನು ನೋಡಿದರೆ ನಿಜಕ್ಕೂ ನಾಚಿಕೆ ಎನ್ನುವ ಪದಕ್ಕೆ ಅರ್ಥ ಹೊರಟು ಹೋಗಿದ್ಯಾ ಎಂದು ಕೇಳಿಕೊಳ್ಳುವ ಸ್ಥಿತಿ ಉಂಟಾಗಿದೆ. ಆದರೆ ಇದೀಗ ನನಗೂ ನಾಚಿಕೆ ಆಗುತ್ತದೆ ಎನ್ನುವ ಮೂಲಕ ಶೆರ್ಲಿನ್ ಚೋಪ್ರಾ ಹಲ್ಚಲ್ ಸೃಷ್ಟಿಸಿದ್ದಾರೆ. ನಾಚಿಕೆ ಪದದ ಶಬ್ದ ಬದಲಾಗಿದ್ಯಾ ಎಂದು ಡಿಕ್ಷನರಿ ಹುಡುಕಬೇಕು ಎನ್ನುತ್ತಿದ್ದಾರೆ ಟ್ರೋಲಿಗರು.
ಶೆರ್ಲಿನ್ ಚೋಪ್ರಾ ಮಗುವನ್ನು ಎತ್ತಿಕೊಂಡ್ರೆ ಪುಟಾಣಿ ಹೀಗೆ ಮಾಡೋದಾ? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!
ಅಷ್ಟಕ್ಕೂ ಶೆರ್ಲಿನ್ ತಮ್ಮ ಬಾಯ್ಫ್ರೆಂಡ್ ಅಸ್ಗರ್ ಅಲಿ ಜೊತೆ ಕಾಣಿಸಿಕೊಂಡಾಗ, ಅವರಿಗೆ ಮದುವೆಯ ವಿಷಯವನ್ನು ಕೇಳಲಾಯಿತು. ನೀವು ಇವರನ್ನು ಮದ್ವೆಯಾಗುತ್ತಿದ್ದೀರಾ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ಇವರು ನನ್ನ ಬಾಯ್ಫ್ರೆಂಡ್ಗಿಂತಲೂ ಹೆಚ್ಚಿನವರು ಎಂದರು. ಆಗ ಮದುವೆಯ ವಿಷಯದ ಬಗ್ಗೆ ಏನೂ ಮಾತನಾಡಲಿಲ್ಲ. ಕೊನೆಗೆ ಮತ್ತೊಮ್ಮೆ ನಿಮಗೆ ಮದುವೆಯಲ್ಲಿ ನಂಬಿಕೆ ಇದ್ಯಾ ಕೇಳಿದಾಗ ಹೌದು ಎಂದರು. ಇವರನ್ನೇ ಮದುವೆಯಾಗೋದು ಹೌದಾ ಕೇಳಿದಾಗ ನಟಿ, ನನಗೆ ನಾಚಿಕೆಯಾಗತ್ತಪ್ಪಾ ಎಂದು ಅತ್ತ ಕಡೆ ಮುಖ ಮಾಡಿಕೊಂಡರು! ಇದಕ್ಕೆ ಥರಹೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ನಾಚಿಕೆ ಎನ್ನುವ ಶಬ್ದಕ್ಕೇ ನಾಚಿಕೆ ಆಗ್ತಿದೆ ಎಂದು ಕಮೆಂಟಿಗರು ಹೇಳುತ್ತಿದ್ದಾರೆ. ಹಲವರ ಜೊತೆ ಹಾಸಿಗೆ ಹಂಚಿಕೊಳ್ಳುವಾಗ ಆಗದಿದ್ದ ನಾಚಿಕೆ ಮದ್ವೆ ಎಂದ್ರೆ ಆಗತ್ತಾ ಕೇಳುತ್ತಿದ್ದಾರೆ!
ಕೆಲ ದಿನಗಳ ಹಿಂದೆ ನಟಿ, ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್ ಸ್ಕಿನ್ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗಲೆಲ್ಲವೂ ಟ್ರೋಲ್ ಬಿಟ್ಟರೆ ಇನ್ನೇನೂ ಆಗುವುದಿಲ್ಲ. ನಟಿಗೆ ಬೇಕಿರುವುದೂ ಅದೇ. ಇದಕ್ಕಾಗಿಯೇ ಈ ವೇಷ. ಕೆಲವು ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಇದೊಂದು ರೀತಿಯ ಚಟವಾಗಿದೆ. ಎಲ್ಲಿಯೂ ಅವಕಾಶ ಸಿಗದಾಗ ಸೋಷಿಯಲ್ ಮೀಡಿಯಾದಲ್ಲಿ ದೇಹ ಪ್ರದರ್ಶನ ಮಾಡಿಕೊಂಡು ಟ್ರೋಲ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿ. ಅದನ್ನೇ ಶೆರ್ಲಿನ್ ಮಾಡುತ್ತಿದ್ದಾರೆ.
ಧರಿಸಿರೋ ತುಂಡು ಬಟ್ಟೆ ಬಿಚ್ಚುತ್ತಲೇ ಕೈಕಾಲಿಗೆ ಮಸಾಜ್ ಮಾಡುವ ಆಫರ್ ಕೊಟ್ಟ ಶೆರ್ಲಿನ್: ವಿಡಿಯೋ ವೈರಲ್