ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್​ ಚೋಪ್ರಾ ಹೇಳಿದ್ದೇನು?

Published : Sep 03, 2023, 12:53 PM ISTUpdated : Sep 03, 2023, 01:12 PM IST
ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್​ ಚೋಪ್ರಾ ಹೇಳಿದ್ದೇನು?

ಸಾರಾಂಶ

ನಟಿ ರಾಖಿ ಸಾವಂತ್​ ವಿರುದ್ಧ ನಟಿ ಶೆರ್ಲಿನ್​ ಚೋಪ್ರಾ ಕೆಂಡಾಮಂಡಲವಾಗಿದ್ದು, ನಿಜವಾದ ಮುಸ್ಲಿಮರು ಹೇಗಿರುತ್ತಾರೆ ಎಂದು ವಿವರಿಸಿದ್ದಾರೆ.   

ವಿವಾದಗಳ ರಾಣಿ ರಾಖಿ ಸಾವಂತ್ ಸೌದಿ ಅರೇಬಿಯಾದ ಮೆಕ್ಕಾದಿಂದ (Mecca) ಉಮ್ರಾ ಮುಗಿಸಿ ಮೊನ್ನೆ ಗುರುವಾರ ಬೆಳಗ್ಗೆ ದೇಶಕ್ಕೆ ಮರಳಿದ್ದಾರೆ. ಆದರೆ ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬಂದ ಕೂಡಲೇ ಅವರಿಗೆ ದೊಡ್ಡ ಶಾಕ್ ಕಾದಿತ್ತು. ವಾಸ್ತವವಾಗಿ, ಶೆರ್ಲಿನ್ ಚೋಪ್ರಾ ಮತ್ತು ರಾಖಿ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ರಾಖಿ ಸಾವಂತ್ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಬಹಳ ಹಿಂದೆಯೇ ವಿವಾದವಿತ್ತು. ಶೆರ್ಲಿನ್​ ಅವರ ಖಾಸಗಿ ವಿಡಿಯೋಗಳನ್ನು ರಾಖಿ ಲೀಕ್​ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ರಾಖಿ ವಿರುದ್ಧ ಮಾಡಿದ್ದರು. ವಿಷಯ ಪೊಲೀಸರನ್ನೂ ತಲುಪಿತು ಆದರೆ ರಾಖಿ ಮತ್ತು ಶೆರ್ಲಿನ್ ಮತ್ತೆ ಸ್ನೇಹಿತರಾದರು. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆದಿಲ್ ದುರಾನಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಶೆರ್ಲಿನ್ ರಾಖಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮತ್ತೊಮ್ಮೆ ರಾಖಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಖಿ ಮತ್ತು ಅವರ ವಕೀಲರಾದ ಫಲ್ಗುಣಿ ಬ್ರಹ್ಮಭಟ್ ಅವರು ತಮ್ಮ ಖಾಸಗಿ ಫೋಟೋಗಳನ್ನು ಮಾಧ್ಯಮಗಳ ಮುಂದೆ ತೋರಿಸಿ ಮುಜುಗರಕ್ಕೊಳಗಾಗಿದ್ದಾರೆ ಎಂದು ಶೆರ್ಲಿನ್ ಚೋಪ್ರಾ (sherlyn chopra) ಆರೋಪಿಸಿದ್ದಾರೆ.  

ಸಾಲದು ಎಂಬುದಕ್ಕೆ ರಾಖಿ ಮತ್ತು ಆದಿಲ್​ ಖಾನ್​ ನಡುವೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ,  ರಾಖಿ ಸಾವಂತ್​ ಸ್ನೇಹಿತೆ ರಾಜಶ್ರೀ (Rajashree) ಎಂಬುವವರು ಆದಿಲ್​ ಖಾನ್​ ಪರ ಬ್ಯಾಟಿಂಗ್​ ಮಾಡಿದ್ದು, ರಾಖಿ ಸಾವಂತ್​ದ್ದೇ ತಪ್ಪಿದೆ ಎಂದು ಬಿಂಬಿಸಿದ್ದರು.  ಪತ್ರಿಕಾಗೋಷ್ಠಿ ಕರೆದಿದ್ದ ಅವರು, ರಾಖಿ ನನಗೆ ಬ್ಲ್ಯಾಕ್​ಮೇಲ್​  ಮಾಡಿದ್ದಾಳೆ,  ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದರು. ಇದೇ ಪತ್ರಿಕಾಗೋಷ್ಠಿಯಲ್ಲಿ  ನಟಿ ಶೆರ್ಲಿನ್​ ಚೋಪ್ರಾ ಕೂಡ ಆದಿಲ್​ ಖಾನ್​ ಪರ ವಹಿಸಿಕೊಂಡಿದ್ದರು.  ರಾಖಿ ಸಾವಂತ್​ ಸಾಮಾನ್ಯವಾಗಿ ಮಾಡುವ ಡ್ರಾಮಾದಂತೆ ಆ್ಯಕ್ಟಿಂಗ್​ ಮಾಡಿದ್ದ ಶೆರ್ಲಿನ್​,  ನೋಡಿ ರಾಖಿಗಿಂತಲೂ ನಾನೇ ಚೆನ್ನಾಗಿ ಡ್ರಾಮಾ ಮಾಡುತ್ತೇನೆ ಎಂದಿದ್ದರು. ನೋಡು ರಾಖಿ ಇನ್ನು ಮುಂದೆ ಆ್ಯಕ್ಟಿಂಗ್​ ಮಾಡುವಾಗ ನಿನಗಿಂತಲೂ ನಾನೇ ಚೆನ್ನಾಗಿ ಮಾಡುತ್ತೇನೆ ಎನ್ನುವುದು ಗಮನದಲ್ಲಿ ಇರಲಿ ಎಂದಿದ್ದರು.  

ಡ್ರಾಮಾದಲ್ಲಿ ರಾಖಿಯನ್ನೇ ಮೀರಿಸಿದ ಶೆರ್ಲಿನ್;​ ಆದಿಲ್​ ಕೈ ಹಿಡಿದ ರಾಖಿ ಬೆಸ್ಟ್​ ಫ್ರೆಂಡ್​!

ಇದೀಗ ಮತ್ತೊಮ್ಮೆ ಶೆರ್ಲಿನ್​, ರಾಖಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಖಿ ಫರ್ಜಿ ಮುಸ್ಲಿಂ (ಅಂದರೆ ನಕಲಿ ಮುಸ್ಲಿಂ) ಎಂದು ಆರೋಪಿಸಿದ್ದಾರೆ. ಉಮ್ರಾಗೆ ಹೋಗುವವರು ನಿಜವಾದ ಮುಸಲ್ಮಾನರು. ಅವರು ಯಾವಾಗಲೂ ಡ್ರಾಮಾ ಮಾಡುವುದಿಲ್ಲ. ಅಲ್ಹಾನನನ್ನು ನಿಜವಾಗಿಯೂ, ಸತ್ಯವಾದ ಹೃದಯದಿಂದ ನಂಬುತ್ತಾರೆ. ಆದರೆ ರಾಖಿ ಹಾಗಲ್ಲ, ಈಕೆ ನಕಲಿ ಮುಸಲ್ಮಾನ್​ ಎಂದು ಆರೋಪಿಸಿದ್ದಾರೆ. ನಿಜವಾದ ಮುಸಲ್ಮಾನರು ಸುಳ್ಳು ಹೇಳುವುದಿಲ್ಲ, ಆದರೆ ರಾಖಿ ಮೋಸಗಾತಿ, ಅಲ್ಲಾ ಹ್ ನಂಬದಾಕೆ ಎಂದು ಶೆರ್ಲಿನ್​ ಹೇಳಿದ್ದಾರೆ. 

ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ರಾಖಿ ಸಾವಂತ್​,  ನಾನು ಅಪ್ಪಟ ಮುಸ್ಲಿಂ.  ನಾನು ಮುಸ್ಲಿಂ (Muslim) ಧರ್ಮವನ್ನೇ ಪಾಲಿಸುತ್ತಿದ್ದೇನೆ.  ಆದರೆ ಆದಿಲ್​ ಖಾನ್​ ಹುಟ್ಟು ಮುಸ್ಲಿಂ  ಆದರೂ ಮುಸ್ಲಿಂ ಧರ್ಮ ಪಾಲಿಸ್ತಾ ಇರಲಿಲ್ಲ. ನಾನೇ ಒತ್ತಾಯ ಮಾಡಿ ನಮಾಜ್​ ಮಾಡುವಂತೆ ಆತನಿಗೆ ಹೇಳುತ್ತಿದ್ದೆ. ಇಂಥವರಿಂದಲೇ ಮುಸ್ಲಿಮರು ಇಂದು ಕುಖ್ಯಾತಿಗಳಿಸುತ್ತಿದ್ದಾರೆ. ಒಮ್ಮೆಯೂ ಮುಸ್ಲಿಮ್​ ಧರ್ಮದವರಂತೆ ಆದಿಲ್​ ನಡೆದುಕೊಳ್ಳಲಿಲ್ಲ ಎಂದು ಮಾಜಿ ಪತಿಯನ್ನು ರಾಖಿ ಹಿಗ್ಗಾಮುಗ್ಗ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. 

ಡ್ರಾಮಾದಲ್ಲಿ ರಾಖಿಯನ್ನೇ ಮೀರಿಸಿದ ಶೆರ್ಲಿನ್;​ ಆದಿಲ್​ ಕೈ ಹಿಡಿದ ರಾಖಿ ಬೆಸ್ಟ್​ ಫ್ರೆಂಡ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?