ಖ್ಯಾತ ಮಲಯಾಳಂ ನಟಿ ಅಪರ್ಣಾ ನಾಯರ್ ಅವರು ಆಗಸ್ಟ್ 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಸಾವಿನ ನಿಗೂಢ ರಹಸ್ಯ ಬಯಲಾಗಿದೆ. ನಟಿಯ ಅಮ್ಮ ಹೇಳಿದ್ದೇನು?
ಮಲಯಾಳಂನ ಖ್ಯಾತ ನಟಿ ಅಪರ್ಣಾ ಪಿ.ನಾಯರ್ ಕಳೆದ 31ರಂದು ತಿರುವನಂತಪುರಂನ ಕರಮಾನದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರ ಸಾವಿನ ರಹಸ್ಯ ನಿಗೂಢವಾಗಿತ್ತು. ಸಾಯುವ ಹಿಂದಿನ ದಿನವಷ್ಟೇ ತಮ್ಮ ಮಗಳ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಾರದ ಹಿಂದೆ ಪತಿ ಸಂಜಿತ್ ಜೊತೆಗೆ ತೆಗೆಸಿದ ಫೋಟೋ ಹಂಚಿಕೊಂಡಿದ್ದ ಅಪರ್ಣಾ 'ಇವರು ನನ್ನ ಶಕ್ತಿ' ಎಂದು ಬರೆದುಕೊಂಡಿದ್ದರು. ಇವರಿಗೆ 31 ವರ್ಷ ವಯಸ್ಸಾಗಿತ್ತು. ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವು ಸಿನಿ ಇಂಡಸ್ಟ್ರಿಗೆ ಬಹಳ ಆಘಾತ ತಂದಿತ್ತು. ಆಗಸ್ಟ್ 31ರ ಸಂಜೆ 7 ಗಂಟೆ ಸುಮಾರಿಗೆ ನಟಿ ಅಪರ್ಣಾ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅಪರ್ಣಾಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಸಾವಿನ ಬಗ್ಗೆ ಕಿಲ್ಲಿಪಾಲಂನ ಖಾಸಗಿ ಆಸ್ಪತ್ರೆ ಸ್ಪಷ್ಟನೆ ನೀಡಿತು ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದರು.
ಕರಮಾನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ನಟಿಯ ಸಾವಿಗೆ ಕಾರಣವನ್ನು ಹುಡುಕುತ್ತಿದ್ದರು. ಪತಿಯ ಜೊತೆಗಿನ ಫೋಟೋ ಶೇರ್ (Photo share) ಮಾಡಿಕೊಂಡಿದ್ದರಿಂದ ಕುಟುಂಬಸ್ಥರ ಮೇಲೆ ಮೊದಲಿಗೆ ಯಾವುದೇ ಅನುಮಾನವೂ ಇರಲಿಲ್ಲ. ಆದರೆ ಇದೀಗ ಕುತೂಹಲ ಎನ್ನುವ ವಿಷಯವೊಂದು ಬಹಿರಂಗಗೊಂಡಿದೆ. ಅಪರ್ಣಾ ಅವರ ಸಾವಿನ ರಹಸ್ಯವನ್ನು ಪೊಲೀಸರು ಸದ್ಯ ಭೇದಿಸಿದ್ದು, ಇದೇ ಮೇಲ್ನೋಟಕ್ಕೆ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಕೌಟುಂಬಿಕ ಸಮಸ್ಯೆಯಿಂದ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಪೊಲೀಸರು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರಂತೆ. ಗಂಡನ ಕುಡಿತದ ಚಟದಿಂದ ಮಾನಸಿಕವಾಗಿ ಮಗಳು ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದಾರೆ. ಹೀಗಿರುವಾಗ ನೀವೇ ನನ್ನ ಶಕ್ತಿ ಎಂದು ಅಪರ್ಣಾ ಬರೆದುಕೊಂಡಿದ್ದೇಕೆ ಎನ್ನುವ ಅನುಮಾನವೂ ಈಗ ಎಲ್ಲರನ್ನೂ ಕಾಡತೊಡಗಿದೆ.
ಖ್ಯಾತ ಚಿತ್ರನಟಿ ಅಪರ್ಣಾ ಶವವಾಗಿ ಪತ್ತೆ, ಸಾವಿನ ಕಾರಣ ನಿಗೂಢ
ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ (receptionist) ಅಪರ್ಣಾ ಎರಡು ವಾರಗಳ ಹಿಂಷ್ಟೇ ರಾಜೀನಾಮೆ ನೀಡಿದ್ದರು. ಅಪರ್ಣಾ ಪಿ. ನಾಯರ್ ಅವರು ದೂರದರ್ಶನ ಧಾರಾವಾಹಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಚಲನಚಿತ್ರೋದ್ಯಮದಲ್ಲೂ ಗಮನಾರ್ಹವಾಗಿ ಗುರುತಿಸಿಕೊಂಡಿದ್ದರು. ಅವರ ಚಿತ್ರಗಳೆಂದರೆ ಮೇಘತೀರ್ಥಂ (2009), ಮುಧುಗೌವ್ (2016), ಮೈಥಿಲಿ ವೀಂದುಂ ವರುನ್ನು (2017), ಅಚಾಯನ್ಸ್ (2017), ನೀರಂಜನ ಪೂಕ್ಕಲ್ (2017), ದೇವಸ್ಪರ್ಶಂ (2018), ಪೆನ್ ಮಸಾಲಾ (2018), ಕೊಡತಿ ಸಮಕ್ಷಮ್ ಬಾಲನ್ ವಕೀಲ್ (2019), ಬ್ರಿಟಿಷ್ ಬಂಗಲೆ (2019), ನಲ್ಲ ವಿಶೇಷಂ (2019), ಕಲ್ಕಿ (2019), ಮತ್ತು ಕಡಲು ಪರಾಂಜ ಕಧಾ (2022) ನಂತಹ ವೈವಿಧ್ಯಮಯ ಚಲನಚಿತ್ರಗಳನ್ನು ಒಳಗೊಂಡಿದೆ.
ಅವರ ದೂರದರ್ಶನ ಧಾರಾವಾಹಿಗಳಲ್ಲಿ ಗಮನಾರ್ಹವಾದವು 'ಚಂದನಮಜ' ಮತ್ತು 'ಆತ್ಮಸಖಿ', ಇದು ವೀಕ್ಷಕರ ಹೃದಯದಲ್ಲಿ ಅವರ ಉಪಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮಾಧ್ಯಮ ವರದಿಗಳ ಪ್ರಕಾರ ಅಪರ್ಣಾ ಅವರಿಗೆ ಪತಿ ಸಂಜಿತ್ (Sanjith) ಹಾಗೂ ತ್ರಯಾ ಮತ್ತು ಕೃತಿಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ಚಿತ್ರೋದ್ಯಮದ ಮಂದಿಗೆ ಮತ್ತು ನಟಿಯ ಅಭಿಮಾನಿಗಳಿಗೆ ಈ ಹಠಾತ್ ಸುದ್ದಿ ಶಾಕಿಂಗ್ ತಂದಿದೆ.
Viral Video: ಗಂಡನಾದವ ಈ ವಿಷಯ ತಿಳಿದುಕೊಂಡ್ರೆ ಸಂಸಾರದಲ್ಲಿ ಸುಖವೋ ಸುಖ...