ಖಾಸಗಿ ಅಂಗ ಮುಟ್ಟಿ ರೇಟ್ ಹೇಳು ಎಂದಿದ್ದ; ಸಾಜಿದ್ ಖಾನ್ ಕಾಮ ಪುರಾಣ ಮತ್ತೆ ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ

Published : Oct 14, 2022, 11:00 AM IST
ಖಾಸಗಿ ಅಂಗ ಮುಟ್ಟಿ ರೇಟ್ ಹೇಳು ಎಂದಿದ್ದ; ಸಾಜಿದ್ ಖಾನ್ ಕಾಮ ಪುರಾಣ ಮತ್ತೆ ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ

ಸಾರಾಂಶ

ನಟಿ ಶೆರ್ಲಿನ್ ಚೋಪ್ರಾ ಮತ್ತೆ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಸಿಡಿದೆದಿದ್ದಾರೆ. 2005ರಲ್ಲಿ ನಡೆದ ಕಹಿ ಘಟನೆಯನ್ನು ಶೆರ್ಲಿನ್ ಮತ್ತೆ ಬಿಚ್ಚಿಟ್ಟಿದ್ದಾರೆ. 

ಬಾಲಿವುಡ್ ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾ ಮತ್ತೆ ಸಿಡಿದೆದ್ದಿದ್ದಾರೆ. ಮೀ ಟೂ ಅಭಿಯಾನ ಮತ್ತು ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣ ವೇಳೆ ಸುದ್ದಿಯಲ್ಲಿದ್ದ ನಟಿ ಇದೀಗ ಮತ್ತೆ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಸಿಡಿದೆದಿದ್ದಾರೆ. 2005ರಲ್ಲಿ ನಡೆದ ಕಹಿ ಘಟನೆಯನ್ನು ಶೆರ್ಲಿನ್ ಮತ್ತೆ ಬಿಚ್ಚಿಟ್ಟಿದ್ದಾರೆ. ಇದಕ್ಕೆ ಕಾರಣ ಸಾಜಿದ್ ಖಾನ್ ಬಿಗ್ ಬಾಸ್ ಎಂಟ್ರಿ. ನಿರ್ದೇಶಕ ಸಾಜಿದ್ ಖಾನ್ ಹಿಂದಿ ಬಿಗ್ ಬಾಸ್‌ಗೆ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಇದನ್ನು ವಿರೋಧಿಸಿರುವ ಶೆರ್ಲಿನ್ ಚೋಪ್ರಾ ಇಂಥ ಕೆಟ್ಟ ವ್ಯಕ್ತಿಗಳನ್ನು ಬಿಗ್ ಬಾಸ್‌ಗೆ ಯಾಕೆ ಕರೆಯಬೇಕೆಂದು ಪ್ರಶ್ನೆ ಮಾಡಿದ್ದಾರೆ.

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್ ಚೋಪ್ರಾ, 2005ರಲ್ಲಿ ಸಾಜಿದ್ ಖಾನ್ ನನ್ನನ್ನು ಮನೆಗೆ ಕರೆಸಿ ಗುಪ್ತಾಂಗ ತೋರಿಸಿದ್ದ ಅಂಥ ವ್ಯಕ್ತಿಯನ್ನು ಬಿಗ್ ‌ಬಾಸ್‌ಗೆ ಆಹ್ವಾನ ಮಾಡಿರುವುದು ತುಂಬಾ ಬೇಸರ ತಂದಿದೆ ಎಂದು ಹೇಳಿದ್ದಾರೆ. ಇನ್ನು ಮಾತು ಮುಂದುವರೆಸಿದ ಶೆರ್ಲಿನ್ 2005ರ ಘಟನೆಯನ್ನು ಮತ್ತೆ ನೆನಪಿಸಿಕೊಂಡರು. ಆಗಿನ್ನೂ ನನ್ನ ವೃತ್ತಿಜೀವನದ ಪ್ರಾರಂಭದ ದಿನಗಳು. ಕಥೆ ಹೇಳುತ್ತೀನಿ ಎಂದು ನನ್ನನ್ನು ಆತ ಮನೆಗೆ ಕರೆದಿದ್ದ. ಆಗ ಆತ ಲೈಂಗಿಕ ದುರ್ವತನೆ ಮಾಡಿದ. ಆತನ ಗುಪ್ತಾಂಗ ತೋರಿಸಿದ' ಎಂದು ಹೇಳಿದರು. 

ಶೆರ್ಲಿನ್ ಚೋಪ್ರಾಗೆ ಹೆಚ್ಚಿದ ತೊಂದರೆ: ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಿದ ಶಿಲ್ಪಾ ಶೆಟ್ಟಿ ದಂಪತಿ!

'2005ರಲ್ಲಿ ನನ್ನ ತಂದೆ ನಿಧನ ಹೊಂದಿದರು. ಆ ಸಮಯದಲ್ಲಿ ಸಾಜಿದ್ ಖಾನ್ ನನ್ನನ್ನು ಮನೆಗೆ ಕರೆದ. ಆತನ ಕೆಟ್ಟ ವರ್ತನೆ ಬಗ್ಗೆ ಆಗ ನನಗೆ ಗೊತಿರಲಿಲ್ಲ. ಆಗ ಸ್ಮಾರ್ಟ್ ಫೋನ್, ಇಂಟರ್ ನೆಟ್ ಇರ್ಲಿಲ್ಲ ಎಂದು ಹೇಳಿದರು. ನಾನು ದೊಡ್ಡ ಕನಸನ್ನು ಹೊತ್ತು ಆತನ ಮನೆಗೆ ಹೋದೆ. ಆದರೆ ಆತ ನನಗೆ ಗುಪ್ತಾಂಗ ತೋರಿಸಿದ, ಬಳಿಕ ಮುಟ್ಟಿ ಫೀಲ್ ಮಾಡುವಂತೆ ಕೇಳಿಕೊಂಡ. ರೇಟ್ ಎಷ್ಟು ಕೊಡ್ತಿಯಾ? ಎಂದು ಕೇಳಿದ' ಅಂತ ಸಾಜಿದ್ ಕಾಮ ಪುರಾಣ ಬಿಚ್ಚಿಟ್ಟರು ಶೆರ್ಲಿನ್ ಚೋಪ್ರಾ.

ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ರಾಜ್ ಕುಂದ್ರಾ!

    ಸಾಜಿದ್ ಖಾನ್ ಸಹೋದರಿ ಫರ್ಹಾ ಖಾನ್ ಅವರ ಬಳಿ  ಈ ಘಟನೆ ಹೇಳೋಣ ಅಂತ ಅಂದುಕೊಂಡಿದ್ದೆ. ಫರ್ಹಾ ಖಾನ್, ಶಾರುಖ್ ಖಾನ್ ಅವರಿಗೂ ತುಂಬಾ ಆಪ್ತರು ಮತ್ತು ಒಳ್ಳೆಯ ಮಹಿಳೆ ಆದರೆ ಹೇಳಿಲ್ಲ' ಎಂದು ಹೇಳಿದರು. ಬಳಿಕ ಮೀ ಟೂ ಅಭಿಯಾನದ ಸಮಯದಲ್ಲಿ ಶೆರ್ಲಿನ್ ತಾನು ಚಿತ್ರರಂಗದಲ್ಲಿ ಅನುಭವಿಸಿದ್ದ ಕೆಟ್ಟ ಘಟನೆಯನ್ನು ಹೊರಹಾಕಿದ್ದರು. ಸಾಜಿದ್ ಖಾನ್ ವಿರುದ್ಧ ಸಿಡಿದೆದಿದ್ದರು. ಇದೀಗ ಮತ್ತೆ ಸಾಜಿದ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ ಶರ್ಲಿನ್. ಇನ್ನು ಸಾಜಿದ್ ಖಾನ್ ಎಂಟ್ರಿಯನ್ನು ಮತ್ತೋರ್ವ ನಟಿ ತುನುಶ್ರೀ ದತ್ತಾ ಕೂಡ ವಿರೋಧಿಸಿದ್ದಾರೆ. ತನುಶ್ರೀ ದತ್ತಾ ಕೂಡ ಮೀ ಟೂ ಆರೋಪ ಮಾಡಿದ್ದರು. 

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
    ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!