ಬಡ ಮಹಿಳೆಯೊಬ್ಬರ ಮಗುವನ್ನು ಎತ್ತಿಕೊಂಡು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಪೋಸ್ ಕೊಟ್ಟಿದ್ದಾರೆ. ಗಾಬರಿಯಿಂದ ಮಗು ಏನು ಮಾಡಿತು ನೋಡಿ...
ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದವರು ಬಾಲಿವುಡ್ ಹಾಟ್ ಬ್ಯೂಟಿ ಶೆರ್ಲಿನ್ ಚೋಪ್ರಾ. ಇನ್ನು ಈಕೆಯ ಹೆಸರು ಹೇಳಿದರೆ ಸಾಕು, ಅಸಭ್ಯ, ಅಶ್ಲೀಲ ಎನ್ನುವ ಚಿತ್ರಗಳೇ ಕಣ್ಣೆದುರು ಬರುತ್ತವೆ. ಈಕೆ ಡೀಸೆಂಟ್ ಡ್ರೆಸ್ ಹಾಕಿರುವ ಫೋಟೋ ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಶೆರ್ಲಿನ್ ಅವತಾರ ಇದೆ. ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಎದೆ ಭಾಗ ಮಾತ್ರ ನೋಡಲು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಕಾಣಿಸುತ್ತಿದೆ. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಇದೀಗ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಆಸೆಯಿಂದ ರಸ್ತೆಯಲ್ಲಿ ಹೋಗುತ್ತಿರುವ ಕೆಲಸದಾಕೆಯ ಮಗುವೊಂದನ್ನು ಹಿಡಿದುಕೊಂಡು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಬಡವರ ಮೇಲೆ ತಮಗೆ ಎಷ್ಟು ಮಮತೆ ಇದೆ ಎಂದು ಸಾಬೀತು ಮಾಡಲು ಈ ಫೋಟೋಶೂಟ್ ಅಷ್ಟೇ. ಆದರೆ ಈಕೆಯನ್ನು ನೋಡಿದ ಮಗು ದಂಗಾಗಿ ಹೋಗಿದೆ. ಮಗುವನ್ನು ಶೆರ್ಲಿನ್ ಎತ್ತಿಕೊಂಡು ಕಂಕುಳಿನಲ್ಲಿ ಇಟ್ಟುಕೊಳ್ಳುತ್ತಿದ್ದಂತೆಯೇ ಮಗು ಅಕ್ಷರಶಃ ಬೆವೆತು ಹೋಗಿದೆ. ಯಾವ ಪರ್ವತದ ಮೇಲೆ ತಾನು ಕುಳಿತಿದ್ದೇನೋ ಎನ್ನುವ ಭಯದಲ್ಲಿದೆ ಮಗು. ತಾನು ಅಮ್ಮನ ಮಡಿಲಿನಿಂದ ಇನ್ನೊಬ್ಬಳು ಮಹಿಳೆಯ ಬಳಿ ಬಂದಿದ್ದೇನೆ ಎನ್ನುವುದನ್ನು ಅರಿಯದ ಮಗು, ಶೆರ್ಲಿನ್ನನ್ನು ಗಾಬರಿಯಿಂದ ನೋಡಿದೆ. ಸಾಮಾನ್ಯವಾಗಿ ಮಕ್ಕಳು ಅಮ್ಮನ ಬಳಿಯಿಂದ ಮತ್ತೊಬ್ಬರ ಬಳಿ ಹೋದಾಗ ಅಳುವುದು ಮಾಮೂಲು. ಆದರೆ ಅಳು ಬಂದರೂ ಮಗು ಗಾಬರಿಯಿಂದ ಅಳುವುದಕ್ಕೂ ಭಯಪಡುವಂತೆ ಕಾಣುತ್ತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ನೋಡಬಹುದು.
ಧರಿಸಿರೋ ತುಂಡು ಬಟ್ಟೆ ಬಿಚ್ಚುತ್ತಲೇ ಕೈಕಾಲಿಗೆ ಮಸಾಜ್ ಮಾಡುವ ಆಫರ್ ಕೊಟ್ಟ ಶೆರ್ಲಿನ್: ವಿಡಿಯೋ ವೈರಲ್
ಮಗುವಿನ ಸ್ಥಿತಿಯನ್ನು ಕಂಡು ನಟಿಯ ಸಿಬ್ಬಂದಿ ಮಗುವನ್ನು ವಾಪಸ್ ಕೊಡುವಂತೆ ಕೇಳಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಮಗುವಿನ ಸ್ಥಿತಿ ಕಂಡು ನೆಟ್ಟಿಗರು ಅಯ್ಯೋ ಎನ್ನುತ್ತಿದ್ದಾರೆ. ಪ್ರಚಾರದ ಹುಚ್ಚಿಗೆ ಪಾಪ ಮಕ್ಕಳನ್ನು ಈ ರೀತಿ ಹಿಂಸಿಸಬೇಡಿ ಎಂದು ಹಲವರು ಹೇಳುತ್ತಿದ್ದಾರೆ. ನೀವು ದೊಡ್ಡವರ ಜೊತೆ ಎಷ್ಟು ಬೇಕಾದರೂ ಆಡಿಕೊಳ್ಳಿ, ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಮಾಡಬೇಡಿ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಪ್ರಚಾರದ ಹುಚ್ಚಿಗಾಗಿ ಮಕ್ಕಳನ್ನು ಬಳಸಿಕೊಳ್ಳಬೇಡಿ ಎಂದು ಮತ್ತೆ ಕೆಲವರು ನಟಿಯ ವಿರುದ್ಧ ಗರಂ ಆಗಿದ್ದಾರೆ. ಇನ್ನು ಕೆಲವರು ಪಾಪ ಆ ಮಹಿಳೆ ಬಡವರಾಗಿದ್ದರೂ ಮೈತುಂಬಾ ಬಟ್ಟೆ ತೊಟ್ಟಿದ್ದಾರೆ, ಈಕೆ ಗತಿಯಿಲ್ಲದವರ ರೀತಿ ಮೈಯೆಲ್ಲಾ ಬಿಟ್ಟುಕೊಂಡಿದ್ದಾರೆ ಎಂದು ಗೇಲಿ ಮಾಡುತ್ತಿದ್ದಾರೆ.
ಇವುಗಳ ನಡುವೆಯೇ ಕೆಲವರು ನಟಿಯನ್ನು ಹಾಡಿ ಹೊಗಳಿದ್ದಾರೆ ಕೂಡ. ನಟಿ ಏನೇ ಇರಬಹುದು, ಆಕೆಯ ಖಾಸಗಿ ವಿಷಯ ಅಥವಾ ಈ ರೀತಿ ಅಶ್ಲೀಲತೆಯ ತೋರಿಕೆ ಏನೇ ಇರಬಹುದು, ಶೆರ್ಲಿನ್ ಸದಾ ಮಕ್ಕಳನ್ನು ಪ್ರೀತಿಸುತ್ತಾರೆ. ಪ್ರಚಾರಕ್ಕಾಗಿಯಾದರೂ ಯಾವ ಸೆಲೆಬ್ರಿಟಿಯೂ ಈ ರೀತಿ ಬಡ ಮಕ್ಕಳನ್ನು ಎತ್ತಿಕೊಳ್ಳುವುದಿಲ್ಲ. ಸೆಲ್ಫಿಗೆ ಬಂದರೂ ಕೆಲವು ನಟ-ನಟಿಯರು ಅವರನ್ನು ದೂರ ಇಡುವುದನ್ನು ನೋಡಿದ್ದೇವೆ. ಅಂಥದ್ದರಲ್ಲಿ ಶೆರ್ಲಿನ್ನ ಈ ಗುಣ ಮೆಚ್ಚುವಂಥದ್ದು, ಕೆಲವೊಮ್ಮೆ ಸೆಲೆಬ್ರಿಟಿಗಳ ಪಾಸಿಟಿವ್ ಗುಣಗಳನ್ನೂ ನೋಡಬೇಕಾಗುತ್ತದೆ ಎಂದಿದ್ದಾರೆ. ಅದೇನೇ ಇದ್ದರೂ ತಮ್ಮ ಮಗುವನ್ನು ಇಂಥ ನಟಿಯೊಬ್ಬಳು ಎತ್ತಿಕೊಂಡಿರುವುದಕ್ಕೆ ಆ ಮಗುವಿನ ಅಮ್ಮ ಅಂತೂ ಸಕತ್ ಖುಷಿಯಾಗಿದ್ದಾರೆ. ಇದನ್ನೇ ಕೆಲವು ಕಮೆಂಟ್ನಲ್ಲಿ ತಿಳಿಸಿದ್ದು, ಇದಕ್ಕೆ ನಟಿಗೆ ಸಲಾಂ ಎನ್ನಲೇಬೇಕು ಎನ್ನುತ್ತಿದ್ದಾರೆ.
ಏರ್ಪೋರ್ಟ್ನಲ್ಲಿ ಶೆರ್ಲಿನ್ ಹಾಟ್ ಅವತಾರ: ವಿಮಾನ ಹಾರಾಟ ರದ್ದಾಗೋಯ್ತಾ? ವಿಡಿಯೋ ವೈರಲ್