ವಿವಾದಗಳ ನಟಿ ಶೆರ್ಲಿನ್ ಚೋಪ್ರಾ ರಸ್ತೆ ಬದಿಯ ಐಸ್ಕ್ರೀಂವಾಲನಿಗೆ ದುಡ್ಡು ಕೊಡದೇ ಐಸ್ಕ್ರೀಂ ತಿಂದು ಟ್ರೋಲ್ಗೆ ಒಳಗಾಗಿದ್ದಾರೆ. ಮಂಚದ ವಿಷ್ಯವನ್ನು ನೆಟ್ಟಿಗರು ಎಳೆದು ತಂದಿದ್ದಾರೆ.
ನಟಿ ಶೆರ್ಲಿನ್ ಚೋಪ್ರಾ ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಖ್ಯಾತಿ ಗಳಿಸಿದ ತಾರೆ. ಈಕೆ (Sherlyn Chopra) ಆಗಾಗ ಶಾಕಿಂಗ್ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು. ದೇಹ ಪ್ರದರ್ಶನದಿಂದಲೇ ಫೇಮಸ್ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರಿಂದ ಮತ್ತಷ್ಟು ಪ್ರಚಾರಕ್ಕೆ ಬಂದಿದ್ದರು.
ಇದೀಗ ನಟಿ ರೋಡ್ಸೈಡ್ನಲ್ಲಿ ಕೋನ್ ಐಸ್ಕ್ರೀಂ ತಿಂದಿದ್ದು, ಅದಕ್ಕೆ ದುಡ್ಡು ಕೊಡದೇ ಸಕತ್ ಟ್ರೋಲ್ ಆಗುತ್ತಿದ್ದಾರೆ. ಮಾಮೂಲಿಯಂತೆ ವಾಕರಿಕೆ ಬರುವ ದೇಹ ಪ್ರದರ್ಶನ ಮಾಡಿಕೊಂಡು ಐಸ್ಕ್ರೀಂವಾಲನ ಬಳಿಗೆ ಹೋದ ನಟಿ, ಅಲ್ಲಿ ಐಸ್ಕ್ರೀಂ ಕೇಳಿದ್ದಾರೆ. ಇದು ಯಾವ ಫ್ಲೇವರ್ ಎನ್ನುತ್ತಾ ವೆನ್ನಿಲ್ಲಾ ಫ್ಲೇವರ್ ತೆಗೆದುಕೊಂಡು ತಿಂದಿದ್ದಾರೆ. ಅಷ್ಟರಲ್ಲಿ ಅಂಗಡಿಯವ ದುಡ್ಡಿಯಾಗಿ ನೋಡಿದ್ದಾನೆ. ಆಗ ನನ್ನ ಬಳಿ ದುಡ್ಡು ತಗೋತೀಯಾ? ಇಲ್ವಲ್ಲಾ ಎಂದು ಶೆರ್ಲಿನ್ ಕೇಳಿದ್ದಾರೆ. ಅದಕ್ಕೆ ಏನು ಹೇಳಬೇಕು ಎಂದು ತಿಳಿಯದ ಐಸ್ಕ್ರೀಂವಾಲಾ ಇಲ್ಲ ಎಂದಿದ್ದಾನೆ. ಇದನ್ನು ಖುಷಿಯಿಂದ ಎಲ್ಲರಿಗೂ ಹೇಳಿದ್ದಾರೆ ನಟಿ. ಇದರ ವಿಡಿಯೋ ವೈರಲ್ ಆಗಿದ್ದು, ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಥೂ ನಿನ್ ಜನ್ಮಕ್ಕೆ, 10-20 ರೂಪಾಯಿ ಇರಲಿಲ್ವಾ ನಿನ್ ಹತ್ರ ಎಂದು ಕೇಳಿದ್ದಾರೆ. ಇನ್ನು ಕೆಲವರು ಹೋಗಿ ಆ 10 ರೂಪಾಯಿಯಿಂದ ಮೈತುಂಬಾ ಬಟ್ಟೆ ಹೊಲಿಸ್ಕೊ ಎಂದು ಐಸ್ಕ್ರಿಂವಾಲಾ ಬಿಟ್ಟಿದ್ದಾನೆ ಎಂದು ಕೆಲವರು ಹೇಳಿದರೆ, ರಾಖಿ ಸಾವಂತ್ ಬಳಿ ಭಿಕ್ಷೆ ಬೇಡಿದ್ರೆ ದುಡ್ಡು ಕೊಡ್ತಾ ಇದ್ದಳು ಎಂದಿದ್ದಾರೆ ಇನ್ನು ಕೆಲವರು.
ಸ್ಮಾರ್ಟ್ಫೋನ್ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ
ಇದು ಸಾಲದು ಎನ್ನುವುದಕ್ಕೆ ಕೆಲವು ಸಿಟ್ಟುಗೊಂಡಿರೋ ನೆಟ್ಟಿಗರು, ನೇರವಾಗಿ ಮಂಚದ ವಿಷ್ಯವನ್ನು ಎಳೆದು ತಂದಿದ್ದಾರೆ. ಅದೇನೆಂದರೆ, ನಟಿ, ತಮ್ಮ ವೈಯಕ್ತಿಕ ಮಾಹಿತಿ ಮತ್ತು ತಮ್ಮ ಜೀವನದಲ್ಲಿ ಎದುರಿಸಿದ ಹೋರಾಟಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹೆದರುವುದಿಲ್ಲ. ಇತ್ತೀಚೆಗಷ್ಟೇ ಆಕೆ ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದಾದ ಬಳಿಕ, ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.
ಇದನ್ನೇ ಉಲ್ಲೇಖಿಸಿರುವ ನೆಟ್ಟಿಗರು ಫ್ರೀಯಾಗಿ ಯಾರ ಜೊತೆಯಾದ್ರೂ ಮಲಗ್ತಿದ್ಯಾ? ಲಕ್ಷ ಲಕ್ಷ ರೂಪಾಯಿ ತಗೋತಿದ್ದೆ. ಈಗ ಹತ್ತಿಪ್ಪತ್ತು ರೂಪಾಯಿ ಆ ಬಡ ಐಸ್ಕ್ರಿಂವಾಲಾನಿಗೆ ನೀಡಲು ಆಗಿಲ್ವಾ ಎಂದು ಕೆಂಡಾಮಂಡಲವಾಗಿದ್ದಾರೆ. ಇನ್ನು ಶೆರ್ಲಿನ್ ಅವರ ಡ್ರೆಸ್ ಬಗ್ಗೆ ಮಾಮೂಲಿನಂತೆ ಟ್ರೋಲ್ಗಳ ಸುರಿಮಳೆಯಾಗುತ್ತಿದೆ.
ರಜನೀಕಾಂತರನ್ನು ಭಿಕ್ಷುಕ ಎಂದು ತಿಳಿದ ಮಹಿಳೆ ನೀಡಿದ್ರು 10 ರೂಪಾಯಿ! ಮುಂದೇನಾಯ್ತು?