Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

Published : Apr 15, 2023, 04:58 PM IST
Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

ಸಾರಾಂಶ

ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ಶೆರ್ಲಿನ್​ ಚೋಪ್ರಾ ಈಗ ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಏನದು?  

ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿ  ಶೆರ್ಲಿನ್ ಚೋಪ್ರಾ (Sherlyn Chopra) ಇತ್ತೀಚೆಗೆ ಭಾರಿ ಸುದ್ದಿಯಲ್ಲಿ ಇದ್ದುದು  ಡ್ರಾಮಾ ಕ್ವೀನ್​ ಖ್ಯಾತಿಯ ರಾಖಿ ಸಾವಂತ್ (Rakhi Sawant) ಅವರಿಂದಾಗಿ. ರಾಖಿ ಮತ್ತು ಶೆರ್ಲಿನ್​ ಹಾವು- ಮುಂಗುಸಿ ಥರ ಇದ್ದು, ಕೊನೆಗೊಂದು ದಿನ ಕ್ಲೋಸ್​ ಆಗಿದ್ದರು. ಆದರೆ ಇವರಿಬ್ಬರ ನಡುವೆ ಹಿಂದೊಮ್ಮೆ ಭಾರಿ ವಿವಾದವೇ ಸೃಷ್ಟಿಯಾಗಿ ಹೋಗಿತ್ತು. ಅದೇನೆಂದರೆ, ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್​ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್​ ಖಾನ್​ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್​ ಖಾನ್​ ಅವರನ್ನು ಸಲ್ಮಾನ್​ ಖಾನ್​ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್​ ಅವರು ಶೆರ್ಲಿನ್​ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನ್​ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ರಾಖಿ ಸಾವಂತ್​ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಶೆರ್ಲಿನ್​  ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್​ ಅವರ ಬಂಧನ ಆಗಿತ್ತು. ಇವೆಲ್ಲಾ ವಿಷಯವೇನೋ ಈಗ ತಣ್ಣಗಾಗಿದ್ದರೆ ಶೆರ್ಲಿನ್​ ಚೋಪ್ರಾ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಉದ್ಯಮಿ ವಿರುದ್ಧ ನಟಿ ಕೆಂಡಾಮಂಡಲವಾಗಿದ್ದಾರೆ.

ಹೌದು! ನಟಿ ಶೆರ್ಲಿನ್​ ಚೋಪ್ರಾ ಉದ್ಯಮಿಯೊಬ್ಬರ ವಿರುದ್ಧ ಈಗ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ಕರೆದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದಾರೆ. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದಾರೆ.

Shobana: ಮಳೆ ಸೀನ್​ ಮಾಡುವಾಗ ಒಳಗೆ ಬಟ್ಟೆ ಇರಲಿಲ್ಲ... ರಜನೀ ಸರ್​ ಎತ್ತಿಕೊಂಡೇ ಬಿಟ್ರು...

ನಟಿ ಹೇಳಿದ್ದೇನು? 
'ಏಪ್ರಿಲ್ 12 ರಂದು ಮಧ್ಯಾಹ್ನ ದುಬೈನಿಂದ (Dubai) ನಿಮಗಾಗಿ ಬಂದಿದ್ದೇನೆ ಎಂದು ಹೇಳಿದ  ಮುಂಬೈ ಉದ್ಯಮಿ, ಹೋಟೆಲ್ ಒಂದರಲ್ಲಿ ಭೇಟಿಯಾಗಲು ಹೇಳಿದ್ದರು.  ನನ್ನ ಮೇಲೆ ಹೂಡಿಕೆ ಮಾಡಲು ಉತ್ಸುಕತೆಯಿಂದ ಕಾಯುತ್ತಿರುವುದಾಗಿ ನನ್ನ ಮ್ಯಾನೇಜರ್​ಗೆ ಅವರು ಹೇಳಿದ್ದರು. ಸಂಜೆ,  ಮುಂಬೈನ ಸ್ಟುಡಿಯೊದಲ್ಲಿ ಹಿಪ್ ಹಾಪ್ ಹಾಡನ್ನು ರೆಕಾರ್ಡ್ ಮಾಡಬೇಕಿತ್ತು. ಅದನ್ನು ಮುಗಿಸಿ  ಮ್ಯಾನೇಜರ್ ಜೊತೆ  ಮುಂಬೈನ ಹೋಟೆಲ್‌ಗೆ ಬಂದೆ. ಅಲ್ಲಿ  ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ ತಮ್ಮನ್ನು ಪರಿಚಯಿಸಿಕೊಂಡರು. ವಿಡಿಯೋ ಆಲ್ಬಂ ಹಾಡೊಂದನ್ನು ಮಾಡಿಕೊಡುವಂತೆ ಕೇಳಿಕೊಂಡರು. ನಾನು ಅದಕ್ಕೆ ಒಪ್ಪಿದೆ' ಎಂದು ನಟಿ ಹೇಳಿದ್ದಾರೆ.

ಈ ವೇಳೆ ಉದ್ಯಮಿ ನನ್ನನ್ನು ತುಂಬಾ ಹೊಗಳಿದರು. ನೀವು ತುಂಬಾ ಹಾಟ್​ (Hot) ಎಂದರು. ಹಾಡಿನ ನಿರ್ಮಾಣಕ್ಕೆ ನನ್ನ  ಮ್ಯಾನೇಜರ್‌ ಕೈಯಲ್ಲಿ ಮುಂಗಡ ಹಣ ನೀಡಿದರು. ಇದಾದ ಬಳಿಕ ಮಾತುಕತೆ ಮುಂದುವರೆಯಿತು. ಮನೆಗೆ ಹೊರಡುವ ಬಗ್ಗೆ ನಾನು ಹೇಳುತ್ತಿದ್ದಂತೆ, ಅವರು ತಮ್ಮ ಬಳಿ ಗಾಡಿ ಇಲ್ಲ, ಸಾಧ್ಯವಾದರೆ  ಡ್ರಾಪ್‌ ಮಾಡಿ ಎಂದು ಕೇಳಿಕೊಂಡರು. ಕೂಡಲೇ ನಾನು  ಮೊದಲು ನನ್ನನ್ನು ಮನೆಗೆ ಬಿಟ್ಟು ಇವರನ್ನು ಅವರ ಮನೆಗೆ ಬಿಡುವಂತೆ  ಕಾರ್‌ ಡ್ರೈವರ್‌ಗೆ ಹೇಳಿದ್ದೆ. ಅದರಂತೆ, ಶರ್ಲಿನ್‌ ಮನೆ ಬರುತ್ತಿದ್ದಂತೆ, ಉದ್ಯಮಿ ನಿಮ್ಮ ಮನೆ ನೋಡಬಹುದಾ? ಎಂದು ಕೇಳಿದರು. ನಾನು  ಅದಕ್ಕೇನಂತೆ ಎಂದು ಮನೆಗೆ ಕರೆದೊಯ್ದೆ. ಕೆಲಹೊತ್ತು ಮಾತನಾಡಿದರು. ಪಾರ್ಸೆಲ್‌ ಊಟ ತರಿಸಿ ಸೇವಿಸಿದರು.  

ಬಾಲಿವುಡ್​ನಲ್ಲಿ ಲೈಂಗಿಕ ಕಿರುಕುಳ: ಶಾಕಿಂಗ್​ ಸತ್ಯ ತಿಳಿಸಿದ ನಟಿ Nargis Fakhri

ಇಷ್ಟಾದ ಬಳಿಕ ಊಟದ ಬಳಿಕ ಮಂಚದ ಮೇಲೆ ಕುಳಿತು ಎದೆ ಭಾಗವನ್ನು ಮುಟ್ಟಿದರು. ನೀವು ತುಂಬಾ ಹಾಟ್​ ಆಗಿದ್ದೀರಿ ಎಂದರು. ಕೂಡಲೇ ನನಗೆ ಶಾಕ್​ ಆಯಿತು. ನಾನು ಹಾಟ್​ ನಿಜ, ಆದರೆ ಪಬ್ಲಿಕ್​ ಪ್ರಾಪರ್ಟಿ ಅಲ್ಲ ಎಂದೆ. ಅವರು ಆಗಲೇ ಡ್ರಿಂಕ್ಸ್​ ಮಾಡಿದ್ದರು. ನಿಮ್ಮನ್ನು ನೋಡಿ ನನಗೆ ಕಂಟ್ರೋಲ್​ ಮಾಡಲು ಆಗುತ್ತಿಲ್ಲ, ನೀವು ತುಂಬಾನೇ ಹಾಟ್​ ಆಗಿದ್ದೀರಿ ಎಂದರು.  ನನಗೆ ಇದೆಲ್ಲಾ ಇಷ್ಟವಾಗಲ್ಲ, ಈ ಕೂಡಲೇ ನೀವು ಹೊರಡಿ ಎಂದೆ. ಬಳಿಕ ಕ್ಷಮೆಯಾಚಿಸಿ, ಹೊರಡಲು ರೆಡಿಯಾದಂತೆ ಮಾಡಿದರು. ನಾನು ನನ್ನ ಕೋಣೆಗೆ ವಾಪಸಾಗುತ್ತಿದ್ದಂತೆಯೇ,  ಚಾರ್ಜರ್‌ ನೆಪದಲ್ಲಿ ಮತ್ತೆ ನನ್ನ ಕೋಣೆಗೆ ಬಂದು ಲೈಂಗಿಕ ಕಿರುಕುಳ (Sexual harasemet) ನೀಡಲು ಶುರು ಮಾಡಿದರು. ನಾನು ವಿರೋಧಿಸಿದ್ದಕ್ಕೆ  ಜೀವ ಬೆದರಿಕೆಯನ್ನೂ ಹಾಕಿದರು ಎಂದು ಅಂದು ನಡೆದ ಘಟನೆಯನ್ನು  ಶರ್ಲಿನ್‌ ಚೋಪ್ರಾ  ಹೇಳಿದ್ದಾರೆ. ಸದ್ಯ ಶೆರ್ಲಿನ್ ಚೋಪ್ರಾ ಅವರ ಈ ದೂರಿನ ಆಧಾರದ ಮೇಲೆ ಸುನೀಲ್ ಪರಸ್ಮಾನಿ ಲೋಧಾ ವಿರುದ್ಧ ಜುಹು ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಾಮಾಚಾರ ಮಾಡಿಸಿ ಮುಸ್ಲಿಂ ಯುವಕನ ಮದ್ವೆಯಾದ ಸ್ಟಾರ್​ ನಟಿ: ಜ್ಯೋತಿಷಿ ಶಾಕಿಂಗ್​ ಹೇಳಿಕೆ- ಯಾರಾಕೆ?
ಪಾಕ್​ ಬ್ರೇಕಿಂಗ್​ ನ್ಯೂಸ್​: ಧುರಂಧರ್ ಸಿನಿಮಾದ ಇಂಚಿಂಚೂ ಡೈಲಾಗ್​ ​ ಬರೆದದ್ದೇ ನರೇಂದ್ರ ಮೋದಿ!