ನಾನೊಬ್ಬ ಕೆಟ್ಟ ತಂದೆ... ಮಗನ ಎದುರು ಭಾವುಕರಾದ ನಟ Mithun Chakraborty

By Suvarna NewsFirst Published Apr 15, 2023, 4:51 PM IST
Highlights

ನಟ ಮಿಥುನ್​ ಚಕ್ರವರ್ತಿಯವರ ಪುತ್ರ ನಮಶಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಚಿತ್ರ ಬ್ಯಾಡ್​ ಬಾಯ್​ ಕಾರ್ಯಕ್ರಮದಲ್ಲಿ ಮಿಥುನ್​ ಚಕ್ರವರ್ತಿ ಮಗನ ಎದುರು ಭಾವುಕರಾದರು.

ಅಮಿತಾಭ್ ಬಚ್ಚನ್‌ನಿಂದ ಶಾರುಖ್ ಖಾನ್ ವರೆಗೆ ಅನೇಕ ಬಾಲಿವುಡ್ ಸೂಪರ್‌ಸ್ಟಾರ್‌ಗಳು ತಮ್ಮದೇ ಆದ ವಿಶೇಷಣಗಳನ್ನು ಹೊಂದಿದ್ದಾರೆ.  ಕೆಲವರು 'ಆಂಗ್ರಿ ಯಂಗ್ ಮ್ಯಾನ್' ಎಂದು ಕರೆದರೆ,  ಕೆಲವರು 'ಬಾಲಿವುಡ್‌ನ ಬಾದ್‌ಶಾ' ಎಂದು ಕರೆಯುತ್ತಾರೆ. ಕೆಲವರು ಸೂಪರ್​ಸ್ಟಾರ್​, ಇನ್ನು ಕೆಲವರು ರಾಕಿಂಗ್​ ಸ್ಟಾರ್​... ಹೀಗೆ ಖ್ಯಾತ ನಟರ ಹಿಂದೆ ಒಂದೊಂದು ವಿಶೇಷಣಗಳು ಇರುತ್ತವೆ. ಆದರೆ ಇಂದು ನಾವು ಬಾಲಿವುಡ್‌ಗೆ ಮೊದಲ ಬಾರಿಗೆ ಡಿಸ್ಕೋ ಡ್ಯಾನ್ಸ್ ನೀಡಿದ ಕಲಾವಿದನ ಬಗ್ಗೆ ಮಾತನಾಡುತ್ತಿದ್ದೇವೆ. ಅವರೇ  'ಡಿಸ್ಕೋ ಡ್ಯಾನ್ಸರ್' (Disco dancer) ಎಂದು ಜನಜನಿತರಾಗಿರುವ  ಮಿಥುನ್ ಚಕ್ರವರ್ತಿ. ಮಿಥುನ್​ ಚಕ್ರವರ್ತಿಯವರು (Mithun Chakraborty) ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಆದರೆ ಅವರ ಮಗ ನಮಶಿ ಈಗ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲಿದ್ದಾರೆ. ತಮ್ಮ ಮತ್ತು ಮಗನ ಸಂಬಂಧದ ಕುರಿತು ಈ ಸಂದರ್ಭದಲ್ಲಿ ಮಾತನಾಡಿದ ನಟ ಮಿಥುನ್​ ಚಕ್ರವರ್ತಿಯರು ತಮ್ಮನ್ನು ತಾವು ಬ್ಯಾಡ್​ ಫಾದರ್​ ( ತುಂಬಾ ಕೆಟ್ಟ ತಂದೆ) ಎಂದು ಹೇಳಿ ಭಾವುಕರಾದ ಘಟನೆ ನಡೆದಿದೆ.  

ನಮಶಿ ಅವರ 'ಬ್ಯಾಡ್ ಬಾಯ್' ಚಿತ್ರದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ಅವರು  ತುಂಬಾ ಭಾವುಕರಾಗಿ ಕಂಡುಬಂದರು.   ಕಾರ್ಯಕ್ರಮದಲ್ಲಿ ಮಿಥುನ್ ಚಕ್ರವರ್ತಿ ಅವರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಅವರ ಮಗ ನಮಶಿಗೆ (Namashi) ಕಲಾವಿದನಾಗಿ ಏನು ಕಲಿಸಲು ಬಯಸುತ್ತೀರಿ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಮಿಥುನ್ ತುಂಬಾ ಸರಳವಾಗಿ ಉತ್ತರಿಸಿದ್ದು, 'ಒಳ್ಳೆಯ ಕಲಾವಿದನಾಗುವ ಮೊದಲು ಒಳ್ಳೆಯ ವ್ಯಕ್ತಿಯಾಗಬೇಕು ಎಂದು ನನ್ನ ಮಗನಿಗೆ ಒಂದೇ ಒಂದು ಸಲಹೆ ನೀಡುತ್ತೇನೆ. ಏಕೆಂದರೆ ಒಬ್ಬ ಒಳ್ಳೆಯ ವ್ಯಕ್ತಿ ಅಲ್ಲಿ ಮಾತ್ರ ಉತ್ತಮ ಕಲಾವಿದನಾಗಲು ಸಾಧ್ಯ ಎಂದರು.  ಈ ಸಂದರ್ಭದಲ್ಲಿ ಅವರು  ತುಂಬಾ ಭಾವುಕರಾದರು.  ನಾನು 45 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಅವನು ಹೊಸಬನಾಗಿದ್ದಾಗ, ಅವನನ್ನು ನನ್ನೊಂದಿಗೆ ಹೋಲಿಸಬೇಡಿ. ನೀವು ಅವನ ಕೆಲಸವನ್ನು ನೋಡಿ ನಂತರ ಅವನನ್ನು ನಿರ್ಣಯಿಸಿ. ನೀವು ನನ್ನೊಂದಿಗೆ ಹೋಲಿಕೆ ಮಾಡಿದಾಗ ಅವನು ಚಿಕ್ಕದಾಗಿ ಕಾಣುತ್ತಾನೆ" ಎಂದು 72 ವರ್ಷದ ನಟ ಮಿಥುನ್​.  

Latest Videos

ಆಕೆ I Love You ಎಂದ್ರೆ ಲೈಫ್ ಬರ್ಬಾದ್​​​.... ಸಲ್ಮಾನ್​ ಹೇಳಿಕೆಗೆ ಮಹಿಳೆಯರು ಕಿಡಿಕಿಡಿ

ನಂತರ ನಮಶಿಯತ್ತ ತಿರುಗಿ ಅವರು,  'ನಿನ್ನ ಯಶಸ್ಸಿಗೆ ನೀನು  ನಿನ್ನದೇ ಯುದ್ಧವನ್ನು ಮಾಡಬೇಕಾಗುವುದು. ನಾನು ಯಾವಾಗಲೂ ತಂದೆಯಾಗಿ ನಿಮ್ಮನ್ನು ಬೆಂಬಲಿಸುತ್ತೇನೆ ಅಷ್ಟೇ, ಆದರೆ ನಿನ್ನ ಕೆಲಸಕ್ಕೆ ನೀನೇ  ಹೋರಾಡಬೇಕಾಗುತ್ತದೆ. ಏಕೆಂದರೆ ನಿನ್ನ  ಜಗತ್ತನ್ನು ನೀನೇ  ನೋಡಬೇಕು ಮತ್ತು ಪ್ರಪಂಚದ ಮಾರ್ಗಗಳನ್ನು ನೀನೇ ಕಲಿಯಬೇಕು ಎಂದು ಹೇಳುವಷ್ಟರಲ್ಲಿ ಗದ್ಗಿತರಾದ ಅವರು, ಆ  ರೀತಿ ನೋಡಿದರೆ ನಾನು ತುಂಬಾ ಕೆಟ್ಟ ತಂದೆ ಎಂದು ಹೇಳಿದರು.

ಕೂಡಲೇ ಮಗ ನಮಶಿ, 'ನಾನು ತುಂಬಾ ಅದೃಷ್ಟಶಾಲಿ' ಎಂದರು.  ಮಿಥುನ್ ಚಕ್ರವರ್ತಿ ನನ್ನ ತಂದೆಯಾಗಿರುವುದು ನನ್ನ ಅದೃಷ್ಟ ಎಂದು ನಮಶಿ ತಮ್ಮ ತಂದೆಯ ಬಗ್ಗೆ ಮಾತನಾಡುತ್ತಾ ಹೇಳಿದರು.  ಅವರು ಮನೆಯಲ್ಲಿ ನನ್ನನ್ನು ತುಂಬಾ ಪ್ರೀತಿಸುತ್ತಾರೆ (Lovable) ಮತ್ತು ಅವರ ಕೈಯಿಂದ ಅಡುಗೆ ತಿನ್ನಲು ನಾವೆಲ್ಲಾ ಸದಾ ಕಾತರರಾಗಿರುತ್ತೇವೆ. ಅವರು  ಅತ್ಯುತ್ತಮ ಅಡುಗೆಯವರು. ನನ್ನ ಕೆಲಸದ ಸಮಯದಲ್ಲಿ ಅವರು ಯಾವಾಗಲೂ ಧೈರ್ಯ ತುಂಬುತ್ತಿರುತ್ತಾರೆ.  ಇವತ್ತು ನನಗೆ ಸಿಕ್ಕಿರುವ ಹೊಗಳಿಕೆ ಎಲ್ಲವೂ ಅವರಿಗೇ ಸಲ್ಲಬೇಕು' ಎಂದರು. ಮಿಥುನ್ ಚಕ್ರವರ್ತಿ ಅವರ ಪುತ್ರ ನಮಶಿ ಅಭಿನಯದ 'ಬ್ಯಾಡ್ ಬಾಯ್' ಚಿತ್ರದ ಒಂದು ಹಾಡು ಇತ್ತೀಚಿನ ದಿನಗಳಲ್ಲಿ ಭಾರೀ ಹಿಟ್ ಆಗುತ್ತಿದೆ. ಇದರೊಂದಿಗೆ ನಮಶಿಗೆ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರು ನಿರಂತರವಾಗಿ ತಮ್ಮ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರವು ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Aryan Khan: ಶಾರುಖ್​ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್​ ತಿವಾರಿ

click me!