ನಟಿ ಕಂಗನಾ ಮತ್ತು ಶೇಖರ್ ಸುಮನ್ ಮಗ ಅಧ್ಯಯನ್ ನಡುವೆ ಬ್ರೇಕಪ್ಗೆ ಕಂಗನಾ ಕಾರಣನಾ? ಶೇಖರ್ ಸುಮನ್ ಹೇಳಿದ್ದೇನು?
ಖ್ಯಾತ ಕಿರುತೆರೆ ನಿರೂಪಕ ಶೇಖರ್ ಸುಮನ್ (Shekhar Suman) ಪುತ್ರ ಅಧ್ಯಯನ್ ಸುಮನ್ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಜೊತೆಗಿನ ಅಫೇರ್ ಮತ್ತು ಅವರ ವಿವಾದದ ಕಥೆ ತುಂಬಾ ಹಳೆಯದು. 2008 ಮತ್ತು 2009ರಲ್ಲಿ ಅಧ್ಯಯನ್ ಮತ್ತು ಕಂಗನಾ ಇಬ್ಬರು ತುಂಬಾ ಸ್ನೇಹಿತರಾಗಿದ್ದರು. ಇವರ ಸದಾ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರಿಂದ ಡೇಟಿಂಗ್ನಲ್ಲಿ ಇದ್ದಾರೆ ಎನ್ನುವ ಸುದ್ದಿಯಾಗಿತ್ತು, ಜೊತೆಗೆ ಅವರಿಬ್ಬರ ನಡುವೆ ಇದ್ದ ಪ್ರೀತಿಯ ಬಗ್ಗೆ ಅನೇಕ ಮಾತುಗಳು ಕೇಳಿ ಬಂದಿದ್ದವು. ನಂತರ ಇವರಿಬ್ಬರ ಸಂಬಂಧ ಬ್ರೇಕ್ ಆಗಿರುವ ಬಗ್ಗೆ ಸುದ್ದಿಯಾಗಿದ್ದರೂ ಇವರಿಬ್ಬರ ನಡುವೆ ಏನಾಯಿತು ಎನ್ನುವುದು ಸೀಕ್ರೆಟ್ ಆಗಿಯೇ ಉಳಿದಿತ್ತು. ಆದರೆ 2016ರಲ್ಲಿ ನಟ ಅಧ್ಯಯನ್ ಕಂಗನಾ ಬಗ್ಗೆ ಸ್ಫೋಟಕ ಮಾಹಿತಿ ತಿಳಿಸಿದ್ದರು. ಅದೇನೆಂದರೆ, ಕಂಗನಾ ಮಾದಕ ದ್ರವ್ಯವನ್ನು ಸೇವಿಸುತ್ತಾರೆ ಎಂದು ಹೇಳಿದ್ದರು. ಆದ್ದರಿಂದ ತಾವು ಬ್ರೇಕ್ ಮಾಡಿಕೊಂಡಿರುವುದಾಗಿ ಹೇಳಿದ್ದರು. ಇದಕ್ಕೆ ತಮ್ಮ ತಂದೆ, ಖ್ಯಾತ ಟಿವಿ ನಿರೂಪಕ ಶೇಖರ್ ಸುಮನ್ ನೆರವಾಗಿದ್ದರು ಎಂದು ಅಧ್ಯಯನ್ ಹೇಳಿದ್ದರು.
'ಒಂದು ಹಂತದಲ್ಲಿ ಯಾರಾದರೊಬ್ಬರು ತಮ್ಮ ಜೀವನದಲ್ಲಿ ಮುಂದೆ ಸಾಗಲೇಬೇಕು. ಕಂಗನಾ (Kangana Ranaut) ಜೊತೆ ಬ್ರೇಕ್ ಅಪ್ ಆದ ಬಳಿಕ ತುಂಬಾ ನೊಂದು ಕೊಂಡಿದ್ದೆ. ಇದರಿಂದ ಹೊರಕ್ಕೆ ಬರಲು ನನ್ನ ತಂದೆ ಸಹಾಯ ಮಾಡಿದರು,' ಎಂದು ಅಧ್ಯಯನ್ ಹೇಳಿದ್ದರು. 'ನನ್ನ ತಂದೆ ನನಗೆ ಯಾವಾಗಲೂ ಯಾರು ಒಳ್ಳೆಯವರು, ಕೆಟ್ಟವರು ಅಂತ ಇರುವುದಿಲ್ಲ, ನೀವು ಒಂದು ಸಂಬಂಧದಲ್ಲಿದ್ದರೆ ನೀವು ಪರಸ್ಪರರ ಜೊತೆ ಇರಲು ಬಯಸುವಿರಾ ಅಥವಾ ಇಲ್ಲವೇ ಎನ್ನುವುದು ಮಾತ್ರ ಮುಖ್ಯ, ಎಂದು ಹೇಳಿದ್ದರು. ಅದನ್ನು ನೆನಪಿನಲ್ಲಿಟ್ಟುಕೊಂಡು ಜೀವನದಲ್ಲಿ ಮುಂದೆ ಸಾಗಿದ್ದೇನೆ ಎಂದು ಅಧ್ಯಯನ್ ಹೇಳಿಕೊಂಡಿದ್ದರು. ಈ ಮೂಲಕ ಕಂಗನಾ ಮಾದಕ ದ್ರವ್ಯಗಳ ವ್ಯಸನಿ ಎನ್ನುವುದಾಗಿ ಅವರು ಹೇಳಿದ್ದರು.
Cannes 2023ಯಲ್ಲಿ ಇಶಾ ಗುಪ್ತಾ: ಮೇಲಂತೂ ಓಪನ್ನು, ಚಡ್ಡಿಯಾದ್ರೂ ಹಾಕ್ಬಾರ್ದಾ ಎಂದ ಟ್ರೋಲಿಗರು!
ಈ ಘಟನೆ ನಡೆದ ಕೆಲ ವರ್ಷಗಳೇ ಕಳೆದಿದ್ದು, ಇದೀಗ ಶೇಖರ್ ಸುಮನ್ ತಮ್ಮ ಮಗ ಮತ್ತು ಕಂಗನಾ ಬ್ರೇಕಪ್ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕಂಗನಾ ಜೊತೆ ಅಧ್ಯಯನ್ ಬ್ರೇಕಪ್ ಆದಾಗ ಅಧ್ಯಯನ್ ಮಾತ್ರವಲ್ಲ, ಅವರ ತಂದೆ ಶೇಖರ್ ಸುಮನ್ ಕೂಡ ಅವರ ವಿರುದ್ಧ ಸಾಕಷ್ಟು ಮಾತನಾಡಿದ್ದರು. ಆದರೆ, ಶೇಖರ್ ಈಗ ಮನಸ್ಸು ಬದಲಾಯಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಶೇಖರ್ ಸುಮನ್ ತಮ್ಮ ಮಗನ ಬ್ರೇಕಪ್‌ನಲ್ಲಿ (Break up) ಕಂಗನಾ ಅವರ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
'ಅಧ್ಯಯನ್ ಸುಮನ್ (Adhyayan Suman) ಮತ್ತು ಕಂಗನಾ ರಣಾವತ್ ಅವರ ಬ್ರೇಕಪ್ ಬಗ್ಗೆ ನನಗೆ ಎಲ್ಲವೂ ತಿಳಿದಿತ್ತು, ಆದರೆ ನಾನು ಈ ಬಗ್ಗೆ ನಟಿಯೊಂದಿಗೆ ಎಂದಿಗೂ ಮಾತನಾಡಲಿಲ್ಲ. ಈ ಬ್ರೇಕಪ್ ಕುರಿತು ಅಧ್ಯಯನ್ ಅಥವಾ ಕಂಗನಾ ರಣಾವತ್ ಇಬ್ಬರನ್ನೂ ದೂಷಿಸಲಾಗುವುದಿಲ್ಲ' ಎಂದಿದ್ದಾರೆ ಶೇಖರ್ ಸುಮನ್. ಈ ವಿಷಯದಲ್ಲಿ ಕಂಗನಾ ತುಂಬಾ ನೊಂದುಕೊಂಡಿದ್ದರು. ಅಧ್ಯಯನ್ ಜೊತೆ ಆಕೆ ಹೋರಾಟ ನಡೆಸಬೇಕಾಯಿತು. ಈ ಹೋರಾಟದಲ್ಲಿ ನಾನು ಆಕೆಗೆ ಧೈರ್ಯವನ್ನು ನೀಡಬಲ್ಲವನಾಗಿದ್ದೇನೇ ವಿನಾ ಆಕೆಯ ಪರವಾಗಿ ಹೋರಾಡಲು ಸಾಧ್ಯವಾಗಲಿಲ್ಲ. ಅವರ ಸಂಬಂಧವನ್ನು ನಾನು ಎಂದಿಗೂ ವಿರೋಧಿಸಲಿಲ್ಲ. ಅವರೇ ಪ್ರತ್ಯೇಕವಾಗಿ ಇರಲು ನೋಡಿದ್ದರು. ನಾನು ಎಂದಿಗೂ ಯಾವುದೇ ಸಂಬಂಧವನ್ನು ವಿರೋಧಿಸಿಲ್ಲ' ಎಂದಿದ್ದಾರೆ ಶೇಖರ್.
ಜಾತಕ ತಂದ ಆಪತ್ತು: ಸ್ಯಾಂಡಲ್ವುಡ್ ತಾರೆ ಮಧುಮಿತಾ ಇಂಟರೆಸ್ಟಿಂಗ್ ಲವ್ ಸ್ಟೋರಿ!
ಕೆಲವೊಮ್ಮೆ ನಿಮ್ಮ ಜೀವನದ ಮೊದಲ ಸಂಬಂಧದಲ್ಲಿ ನೀವು ಯಶಸ್ವಿಯಾಗುತ್ತೀರಿ. ಕೆಲವರು ಯಶಸ್ವಿಯಾಗುತ್ತಾರೆ ಮತ್ತು ಕೆಲವರು ವಿಫಲರಾಗುತ್ತಾರೆ. ಅವರು ತಮ್ಮ ಮೊದಲ ಸಂಬಂಧಕ್ಕೆ ಬರುವುದು ಯಾರಿಗೂ ಇಷ್ಟವಿರಲಿಲ್ಲ. ಆದರೆ ಸಮಾಜವು ನಾಟಕವನ್ನು ಪ್ರೀತಿಸುತ್ತದೆ. ಜನರೇ ಇವರಿಬ್ಬರ ಸಂಬಂಧ ಬೇರ್ಪಡಿಸಬೇಕೆಂದು ಬಯಸಿದ್ದರು. ಕೆಲವೊಮ್ಮೆ ನಿಮ್ಮ ಸ್ನೇಹಿತರು (Friends) ನಿಮ್ಮ ಸಂತೋಷವನ್ನು ಬಯಸುವುದಿಲ್ಲ. ಈ ಪ್ರಕರಣದಲ್ಲಿಯೇ ಹೀಗೆಯೇ ಆಗಿದೆ. ಇವರಿಬ್ಬರ ಸಂಬಂಧದಲ್ಲಿ ಅಧ್ಯಯನ್ ಅಥವಾ ಕಂಗನಾ ಇಬ್ಬರದ್ದೂ ತಪ್ಪಲ್ಲ. ಪರಿಸ್ಥಿತಿ ಹಾಗೆ ಮಾಡಿತು ಎಂದಿದ್ದಾರೆ.
ಅಂದಹಾಗೆ, ಅಧ್ಯಯನ್ ಸುಮನ್ ಮತ್ತು ಕಂಗನಾ ರಣಾವತ್ ಅವರ ಸಂಬಂಧವು 'ರಾಜ್: ದಿ ಮಿಸ್ಟರಿ ಕಂಟಿನ್ಯೂಸ್' (2008) ಚಿತ್ರದ ಸೆಟ್‌ಗಳಲ್ಲಿ ಪ್ರಾರಂಭವಾಗಿತ್ತು.