ಪಠಾಣ್​, ಕೆಜಿಎಫ್ 2​ ದಾಖಲೆ ಉಡೀಸ್​: ಎರಡನೇ ವಾರದಲ್ಲಿ The Kerala Story ಗಳಿಸಿದ್ದೆಷ್ಟು?

By Suvarna News  |  First Published May 17, 2023, 3:11 PM IST

ಬ್ಯಾನ್​, ಪ್ರತಿಭಟನೆಯ ನಡುವೆಯೂ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್​ನತ್ತ ಸಾಗಿದೆ. 2ನೇ ವಾರದ ಗಳಿಕೆ  ಪಠಾಣ್​ ಮತ್ತು ಕೆಜಿಎಫ್​ 2 ಮೀರಿಸಿದೆ ಎನ್ನಲಾಗಿದೆ. 
 


ಯಾವ ಬ್ಯಾನ್​ಗೂ ಜಗ್ಗಲಿಲ್ಲ, ಯಾವ ಪ್ರತಿಭಟನೆಗೂ ಬಗ್ಗಲಿಲ್ಲ. ಕೆಲ ವರ್ಗಗಳಿಗೆ ಸಹಿಸಲು ಅಸಾಧ್ಯವಾಗಿರುವ ಕಹಿ ಸತ್ಯವನ್ನು ಜಗತ್ತಿಗೆ ತೋರಿಸಿರುವ ದಿ ಕೇರಳ ಸ್ಟೋರಿ (The Kerala Story) ಭರ್ಜರಿ ಕಲೆಕ್ಷನ್​ನ್ನತ್ತ ಮುನ್ನುಗ್ಗುತ್ತಿದೆ. ಎರಡನೇ ವಾರದಲ್ಲಿ ಇದು ಮಾಡಿರುವ ಗಳಿಕೆ ಬ್ಲಾಕ್​ಬಸ್ಟರ್​ ಚಿತ್ರ ಎನಿಸಿರುವ ಪಠಾಣ್​ ಹಾಗೂ ಕೆಜಿಎಫ್​ 2 ಮೀರಿದೆ ಎಂದು ವರದಿ ಹೇಳಿದೆ. ಹೌದು! ಕೆಲ ವರ್ಷಗಳಿಂದ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಜೀವ ತುಂಬಿದ್ದು ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ. ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್​ ಎಂದು ದೀಪಿಕಾ ಪಡುಕೋಣೆ ಹಾಕಿ ಬಹಳಷ್ಟು ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಮೇಲೂ ಪಠಾಣ್​ ಹಲವು ದಾಖಲೆಗಳನ್ನು ಮುರಿದಿತ್ತು.  ಭಯಾನಕ  ಸತ್ಯ ಘಟನೆಯನ್ನು ಸಹಿಸದ  ವರ್ಗದವರಿಂದ ಇಂದಿಗೂ ಬ್ಯಾನ್​, ಪ್ರತಿಭಟನೆ ಎದುರಿಸುತ್ತಿರುವ ದಿ ಕೇರಳ ಸ್ಟೋರಿ ಈಗ ಪಠಾಣ್​ ದಾಖಲೆಯನ್ನೂ ಉಡೀಸ್​ ಮಾಡಿದೆ ಎನ್ನಲಾಗಿದೆ. ಇದೇ 5ರಂದು ಬಿಡುಗಡೆಯಾಗಿರುವ ದಿ ಕೇರಳ ಸ್ಟೋರಿ ಚಿತ್ರದ ಎರಡನೇ ವಾರದ ಕಲೆಕ್ಷನ್  'ಪಠಾಣ್' ಮತ್ತು  ಯಶ್​ ಅಭಿನಯದ 'ಕೆಜಿಎಫ್ 2' (KGF 2) ಚಿತ್ರದ ಎರಡನೇ ವಾರದ ಕಲೆಕ್ಷನ್  ಹಿಂದಿಕ್ಕಿದೆ ಎಂದು ಸದ್ಯದ ವರದಿ ಹೇಳುತ್ತಿದೆ.
 
ವಿವಿಧ ಕ್ಷೇತ್ರಗಳ ಅಪ್​ಡೇಟ್ಸ್​ ನೀಡುವ Sacnilk Technologies Pvt. Ltd. ನೀಡಿರುವ ಸದ್ಯದ ವರದಿಯ ಪ್ರಕಾರ, ದಿ ಕೇರಳ ಸ್ಟೋರಿ ಪಠಾಣ್​ (Pathaan) ಮತ್ತು ಕೆಜಿಎಫ್​ 2ನ ಎರಡನೆಯ ವಾರದ ಕಲೆಕ್ಷನ್​ ಹಿಂದಿಕ್ಕಿದೆ.  ಈ ವರದಿಯ ಪ್ರಕಾರ, ಕೆಜಿಎಫ್ 2 ಮತ್ತು ಪಠಾಣ್ ಚಿತ್ರವು ಅದರ ಎರಡನೇ ಸೋಮವಾರ ಒಂದೇ ಅಂಕೆಯ ಆದಾಯ ಗಳಿಸಿತ್ತು. ಆದರೆ ದಿ ಕೇರಳ ಸ್ಟೋರಿ ಎರಡು ಅಂಕಿಯ ಆದಾಯ ಗಳಿಸಿದೆ.  ಬಾಕ್ಸ್ ಆಫೀಸ್​ನಲ್ಲಿ (Box Office) ಕೆಜಿಎಫ್ 2 ಎರಡನೇ ಸೋಮವಾರದಂದು 8.28 ಕೋಟಿ ಗಳಿಸಿದ್ದರೆ 'ಪಠಾಣ್' 8.25 ಕೋಟಿ ಗಳಿಸಿತ್ತು.  ಆದರೆ 'ದಿ ಕೇರಳ ಸ್ಟೋರಿ' 10.3 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ಹೇಳಿದೆ. 

The Kerala Story ನೋಡಿದ ಮುಸ್ಲಿಂ ಪತಿ ರಿಯಾಕ್ಷನ್​ ಹೀಗಿತ್ತು ಎಂದ ನಟಿ ದೇವೋಲೀನಾ

Tap to resize

Latest Videos

 ಸುದೀಪ್ತೋ ಸೇನ್ (Sudipto Sen) ನಿರ್ದೇಶನದ ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸುದ್ದಿಯಾಗಿದೆ.  ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ನಿಷೇಧ ಹೇರಲಾಗಿದೆ. ಈ ಸಿನಿಮಾ ನೋಡಿ ಎಂದವರ ಮೇಲೆ ಹಲ್ಲೆ ನಡೆದಿದೆ. ನಾವೇನು ಬ್ಯಾನ್​ ಮಾಡಲಿಲ್ಲ, ಜನರೇ ಸಿನಿಮಾ ನೋಡಲು ಬರುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಟೇಟ್​ಮೆಂಟ್​ ಅನ್ನೂ ಕೊಟ್ಟಿದ್ದಾರೆ. ಅದೇ ಇನ್ನೊಂದೆಡೆ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವ ಕೆಲವು ರಾಜ್ಯಗಳಲ್ಲಿ ಈ ಚಿತ್ರಕ್ಕೆ ವಿನಾಯಿತಿ ಘೋಷಿಸಲಾಗಿದೆ. ಮಧ್ಯಪ್ರದೇಶ ಉತ್ತರ ಪ್ರದೇಶದಲ್ಲೂ ತೆರಿಗೆ ಮುಕ್ತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ಕೆಲವು ಥಿಯೇಟರ್​ಗಳಲ್ಲಿ ನಿಗದಿತ ಸಮಯದಲ್ಲಿ ಉಚಿತ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇವೆಲ್ಲವುಗಳ ಮಧ್ಯೆಯೇ ದಿ ಕೇರಳ ಸ್ಟೋರಿ ದಾಖಲೆಯತ್ತ ದಾಪುಗಾಲು ಹಾಕುತ್ತಿದೆ. 

ಅಧಿಕೃತ ಟ್ರೆಂಡ್‌ಗಳ ಪ್ರಕಾರ, ಚಿತ್ರದ 11 ದಿನಗಳಿಗೆ ಹೋಲಿಸಿದರೆ 12 ದಿನಗಳು ಸ್ವಲ್ಪ ದುರ್ಬಲವಾಗಿದೆ, ಬಾಕ್ಸ್ ಆಫೀಸ್‌ನ 12 ನೇ ದಿನದಂದು 'ದಿ ಕೇರಳ ಸ್ಟೋರಿ' 9.80 ಕೋಟಿ ಗಳಿಸಿದೆ. ಇದರೊಂದಿಗೆ ಚಿತ್ರವು ಇದುವರೆಗೆ ಬಾಕ್ಸ್ ಆಫೀಸ್‌ನಲ್ಲಿ 156.84 ಕೋಟಿ ರೂಪಾಯಿ ಗಳಿಸಿದೆ ಎಂದು  ಬಾಕ್ಸ್ ಆಫೀಸ್ ಇಂಡಿಯಾ ಹೇಳಿದೆ.  ಚಿತ್ರವು ತನ್ನ ಎರಡನೇ ವಾರದಲ್ಲಿ ಚೆನ್ನಾಗಿ ಜಿಗಿತ ಕಂಡಿದೆ.  ವರದಿಗಳು ಸೂಚಿಸುವಂತೆ 'ಕೇರಳ ಸ್ಟೋರಿ' ಪ್ರತಿನಿತ್ಯ 'ದಿ ಕಾಶ್ಮೀರ್ ಫೈಲ್ಸ್' ಗಿಂತ ಕಡಿಮೆ ಸಂಗ್ರಹಿಸುತ್ತಿದೆ, ಆದರೆ ಎರಡನೇ ವಾರದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ವೇಗ ಕಡಿಮೆಯಾಗಿತ್ತು. ದಿ ಕೇರಳ ಸ್ಟೋರಿ ಏರುಗತಿಯಲ್ಲಿ ಸಾಗುತ್ತಿದೆ.  ಇದೇ ರೀತಿ ಇದ್ದರೆ ಎರಡನೇ ವಾರದ ಅಂತ್ಯಕ್ಕೆ 200 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

click me!