3 ತಿಂಗಳಲ್ಲಿ 3 ಲಕ್ಷ ಟ್ರಾನ್ಸ್‌ಫರ್‌; ಶ್ರೀಜಾನ್‌ ಡ್ರಗ್ಸ್‌ ವ್ಯಸನಿ ಎಂದು ಆರೋಪ ಮಾಡಿದ ತನಿಷಾ ತಾಯಿ

By Vaishnavi Chandrashekar  |  First Published Jan 9, 2023, 11:30 AM IST

ಡಿಸೆಂಬರ್‌ 25ರಂದ ಜೈಲಿನಲ್ಲಿರುವ ಕಿರುತೆರೆ ನಟಿ ಶ್ರೀಜಾನ್. ದಿನಕ್ಕೊಂದು ಆರೋಪ ಮಾಡುತ್ತಿರುವ ಕುಟುಂಬಸ್ಥರು....
 


ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಡಿಸೆಂಬರ್ 25ರಂದು ಚಿತ್ರೀಕರಣ ಮಾಡುತ್ತಿದ್ದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀಜಾನ್ ಕುಟುಂಬ ಪ್ರೆಸ್‌ಮೀಟ್‌ ಹಮ್ಮಿಕೊಳ್ಳು ಮೂಲಕ ತುನಿಷಾ ಸಾವಿನ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು. ಆದರೆ ಅವರ ಹೇಳಿಕೆಗಳಲ್ಲಿ ಹಲವಾರು ಆರೋಪಗಳು ವೈರಲ್ ಅಗುತ್ತಿದೆ. ಕೆಲವೊಂದು ಸತ್ಯ ಕೆಲವೊಂದು ಸುಳ್ಳುಗಳ ಬಗ್ಗೆ ತುನಿಷಾ ತಾಯಿ ವನಿತಾ ಶರ್ಮಾ ಕ್ಲಾರಿಟಿ ಕೊಟ್ಟಿದ್ದಾರೆ. ಶ್ರೀಜಾನ್ ಡ್ರಗ್ಸ್‌ ಸೇವಿಸುತ್ತಿದ್ದದ್ದು ನಿಜವೇ?

ತುನಿಷಾ ಶರ್ಮಾ ತಾಯಿ ವನಿತಾ ಶರ್ಮ ಕೊಡುತ್ತಿದ್ದ ಕಾಟದಿಂದ ಬಾಲ್ಯದಲ್ಲಿ ತುಂಬಾ ನೋವು ಅನುಭವಿಸಿ ಖಿನ್ನಗೆ ಎದುರಿಸುತ್ತಿರುವುದು ಎಂದು ಮಾಧ್ಯಮಗಳಲ್ಲಿ ಶ್ರೀಜಾನ್ ಕುಟುಂಬ ಹೇಳಿಕೆ ನೀಡಿತ್ತು. ಇದೆಲ್ಲಾ ತಪ್ಪು ಎಂದು ಸೋಮವಾರ ವನಿತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಸುಮಾರು ಮೂರು ತಿಂಗಳಲ್ಲಿ ತುನಿಷಾಗೆ ನಾನು 3 ಲಕ್ಷ ರೂಪಾಯಿ ಹಣವನ್ನು ಕೊಟ್ಟಿರುವೆ. ಆಕೆ ಬಳಿ ಹಣ ಕಡಿಮೆ ಇರಲಿಲ್ಲ. ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಳು ಎಲ್ಲವೂ ಸಿಗುತ್ತಿತ್ತು. ಆನಂತರ ಸ್ನೇಹಿತರ ಬಳಿಯೂ ಹಣ ತೆಗೆದುಕೊಳ್ಳುತ್ತಿದ್ದಳು. ನನ್ನ ಪ್ರಕಾರ ಶ್ರೀಜಾನ್ ಡ್ರೆಗ್ಸ್‌ ತೆಗೆದುಕೊಳ್ಳುತ್ತಿದ್ದ ಆ ಹಣದ ಬಾರವನ್ನು ತುನಿಷಾ ಮೇಲೆ ಹಾಕುತ್ತಿದ್ದ ಅನಿಸುತ್ತದೆ. ಆತನ ಕಾರು ಕೆಟ್ಟಿತ್ತು ಸುಮಾರು ತಿಂಗಳು ನನ್ನ ಕಾರು ಬಳಸುತ್ತಿದ್ದ' ಎಂದು ತುನಿಷಾ ತಾಯಿ ಹೇಳಿಕೆ ನೀಡಿದ್ದಾರೆ. ಈ ಸಮಯದಲ್ಲಿ ಡಿಸೆಂಬರ್ 21ರಂದು ತುನಿಷಾ ಕಳುಹಿಸಿದ ವಾಯ್ಸ್‌ ನೋಟ್‌ನ ಪ್ರಸಾರ ಮಾಡಿದ್ದಾರೆ. ಸಂಪೂರ್ಣ ವಿಡಿಯೋ ಕೇಳಿಸಿಲ್ಲ ಅದರಿಂದ 'ನಾವು ಪರ್ಫೆಕ್ಟ್‌ ರಿಲೇಷನ್‌ಶಿಪ್‌ ಶೇರ್ ಮಾಡುತ್ತೀವಿ. ಶ್ರೀಜಾನ್ ತಾಯಿಗೆ ನನ್ನನ್ನು ಹಾಗೆ ಕರೆಯುವಂತಿಲ್ಲ. ನನ್ನ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ' ಎಂದಷ್ಟೇ ಕೇಳಿಸಿರುವುದು. 

Tap to resize

Latest Videos

ವನಿತಾ ಶರ್ಮಾ ಮಗಳಿಗೆ ಒಂದು ರೂಪಾಯಿ ಹಣವೂ ನೀಡುತ್ತಿರಲಿಲ್ಲ. ಕೇವಲ 500 ರೂಪಾಯಿ ಬೇಕಿದ್ದರೂ ತುಂಬಾ ಕಾಡಿ ಬೇಡಿ ಪಡೆಯುತ್ತಿದ್ದರು. ಆಕೆ ಜೀವನದ ನೆಮ್ಮದಿ ಹಾಳಾಗಿರುವುದು ತಾಯಿಯಿಂದಲೇ ಸಮಸ್ಯೆ ಎದುರಿಸಿದ್ದಾಳೆ.ಬಾಲ್ಯದಿಂದಲ್ಲೂ ನೆಮ್ಮದಿ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇದಕ್ಕೆ ಶ್ರೀಜಾನ್ ಕಾರಣ ಅಲ್ಲ ಎಂದು ಆರೋಪ ಮಾಡಿದ್ದರು. ತುನಿಷಾ ಆತ್ಮಹತ್ಯೆಗೆ ಶ್ರೀಜಾನ್ ಕಾರಣ ಎಂದು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. 

ಶ್ರೀಜಾನ್ ಮತ್ತೊಬ್ಬಳ ಜೊತೆ ಸಂಬಂಧ ಹೊಂದಿದ್ದರು ತುನಿಷಾಗೆ ವಿಚಾರ ತಿಳಿಯುತ್ತಿದ್ದಂತೆ ಬ್ರೇಕಪ್ ಮಾಡಿಕೊಂಡರು. ತುನಿಷಾ ಹಿಂದು ಮತ್ತು ಶ್ರೀಜಾನ್ ಮುಸ್ಲಿಂ ಆಗಿರುವ ಕಾರಣ ಇಬ್ಬರೂ ಜಾತಿಗಳ ಬಗ್ಗೆ ಹೆದರಿಕೊಂಡು ದೂರವಾದ್ದರು ಎಂದು ವನಿತಾ ಶರ್ಮಾ ಹೇಳಿದ್ದರು. ದಿನಕ್ಕೊಂದು ತಿರುವು ಸಿಗುತ್ತಿದೆ ಹೀಗಾಗಿ ಪೊಲೀಸರು ತನಿಖೆ ಸ್ಟ್ರಾಂಗ್ ಮಾಡಿದ್ದಾರೆ.

250 ಪೇಜ್‌ ವಾಟ್ಸಪ್ ಮೆಸೇಜ್ ಲೀಕ್:

ತುನಿಷಾ ಶರ್ಮಾ ಬಳಸುತ್ತಿದ್ದ ಫೋನ್‌ನ ಪೊಲೀಸರು ವಶಕ್ಕೆ ಪಡೆದುಕೊಂಡು ವಾಟ್ಸಪ್‌ ಚಾಟ್‌ ಚೆಕ್‌ ಮಾಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 250 ಪೇಜ್‌ನಷ್ಟು ಮೆಸೇಜ್‌ನಲ್ಲಿ ತೆಗೆಯಲಾಗಿದೆ ಅದರಲ್ಲಿ 25 ಪೇಜ್‌ನಷ್ಟು ಮೆಸೇಜ್‌ನ ಡಿಲೀಟ್ ಮಾಡಲಾಗಿದೆ. ಇದೆಲ್ಲಾ ಒಂದಾದರೆ ಮತ್ತೊಂದು ಟ್ವಿಸ್ಟ್‌ ವಿಡಿಯೋ ಕಾಲ್. ತುನಿಷಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷಗಳ ಕಾಲ ಮಾಜಿ ಬಾಯ್‌ಫ್ರೆಂಡ್‌ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ.

ತಾಯಿಯೇ ತುನಿಷಾ ಹತ್ಯೆಗೆ ಯತ್ನಿಸಿದ್ದಳು: ಶೀಜಾನ್ ಕುಟುಂಬ ಆರೋಪ

ಲವ್ ಸ್ಟೋರಿ?

ಜೋಧಾ ಅಕ್ಬರ್ ಸಿನಿಮಾದಲ್ಲಿ ಅಕ್ಬರ್‌ ಪಾತ್ರದಲ್ಲಿ ಶ್ರೀಜಾನ್ ಅಭಿನಯಿಸಿದ ನಂತರ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಹಿಂದಿ ಕಿರುತೆರೆಗೆ ಕಾಲಿಡುತ್ತಾರೆ. Ali Baba Daastan E Kabul ಧಾರಾವಾಹಿಯಲ್ಲಿ ತುನಿಷಾ ಜೊತೆ ಅಭಿನಯಿಸುತ್ತಾರೆ. ಇಬ್ಬರು ಮೊದಲ ಭೇಟಿ ಆಗಿದ್ದು ಇದೇ ಸೆಟ್‌ನಲ್ಲಿ. ಕೋ-ಸ್ಟಾರ್‌ಗಳಾಗಿ ಬೆಸ್ಟ್‌ ಫ್ರೆಂಡ್ಸ್‌ ಆಗುತ್ತಾರೆ. ಲಡಾಖ್‌ನಲ್ಲೂ ಬಹು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು ಅಲ್ಲಿಂದ ಇಬ್ಬರೂ ಡೇಟಿಂಗ್ ಮಾಡಲು ಶುರು ಮಾಡಿದ್ದರು ಎನ್ನಲಾಗಿದೆ. ಲಡಾಖ್‌ನಿಂದ ಮುಂಬೈಗೆ ಬಂದ ನಂತರ ಶ್ರೀಜಾನ್‌ ಕುಟುಂಬವನ್ನು ತುನಿಷಾ ಭೇಟಿ ಮಾಡುತ್ತಾರೆ ಹಾಗೂ ತುಂಬಾ ಕ್ಲೋಸ್ ಅಗುತ್ತಾರೆ. ಹೀಗೆ ಎಲ್ಲರು ಹೇಳುವ ಪ್ರಕಾರ ತುನಿಷಾ ಒಮ್ಮೆ ಹಿಜಾಬ್‌ನೂ ಧರಿಸಿದ್ದರಂತೆ. ಅಲ್ಲಿಂದ ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಪಬ್ಲಿಕ್ ಅಗಿತ್ತು.

click me!