ರತನ್ ಟಾಟಾ ನಿರ್ಮಿಸಿದ್ದ ಮೊದಲ ಚಿತ್ರವೇ ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾ ಆಯ್ತು!

By Mahmad Rafik  |  First Published Sep 28, 2024, 1:01 PM IST

ಮೊದಲ ಚಿತ್ರದಲ್ಲಿ ನಷ್ಟ ಅನುಭವಿಸಿದ ಉದ್ಯಮಿ ರತನ್ ಟಾಟಾ ಮತ್ತೆ ಯಾವುದೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲಿಲ್ಲ. ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು.


ಮುಂಬೈ: ಬ್ಯುಸಿನೆಸ್ ಐಕಾನ್ ರತನ್ ಟಾಟಾ ಯಾವುದೇ ವಲಯಕ್ಕೂ ಕಾಲಿಟ್ಟರೂ ಯುಶಸ್ಸು ಎಂಬ ಮಾತಿದೆ. ತಮ್ಮದೇ ಬ್ಯುಸಿನೆಸ್ ಸ್ಟ್ರಾಟಜಿ ಮೂಲಕ ಮಾರುಕಟ್ಟೆಯಲ್ಲಿ  ಗಗನದೆತ್ತರಕ್ಕೆ ಬೆಳೆದಿರುವ ರತನ್ ಟಾಟಾ ಬಣ್ಣದ ಲೋಕಕ್ಕೂ ಪ್ರವೇಶಿಸಿದ್ದರು. ರತನ್ ಟಾಟಾ ಬಾಲಿವುಡ್ ಚಿತ್ರವೊಂದನ್ನು ಸಹ ನಿರ್ಮಿಸಿದ್ದಾರೆ. ಆದ್ರೆ ಈ ಚಿತ್ರ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸಂಪೂರ್ಣ ವಿಫಲವಾಗಿತ್ತು. ರತನ್ ಟಾಟಾ ಬಂಡವಾಳ ಹೂಡಿಕೆ ಮಾಡಿ ನಿರ್ಮಿಸಿದ್ದ ಚಿತ್ರ ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾಗಳಲ್ಲಿ ಒಂದಾಗಿದೆ. ಐತ್‌ಬಾರ್ (Aetbaar) ರತನ್ ಟಾಟಾ ನಿರ್ಮಿಸಿದ ಬಾಲಿವುಡ್ ಸಿನಿಮಾ.

2004ರಲ್ಲಿ ಬಿಡುಗಡೆಯಾಗಿದ್ದ ಐತ್‌ಬಾರ್, ರೊಮ್ಯಾಂಟಿಕ್ ಸೈಕಾಲಿಜಿಕಲ್ ಥ್ರಿಲ್ಲರ್ ಕಥೆ ಹೊಂದಿದ್ದು, ನಿರ್ದೇಶಕ ವಿಕ್ರಮ್ ಭಟ್ ಆಕ್ಷನ್ ಕಟ್ ಹೇಳಿದ್ದರು. ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಐತ್‌ಬಾರ್ ಸಿನಿಮಾ ನಿರ್ಮಾಣವಾಗಿತ್ತು. ಅತಿದೊಡ್ಡ ಬಜೆಟ್ ಹೊಂದಿದ್ದರೂ ಸಿನಿಮಾ ಪ್ರೇಕ್ಷಕರನ್ನು ತಲುಪವಲ್ಲಿ ಯಶಸ್ವಿಯಾಗಲಿಲ್ಲ. ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್, ಬಿಪಾಶ ಬಸು ಮತ್ತು ಜಾನ್ ಅಬ್ರಾಹಂ ಲೀಡ್‌ ರೋಲ್‌ನಲ್ಲಿ ನಟಿಸಿದ್ದರು. ದೊಡ್ಡ ತಾರಾಗಣವನ್ನು ಹೊಂದಿದ್ದರೂ, ರೊಮ್ಯಾಂಟಿಕ್ ಸೈಕಾಲಿಜಿಕಲ್ ಥ್ರಿಲ್ಲರ್ ಕಥೆ ಐತ್‌ಬಾರ್ ಸೋಲಿನ ಪಟ್ಟಿಗೆ ಸೇರ್ಪಡೆಯಾಯ್ತು.

Latest Videos

undefined

 

1996ರಲ್ಲಿ ಬಿಡುಗಡೆಯಾಗಿದ್ದ ಅಮೆರಿಕನ್ ಸಿನಿಮಾದ "ಫಿಯರ್" ಕಥೆಯಿಂದ ಸ್ಪೂರ್ತಿ ಪಡೆದು ಬಾಲಿವುಡ್‌ನಲ್ಲಿ ಐತ್‌ಬಾರ್ ತೆರೆ ಮೇಲೆ ಬಂದಿತ್ತು. ಸೈಕೋಪಾತಿಕ್ ಲವರ್‌ನಿಂದ ಮಗಳನ್ನು ತಂದೆ ರಕ್ಷಿಸೋದು ಸಿನಿಮಾದ ಒನ್ ಲೈನ್ ಕಥೆ. ಡಾ.ರಣ್‌ವೀರ್ ಮಲ್ಹೋತ್ರಾ ಪಾತ್ರದಲ್ಲಿ ಅಮಿತಾಬ್ ಬಚ್ಚನ್, ಮಗಳು ರಿಯಾ ಮಲ್ಹೋತ್ರಾಳಾಗಿ ಬಿಪಾಶಾ ಬಸು ಮತ್ತು ಸೈಕೋ ಲವರ್‌ನಾಗಿ ಜಾನ್ ಅಬ್ರಾಹಂ ನಟಿಸಿದ್ದರು. ಇನ್ನು ಆರ್ಯನ್ ತ್ರಿವೇದಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಬಹು ನಿರೀಕ್ಷೆಯಿಂದ ಸಿನಿಮಾ ನಿರ್ಮಾಣ ಮಾಡಿದ್ದ ಟಾಟಾ ಸಂಸ್ಥೆ ಸಂಪೂರ್ಣ ನಿರಾಶೆಯುಂಟಾಗಿತ್ತು. ಬಿಡುಗಡೆಯಾದ ಬೆರಳಣಿಕೆ ದಿನಗಳಲ್ಲಿಯೇ ಥಿಯೇಟರ್‌ನಿಂದ ಚಿತ್ರ ಹೊರ ಬಂದಿತ್ತು. 

ಕೆಲ ಮಾಧ್ಯಮಗಳ ವರದಿ ಪ್ರಕಾರ, ಭಾರತದಲ್ಲಿ 4.25 ಕೋಟಿ, ವಿಶ್ವದದ್ಯಾಂತ 7.96 ಕೋಟಿ ರೂಪಾಯಿ ಹಣ ಗಳಿಸಿತ್ತು. ಬಾಲಿವುಡ್ ಅತಿದೊಡ್ಡ ಫ್ಲಾಪ್ ಎಂಬ ಕೆಟ್ಟ ದಾಖಲೆಯನ್ನು ಐತ್‌ಬಾರ್ ಹೊಂದಿದ್ದು, ಇದು 9.50 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿತ್ತು. ಈ ಸಿನಿಮಾ ಸೋಲಿನಿಂದ ರತನ್ ಟಾಟಾ ಮತ್ತೆ ಯಾವುದೇ ಚಿತ್ರದ ನಿರ್ಮಾಣಕ್ಕೆ ಮುಂದಾಗಲಿಲ್ಲ.

20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

click me!