140 ಕೋಟಿ ಕಲೆಕ್ಷನ್ ಮಾಡಿದ 'ದೇವರ' ಸಿನಿಮಾ; ಡಬಲ್ ರೂಲ್‌ ಮಾಡಿ ಎಡವಟ್ಟು ಮಾಡ್ಕೊಂಡ್ರಾ ಜೂ.NTR?

By Vaishnavi ChandrashekarFirst Published Sep 28, 2024, 1:26 PM IST
Highlights

ಬಿಗ್ ಬಜೆಟ್ ಸಿನಿಮಾ ಮಾಡಲು ಹೋಗಿ ಕಥೆಗೆ ಪ್ರಾಮುಖ್ಯತೆ ಕೊಡಲಿಲ್ವಾ ಎನ್‌ಟಿಆರ್‌? ರೊಚ್ಚಿಗೆದ್ದ ಜನರು ಈಗ ಸೈಲೆಂಟ್ ಆಗಿರುವುದು ಯಾಕೆ? 

ಜ್ಯನಿಯರ್ ಎನ್‌ಟಿಆರ್‌, ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರ ಬಳಗ ಹೊಂದಿರುವ ದೇವರ ಭಾಗ 1 ಸಿನಿಮಾ ರಿಲೀಸ್ ಆಗಿದೆ. ಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಲಿಸ್ಟ್‌ಗೆ ಸೇರುವ 'ದೇವರ'ಗೆ ಆಕ್ಷನ್ ಕಟ್ ಹೇಳಿರುವುದು ಕೊರಟಾಲ್ ಶಿವ ಹಾಗೂ ಬಂಡವಾಳ ಹಾಕಿರುವುದು ಯುವಸುಧಾ ಆರ್ಟ್ಸ್‌ ಮತ್ತು ಎನ್‌ಟಿಆರ್ ಅರ್ಟ್ಸ್‌. ಹೈದರಾಬಾದ್, ಶಮ್ಸದಬಾದ್, ವಿಶಾಕಾಪಟ್ಟಣಂ, ಗೋವಾ ಮತ್ತು ಥೈಲ್ಯಾಂಡ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಮ್ಯಾಚಿಕಲ್ ಮ್ಯೂಸಿಕ್ ಸಂಪೂಸರ್ ಅನಿರುದ್ಧ ರವಿಚಂದ್ರನ್ ಸಂಗೀತ ಮಾಡಿದ್ದಾರೆ. 

ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಗೆ ಸೇರಿರುವ ನಾಲ್ಕು ಪುಟ್ಟ ಹಳ್ಳಿಗಳಲ್ಲಿ ಇರುವ ಬುಡಕಟ್ಟು ಮಂದಿಯ ಪೂರ್ವಿಕರು ಬ್ರಿಟಿಷರನ್ನು ಒದ್ದು ಓಡಿಸಿರುವವರು. ಈ ಪರಂಪರೆಗೆ ಸೇರಿದ ಕಡಲ್ಗಳ್ಳರಲ್ಲಿ ದೇವರ ಅಂದ್ರೆ ಜೂನಿಯರ್ ಎನ್‌ಟಿಆರ್‌ ಕೂಡ ಒಬ್ಬರು. ಈ ಜನರ ಕೆಲಸ ಏನೆಂದರೆ ಸರಕು ಸಾಗಾಣಿಕೆಯನ್ನು ಮಾಡುವುದು, ಸಮುದ್ರದ ನಡುವೆಯೇ ದೋಚುತ್ತಾರೆ. ತಾವು ಮಾಡುತ್ತಿರುವುದು ಮಹಾ ಅಪರಾಧ ಅನ್ನೋದು ದೇವರನಿಗೆ ಅರ್ಥವಾದರೂ ಆ ಊರಿನಲ್ಲಿ ಇದ್ದ ಭೈರ ಅಂದ್ರೆ ಸೈಫ್‌ ಅಲಿ ಖಾನ್‌ಗೆ ಅರ್ಥವಾಗುವುದಿಲ್ಲ. ಹೀಗಾಗಿ ಇಲ್ಲಿನ ಜನರು ಮೀನು ಹಿಡಿಯಲು ಮಾತ್ರ ಸಮುದ್ರಕ್ಕೆ ಇಳಿಯಬೇಕು ಎಂದು ರೂಲ್ಸ್ ಮಾಡುತ್ತಾನೆ ದೇವರ. ರೂಲ್ಸ್ ಮಾಡಿದ ಬೆನ್ನಲೆ ದೇವರ ಕಾಣೆಯಾಗುತ್ತಾನೆ. ದೇವರ ಮಗ ಎನ್‌ಟಿಆರ್‌ ಬೆಳೆದು ದೊಡ್ಡವನಾಗುತ್ತಾನೆ ಆದರೆ ತಂದೆಯಂತೆ ಇರುವುದಿಲ್ಲ. ಇಲ್ಲಿಂದ ಚಿತ್ರದ ಕಥೆ ಇಂಟ್ರೆಸ್ಟಿಂಗ್ ಆಗಿದೆ...ಯಾಕೆ ದೇವರ ಕಾಣೆಯಾಗುತ್ತಾನೆ? ಮಗ ಪರಂಪರೆಯನ್ನು ಮುಂದುವರೆಸುತ್ತಾನಾ? ದೇವರ ಮತ್ತು ಭೈರ ನಡುವೆ ಇದ್ದ ಮನಸ್ಥಾಪಕ್ಕೆ ಮಗ ನೋವು ಅನುಭಿಸುತ್ತಾನಾ? ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತದೆ. 

Latest Videos

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ 'ರಾಮಚಾರಿ' ನಟಿ ಅಂಜಲಿ ಸುಧಾಕರ್; ವಯಸ್ಸಿನ್ನು 30 ಎಂದು ನೆಟ್ಟಿಗರು ಕಾಮೆಂಟ್!

ಆರ್‌ಆರ್‌ಆರ್‌ ಸಿನಿಮಾ ನಂತರ ರಿಲೀಸ್ ಆಗಿರುವ ಎನ್‌ಟಿಆರ್‌ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇವರ ಮತ್ತು ವರದ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಅಲ್ಲದೆ ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿರುವುದು ಆಕ್ಷನ್ ಸೀನ್‌ಗಳು. ಮಾಸ್ ಲುಕ್ ಹಾಗೂ ಆಕ್ಷನ್ ಸೀನ್‌ ಜನರ ಗಮನ ಸೆಳೆದಿದೆ. ಆದರೆ ಅಲ್ಲಲ್ಲಿ ಚಿತ್ರದ ಕತೆ ಹಿಡಿತ ತಪ್ಪಿದೆ ಅನ್ನೋದು ಸಿನಿ ರಸಿದರ ಮಾತು. ಓಪನಿಂಗ್ ಸೀನ್‌ನಲ್ಲಿ ತುಂಬಾ ಎಳೆದಿದ್ದಾರೆ ಸಮಯ ವ್ಯರ್ಥವಾಗಿದೆ ಅಂತಾರೆ, ಇಂಟರ್ವಲ್‌ ನಂತರ ದೇವರ ಎರಡನೇ ಭಾಗ ಮಾಡುವ ಅಗತ್ಯವಿಲ್ಲ ಅಂತಲೂ ಅನೇಕರು ಹೇಳಿದ್ದಾರೆ. 

ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ ಪ್ರತಿಯೊಂದಕ್ಕೂ ಕಷ್ಟ ಪಟ್ಟಿದ್ದೀನಿ: ನಟಿ ರಕ್ಷಿತಾ ಪ್ರೇಮ್

ಮಿಶ್ರ ಅಭಿಪ್ರಾಯ ಪಡೆದಿರುವ ದೇವರ ಸಿನಿಮಾ ಮೊದಲ ದಿನವೇ  ವರ್ಲ್ಡ್‌ ವೈಡ್ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರ್ನಾಲ್ಕು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿರುವ ಕಾರಣ...ಇದು 77 ಕೋಟಿ ರೂಪಾಯಿ ಕಲೆಕ್ಷನ್ ಮುಟ್ಟಿಸಲು ಸಹಾಯ ಮಾಡಿದೆ. ತೆಲುಗು ಭಾಷೆಯಲ್ಲಿ 68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

 

click me!